- Tuesday
- September 1st, 2026
ಹರಿಹರ ಪಲ್ಲತ್ತಡ್ಕ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯಲ್ಲಿ ಐನೆಕಿದು ಬಳಿ ಇಂದು ಸಂಜೆ ಬರೆ ಕುಸಿದು ಬಿದ್ದಿದೆ. ಬರೆಯಲ್ಲಿದ್ದ ಮರಗಳು ಕೂಡ ರಸ್ತೆಗೆ ಬಿದ್ದು ಸಂಚಾರ ಸ್ಥಗಿತಗೊಂಡಿದೆ.
ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 21 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯೂ ಮುಂದುವರಿಯುವ ಸೂಚನೆಯಿದ್ದು, ಅರೆಂಚ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ, ಸರ್ಕಾರಿ ಅನುದಾನಿತ...
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜು.24 ರಂದು ಹರಿಹರ ಪಲ್ಲತ್ತಡ್ಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹತ್ತಿರ ಬರೆ ಕುಸಿದ ಘಟನೆ ವರದಿಯಾಗಿದೆ.
ಅಜ್ಜಾವರ ಗ್ರಾಮದ ದೊಡ್ಡೇರಿ ಬಸವನಪಾದೆ ನಿವಾಸಿ ಬಾಬು ಎಂಬುವವರ ಮನೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿತಗೊಂಡಿದೆ. ಮನೆಯ ಒಂದು ಭಾಗ ಧರಾಶಾಹಿಯಾಗಿದೆ. ಕಳೆದ ಭಾರಿ ಕೂಡ ಇವರ ಮನೆಗೆ ಹಾನಿಯಾಗಿತ್ತು. ಗ್ರಾಮ ಪಂಚಾಯತ್ ನಿಂದ ಹತ್ತು ಸಾವಿರ ಸಹಾಯಧನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಇದೀಗ ಸದ್ಯ ಮನೆಗೆ ಟಾರ್ಪಲ್ ಹೊದಿಕೆ ಅಳವಡಿಸಲಾಗಿದೆ...
ಸುಳ್ಯ ನಗರದ ಹೃದಯ ಭಾಗವಾದ ಚೆನ್ನಕೇಶವ ದೇವರಕಟ್ಟೆಯ ಬಳಿಯ ತಾಹಿರಾ ಟೆಕ್ಸ್ ಟೈಲ್ಸ್ ಎದುರು ರಸ್ತೆಯ ಬದಿ ಬೃಹತ್ ಗುಂಡಿ ನಿರ್ಮಾಣವಾಗಿದೆ. ಪಾದಚಾರಿಗಳು ನಡೆದಾಡುವಲ್ಲೆ ಗುಂಡಿ ಬಾಯ್ದೆರೆದು ಕಾದು ಕುಳಿತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ವಾರದ ಹಿಂದೆ ನಿರ್ಮಾಣವಾಗಿರುವ ಗುಂಡಿಯನ್ನು ಮುಚ್ಚುವ ಕೆಲಸಕ್ಕೆ ಇನ್ನಾದರೂ ಕೈ ಹಾಕುವರೇ ಎಂದು ಕಾದುನೋಡಬೇಕಿದೆ.
ಸೋಮವಾರ ಬೆಳಗ್ಗಿನಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.24ರಂದು ಮತ್ತು 25 ಬೆಳಿಗ್ಗೆ ವರೆಗೆ ಭಾರೀ ಮಳೆ ಮುಂದುವರಿಯುವ ಸೂಚನೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ...
ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ತೆರಳುವ ಕುರುಂಜಿಭಾಗ್ ರಸ್ತೆಯಲ್ಲಿ ನೀರು ತುಂಬಿ ಸಂಕಷ್ಟ ಪಡಬೇಕಾಯಿತು. ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿ ಭಾಗ್ ರಸ್ತೆಯಲ್ಲಿರುವ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದಾಗಿ ಹೊಳೆಯಾಗಿ ಮಾರ್ಪಾಡಾಗಿ ವಾಹನಸವಾರರು ಪರದಾಡುವ ಪ್ರಸಂಗ ಉಂಟಾಯಿತು. ಇನ್ನಾದರೂ ನಗರ ಪಂಚಾಯತ್ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳುವುದೇ ಎಂದು ಕಾದು ನೋಡಬೇಕಿದೆ.
ನಿವೇದಿತಾ ಸಂಚಾಲನ ಸಮಿತಿ ಅಮರಪಡ್ನೂರು ಇವರ ವತಿಯಿಂದ ಭಾರತ ಮಾತಾ ಪೂಜಾನಾ ಕಾರ್ಯಕ್ರಮ ಚೊಕ್ಕಾಡಿ ಮಹಿಳಾ ಹಾಲು ಉತ್ಪಾದಕರ ಕಟ್ಟಡದಲ್ಲಿ ನಡೆಯಿತು. ಸಂಚಾಲನ ಸಮಿತಿಯ ಸಂಚಾಲಕಿ ಗೀತಾ ಕೊರತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಕುಸುಮಾಧರ ಎ ಟಿ ಬೌದ್ಧಿಕ್ ನೀಡಿದರು. ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ.)ಇದರ ಆಡಳಿತ...
ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಹರಿಹರ ಕ್ಲಸ್ಟರ್ ನ ಎಲ್ಲ ಶಾಲೆಗಳಿಗೆ ಹಾಗೂ ಸುಬ್ರಹ್ಮಣ್ಯ ಕ್ಲಸ್ಟರ್ ನ ಆಯ್ದ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಮಾಡಿದ್ದಾರೆ. ಸುಬ್ರಹ್ಮಣ್ಯ ಕ್ಲಸ್ಟರ್ ನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ,ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮೀಕಿ...
Loading posts...
All posts loaded
No more posts
