ದೇವಚಳ್ಳದ ಏಲಿಮಲೆ–ಕಲ್ಲುಪಣೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಉದ್ಘಾಟನೆ

ಸುಳ್ಯ: ದೇವಚಳ್ಳ ಗ್ರಾಮದ ಏಲಿಮಲೆ–ಕಲ್ಲುಪಣೆ ರಸ್ತೆಯು ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರ ರೂ.15 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡಿದ್ದು, ನ.16ರಂದು ನೂತನ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

. . . . . . . . .

ಹಿರಿಯರಾದ ಚಳ್ಳ ಸುಬ್ರಹ್ಮಣ್ಯ ಭಟ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅವರು ರಿಬ್ಬನ್ ಕತ್ತರಿಸಿ ನೂತನ ರಸ್ತೆಯನ್ನು ಉದ್ಘಾಟಿಸಿದರು.

. . . . . . .

ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ ಎ.ವಿ. ತೀರ್ಥರಾಮ, ಕೇಂದ್ರ ರಬ್ಬರ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಮುಳಿಯ ಕೇಶವ ಭಟ್, ಬಿಜೆಪಿ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಲತಾ ಕೆರೆ, ದೇವಚಳ್ಳ ಬಿಜೆಪಿ ಶಕ್ತಿ ಕೇಂದ್ರದ ಸಹಪ್ರಮುಖ ಇಂದಿರೇಶ್ ಗುಡ್ಡೆ, ದೇವಚಳ್ಳ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉದಯಕುಮಾರ್ ಚಳ್ಳ, ಗುತ್ತಿಗೆದಾರ ಹರಿಪ್ರಸಾದ್ ಎಲಿಮಲೆ, ಗಣೇಶ್ ಕೆರೆ, ದಿನೇಶ್ ಕೆರೆ, ಗೋಪಾಲಕೃಷ್ಣ ಭಟ್ ಮೂಲೆತೋಟ, ಸೂರ್ಯನಾರಾಯಣ ಭಟ್ ಮೂಲೆತೋಟ, ಸವಿತಾ ಕಾಯರ, ಜಯಪಾಲ್ ಅಂಬೇಕಲ್ಲು, ಅರುಣ್ ಅಂಬೇಕಲ್ಲು, ಮಿತ್ರಕುಮಾರ್ ಕಲ್ಲುಪಣೆ, ಯಕ್ಷಿತ್ ಚಳ್ಳ ಸೇರಿದಂತೆ ಪ್ರಮುಖರು ಹಾಗೂ ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.

ಗುದ್ದಲಿಪೂಜೆ ನೆರವೇರಿದ ಕೆಲವೇ ದಿನಗಳಲ್ಲಿ ಕಾಂಕ್ರೀಟೀಕರಣ ಕಾಮಗಾರಿಯನ್ನು ಆರಂಭಿಸಿ ಶೀಘ್ರವಾಗಿ ಪೂರ್ಣಗೊಳಿಸಿದ ಗುತ್ತಿಗೆದಾರ ಹರಿಪ್ರಸಾದ್ ಬಿ.ವಿ. ಅವರನ್ನು ಊರವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೃಷ್ಣಯ್ಯ ಮೂಲೆತೋಟ ಸ್ವಾಗತಿಸಿ, ಉದಯಕುಮಾರ್ ಚಳ್ಳ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading