ಕೊಲ್ಲಮೊಗ್ರದಿಂದ ಕಟ್ಟ ಗೋವಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಕಟ್ಟ ಮೈಲ ಎಂಬಲ್ಲಿನ ಕಿರು ಸೇತುವೆ ಪ್ರತಿಶತ 80%ರಷ್ಟು ಕುಸಿತ ಕಂಡಿದ್ದು, ಪ್ರಾಣಬಲಿಗೆ ಹಾತೊರೆಯುತ್ತಿದೆ. ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕಟ್ಟ- ಗೋವಿಂದನಗರ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಟ್ಟ ಮೈಲ ಎಂಬಲ್ಲಿ ಕಿರುಸೇತುವೆಯನ್ನು ಕಟ್ಟಲಾಗಿದೆ. ಕಾಮಗಾರಿ ಹಳೆಯದಾಗಿದ್ದು, ಭಾರೀ ಮಳೆ ಬಂದಾಗ ಈ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. ಕಳೆದ ವರ್ಷ ಈ ಸೇತುವೆಯ ಒಂದು ಬದಿ ಕುಸಿದಿದ್ದು, ಊರವರೇ ಚರಳು ತುಂಬಿಸಿ ಸರಿಪಡಿಸಿದ್ದರು. ಈ ಮಳೆಗಾಲದಲ್ಲಿ ಮತ್ತದೇ ಸಮಸ್ಯೆ ಎದುರಾಗಿದ್ದು ಸೇತುವೆ ಬಹುತೇಕ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಈಗಾಗಲೇ ಶೇ.80 ರಷ್ಟು ಕುಸಿದಿದ್ದು, ನಾಗರಿಕರು ಈ ಸೇತುವೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಸಮಸ್ಯೆಯ ಅರಿವಿದ್ದರೂ ಸರಿಪಡಿಸಬೇಕಾದವರು ಸುಮ್ಮನಿದ್ದಾರೆ.
- Monday
- November 25th, 2024