- Friday
- August 21st, 2026
ನಡುಗಲ್ಲು ಹರಿಹರಪಲ್ಲತ್ತಡ್ಕ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಂಚಾರಕ್ಕೆ ಅಡಚಣೆಯಾಗಿದ್ದು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕರ್ನಾಟಕದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರವಾಗಿರುವ ನೀನಾಸಂ ನ 2022-23 ನೇ ಸಾಲಿನ ರಂಗಪದವಿ ವಿದ್ಯಾರ್ಥಿನಿಯಾಗಿ, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯದ ಪ್ರತಿಭೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಡೆಸಿದ ರಂಗ ಪಯಣದ ಸಾಹೇಬ್ರು ಬಂದವೇ ನಾಟಕದ ಮುಖ್ಯ ನಟಿ ಕುಮಾರಿ ಮಮತಾ ಕಲ್ಮಕಾರು ಇವರು ಆಯ್ಕೆ ಆಗಿರುತ್ತಾರೆ.ಮಮತಾರವರು ಅರೆಭಾಷೆ...
ಚೆಂಬು, ಸಂಪಾಜೆ ಗೂನಡ್ಕ, ತೊಡಿಕಾನ ಸೇರಿದಂತೆ ವಿವಿಧೆಡೆ ಇಂದು ರಾತ್ರಿ 8.28 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ
ಕೊಲ್ಲಮೊಗ್ರ ಗ್ರಾಮದ ತೋಟದಮಜಲು ಎಂಬಲ್ಲಿ ವ್ಯಕ್ತಿಯೊರ್ವರಿಗೆ ಅಪರಿಚಿತನೋರ್ವ ಚೂರಿ ಇರಿದ ಘಟನೆ ವರದಿಯಾಗಿದೆ. ತೋಟದಮಜಲಿನಲ್ಲಿ ಕಳೆದ 10 ವರ್ಷಗಳಿಂದ ನೆಲೆಸಿದ್ದ ಲೂಕೋಸ್ ಎಂಬವರು ಚೂರಿ ಇರಿತದಿಂದ ಗಾಯಗೊಂಡ ವ್ಯಕ್ತಿ. ದೇಹದ 5 ಕಡೆ ಚೂರಿ ಇರಿತದಿಂದ ಗಾಯಗಳಾಗಿದ್ದು, ಸ್ಥಳೀಯರು ಸುಬ್ರಹ್ಮಣ್ಯ ಪೋಲೀಸರಿಗೆ ಮಾಹಿತಿ ನೀಡಿ ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಸುಳ್ಯದ ರಥಬೀದಿಯ ಸಮುದಾಯ ಭವನದಲ್ಲಿ ಜು. 6 ರಂದು ರೋಟರಿ ಕ್ಲಬ್ ಸುಳ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕುರಿತು ಜು.2 ರಂದು ಪತ್ರಿಕಾ ಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ರೊ. ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಿ, ರೋಟರಿ ಪದಗ್ರಹಣ ಕಾರ್ಯಕ್ರಮವನ್ನು ಪುತ್ತೂರು ರೋಟರಿ ಕ್ಲಬ್ ನ ಅಧ್ಯಕ್ಷರಾಗಿರುವ ರೊ....
ತಾಲೂಕಿನ ವಿವಿಧ ಭಾಗಗಳಲ್ಲಿ ಒಂದು ವಾರದೊಳಗೆ ಐದು ಬಾರಿ ಭೂಕಂಪನದ ಅನುಭವವಾಗಿದ್ದು ಮತ್ತು ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆಯ ಮುನ್ನೆಚ್ಚರಿಕೆಯ ಭಾಗವಾಗಿ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ರೆಸ್ಕ್ಯೂ ತಂಡವನ್ನು ರಚಿಸಲಾಯಿತು.ಇದರ ಭಾಗವಾಗಿ ಸ್ವಯಂ ಸೇವಕರಿಗೆ ತುರ್ತು ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿಸ್ಕೃತವಾಗಿ ತಿಳಿಸಿಕೊಡಲಾಯಿತು. ಹಾಗೂ ಯಾವುದೇ ಸಂದರ್ಭದಲ್ಲೂ ತುರ್ತು...
ಅರಂತೋಡು ಅಡ್ಯಡ್ಕ ಸಮೀಪ ಅಜ್ಜನಗದ್ದೆ ಎಂಬಲ್ಲಿ ಪಿಕಪ್ ವಾಹನ ಪಲ್ಟಿಯಾದ ಘಟನೆ ಇಂದು ನಡೆದಿದೆ. ಹಂದಿ ಸಾಗಿಸುತ್ತಿದ್ದ ವಾಹನವಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಐವರ್ನಾಡಿನಲ್ಲಿ ಸಂಭವಿಸಿದ ವಿದ್ಯುತ್ ದುರಂತವೊಂದರಲ್ಲಿ ನಾಲ್ಕು ವರ್ಷದ ಬಾಲಕ ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ, ರಿಕ್ಷಾ ಡ್ರೈವರ್ ಅಜರ್ ಅವರ ಸಹೋದರಿ ಅಪ್ಸರವರ ಮಗ ಹೈದರ್ ಅಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪ್ರಿಡ್ಜ್ ನ ಮುಟ್ಟಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ.
ಜು. 2 ರಂದು ಸಂಭವಿಸಿದ (6ನೇ ಬಾರಿಗೆ) ಕಂಪನದ ಕೇಂದ್ರ ಬಿಂದು ಸುಳ್ಯ ತಾಲೂಕಿನ ದೊಡ್ಡಕುಮೇರಿ ಎಂದು ದಾಖಲಾಗಿದೆ. ರಿಕ್ಟರ್ ಸ್ಕೇಲ್‌ನಲ್ಲಿ 1.8 ದಾಖಲಾದ ಭೂ ಕಂಪ ಉಂಟಾಗಿದೆ. ದೊಡ್ಡಕುಮೇರಿ ಕೇಂದ್ರ ಬಿಂದುವಿನಿಂದ1.3 ಕಿ.ಮಿ.ವ್ಯಾಪ್ತಿಯಲ್ಲಿ 1 ಗಂಟೆ 21 ನಿಮಿಷ 50 ಸೆಕೆಂಡ್‌ಗೆ ಭೂಮಿ ಕಂಪಿಸಿದೆ. 10 ಕಿ.ಮಿ ಆಳದಲ್ಲಿ ಭೂ ಕಂಪನ ಉಂಟಾಗಿದೆ ಎಂದು...
Loading posts...
All posts loaded
No more posts
