ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಸುಲಭ ಕಂತು ಯೋಜನೆಯಲ್ಲಿ ಸಂತೋಷ್ ಉಬರಡ್ಕರಿಗೆ ಒಲಿದ ಅದೃಷ್ಟ – ₹1 ಲಕ್ಷ ಮೌಲ್ಯದ ಇಲೆಕ್ಟ್ರಾನಿಕ್ ವಸ್ತುಗಳ ಬಹುಮಾನ

ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ಗ್ರಾಹಕರಿಗಾಗಿ ನಡೆಸಲಾಗುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಮೂರನೇ ತಿಂಗಳ ಬಂಪರ್ ಬಹುಮಾನದ ಅದೃಷ್ಟಶಾಲಿ ಗ್ರಾಹಕರಾಗಿ ಉಬರಡ್ಕದ ಸಂತೋಷ್ ಅವರು ಆಯ್ಕೆಯಾಗಿದ್ದಾರೆ. ಇವರು ₹1 ಲಕ್ಷ ಮೌಲ್ಯದ ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಬಹುಮಾನವಾಗಿ ಗೆದ್ದುಕೊಂಡಿದ್ದಾರೆ.

. . . . . . . . .

ನ.15ರಂದು ಸುಳ್ಯದ ಅಂಬೆಟಡ್ಕದಲ್ಲಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಅದೃಷ್ಟಶಾಲಿ ಗ್ರಾಹಕರ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಡ್ ಸಂಖ್ಯೆ 7229 ಹೊಂದಿರುವ ಸಂತೋಷ್ ಉಬರಡ್ಕ ಅವರು ಅದೃಷ್ಟಶಾಲಿಯಾಗಿ ಆಯ್ಕೆಯಾದರು. ಸುಳ್ಯದ ಕೋಟೆಕಲ್ ಆಯುರ್ವೇದ ವೈದ್ಯರಾದ ಡಾ. ಪ್ರಶಾಂತ್ ಅವರು ಅದೃಷ್ಟ ಗ್ರಾಹಕರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

. . . . . . .

ಈ ಸಂದರ್ಭದಲ್ಲಿ ಗ್ರಾಹಕ ಅಶ್ವಥ್, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪಾಲುದಾರರು ಉಪಸ್ಥಿತರಿದ್ದರು.ಸುಲಭ ಕಂತು ಯೋಜನೆಯ ಎಲ್ಲಾ ಹತ್ತು ಕಂತುಗಳನ್ನು ಒಟ್ಟಿಗೆ ಪಾವತಿಸಿ ವಸ್ತುಗಳನ್ನು ಖರೀದಿಸಿದ ಬಳಿಕವೂ ಗ್ರಾಹಕರು ಅದೃಷ್ಟ ಯೋಜನೆಯಲ್ಲಿ ಭಾಗವಹಿಸುವ ಅವಕಾಶವಿದೆ. ಅಲ್ಲದೆ, ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್‌ನಲ್ಲಿ ಎಲ್ಲಾ ಕಂತುಗಳನ್ನು ಒಟ್ಟಿಗೆ ಪಾವತಿಸಿ ವಸ್ತು ಖರೀದಿಸಿದ ನಂತರವೂ ₹90 ಸಾವಿರ ಮೌಲ್ಯದ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಸಂತೋಷ್ ಅವರು ದೀಪಾವಳಿ ದಿನದಂದು ಈ ಯೋಜನೆಯಡಿ ₹1.05 ಲಕ್ಷ ಮೌಲ್ಯದ ಬೃಹತ್ ಟಿವಿಯನ್ನು ಖರೀದಿಸಿದ್ದರು. ಇದೀಗ ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆಯಾಗಿ ₹1 ಲಕ್ಷ ಮೌಲ್ಯದ ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಪಡೆಯಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading