ನ.14 ರಂದು ಊರುಗೋಲು ಕನ್ನಡ ಆಲ್ಬಂ ಗೀತೆ ಬಿಡುಗಡೆ

ನವೆಂಬರ್ 14 ರಂದು ಎಸ್.ಬಿ.ಎಮ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಸಂಜೆ 7:00 ಗಂಟೆಗೆ ಊರುಗೋಲು ಎನ್ನುವ ಕನ್ನಡ ಆಲ್ಬಮ್ ಗೀತೆ ಬಿಡುಗಡೆ ಆಗಲಿದ್ದು, ನವೀನ್.ಎಂ ಪುತ್ತೂರು ಇವರು ಸಾಹಿತ್ಯವನ್ನು ಬರೆದಿದ್ದು, ಹರ್ಷಿತಾ ಬಾಲಸುಬ್ರಹ್ಮಣ್ಯ ಅವರು ಈ ಹಾಡನ್ನು ಹಾಡಿದ್ದಾರೆ. ವಿಶೇಷವಾಗಿ “ನೆನಪಿನ ನಾವಿಕ ಖ್ಯಾತಿಯ ಆರ್.ಜೆ ಪ್ರಸನ್ನ” ಅವರ ಹಿನ್ನೆಲೆ ಧ್ವನಿ ಈ ಹಾಡಿನಲ್ಲಿದೆ.

ಮರಕತ :- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಭೇಟಿ

ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನ.13 ರಂದು ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಭೇಟಿ ನೀಡಿ ದೇವರ ದರುಶನ ಪಡೆದರು.ಸುರೇಶ್ ಕುಮಾರ್ ರವರು ಕ್ಷೇತ್ರಕ್ಕೆ ಎರಡನೇ ಬಾರಿಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಚಂದ್ರಶೇಖರ ಮಾವಿನಕಟ್ಟೆ, ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಕುಮಾರ್ ಚಾರ್ಮತ, ದೀರನ್ ಪರಮಲೆ, ಚಂದ್ರಶೇಖರ...
Ad Widget

ಐವರ್ನಾಡು: ಭಜನೋತ್ಸವ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಾಲೂಕಿನ ಆಯ್ದ ಭಜನಾ ಮಂಡಳಿಗಳಿಂದ ನಡೆದ ಭಜನೋತ್ಸವ - 2022 ಹಾಗೂ ರೂ. 10 ಲಕ್ಷ ಅನುದಾನದಲ್ಲಿ ದೇವಾಲಯದ ಆವರಣದಲ್ಲಿ ಗ್ರಾನೈಟ್ ಅಳವಡಿಕೆಯ ಗುದ್ದಲಿಪೂಜೆ ಅಂಗವಾಗಿ ಆಯೋಜಿಸಿದ ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ...

ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿಯವರಿಗೆ ಸಹಕಾರ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಸರಕಾರ ನೀಡುವ ‘ಸಹಕಾರ ರತ್ನ’ ಪ್ರಶಸ್ತಿಗೆ ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನ.18ರಂದು ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ನಿತ್ಯಾನಂದ‌ ಮುಂಡೋಡಿ ಅವರಿಗೆಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಸಹಕಾರ...

ಐವರ್ನಾಡು :- ತಾಲೂಕಿನ ಆಯ್ದ ಭಜನಾ ಮಂಡಳಿಗಳಿಂದ ಭಜನೋತ್ಸವ -2022

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಇಲ್ಲಿ ಇಂದು(ನ.13) ಪ್ರಾತಃಕಾಲ 6:30 ರಿಂದ ಸೂರ್ಯಾಸ್ತ 5:59 ರವರೆಗೆ ತಾಲೂಕಿನ ಆಯ್ದ ಭಜನಾ ಮಂಡಳಿಗಳಿಂದ ಭಜನೋತ್ಸವ-2022 ಕಾರ್ಯಕ್ರಮ ನಡೆಯಲಿದೆ.

ನ.26 ರಂದು ಸುಳ್ಯದಲ್ಲಿ ಬೃಹತ್ ಉದ್ಯೋಗ ಮೇಳ – 50 ಕ್ಕೂ ಮಿಕ್ಕಿ ಕಂಪೆನಿಗಳು ಭಾಗಿ : ಸಚಿವ ಅಂಗಾರ

ಎಲ್ಲರಿಗೆ ಸರಕಾರಿ ಉದ್ಯೋಗ ಸಿಗುವುದು ಕಷ್ಟ, ಇಂತಹ ಸಂದರ್ಭಗಳಲ್ಲಿ ಯುವಕರು ವಂಚಿತರಾಗಬಾರದೆನ್ನುವ ಉದ್ದೇಶದಿಂದ ಇಂತಹ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗಿದ್ದು ಮಹತ್ವ ಪಡೆಯಲಿದೆ ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಅವರು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿರುವ...

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ನ.19 ರಂದು ಲೋಕಾರ್ಪಣೆ – ಸುಳ್ಯದಿಂದ ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಂಡಿರುವ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ನ.19 ರಂದು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸುಳ್ಯದಿಂದ 10 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಚಂದ್ರ ಕೋಲ್ಚಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಯನ್ನು...

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2022-2ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ (1-10ನೇ ತರಗತಿ) ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಎಸ್ಎಸ್ ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸುಳ್ಯ : ಸಂದೀಪ್ ರಾವ್ ನಿಧನ

ಉದ್ಯಮಿ ಸುಳ್ಯದ ರೂಪ ಬಾರ್ ಮಾಲಕರಾದ ಸುಂದರ ರಾವ್ ರವರ ಪುತ್ರ ಸಂದೀಪ್ ರಾವ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬೆನಕಾ ಕ್ರೀಡಾ ಮತ್ತು ಕಲಾ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಮೃತರು ತಂದೆ,ತಾಯಿ, ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ನ.18 ರಂದು ಸುಬ್ರಹ್ಮಣ್ಯದಲ್ಲಿ ಸ್ವದೇಶಿ ಸಂಸ್ಥೆ ಮೋದಿಕೇರ್ ನಿಂದ ಮಾಹಿತಿ ಕಾರ್ಯಕ್ರಮ

ಪ್ರತಿಷ್ಠಿತ ಸ್ವದೇಶಿ ಸಂಸ್ಥೆಯಾಗಿರುವ ಮೋದಿಕೇರ್ ಸಂಸ್ಥೆಯ ಕಾರ್ಯಚಟುವಟಿಕೆ, ಬೆಳವಣಿಗೆ ಹಾಗೂ ಸ್ವದೇಶಿ ಉತ್ಪನ್ನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನ.18 ರಂದು ಸುಬ್ರಹ್ಮಣ್ಯದ ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಸ್ವದೇಶಿ ಉತ್ಪನ್ನಗಳ ಬಗ್ಗೆ, ಸ್ವ ಉದ್ಯೋಗ ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯದ ಡಿಸ್ಟ್ರಿಬ್ಯೂಟ್ ಪಾಯಿಂಟ್ ನ ಮುರಳೀಕೃಷ್ಣ ಕಾಮತ್ ತಿಳಿಸಿದ್ದಾರೆ. ಹೆಚ್ಚಿನ...
Loading posts...

All posts loaded

No more posts

error: Content is protected !!