ನ.16: ಸವಣೂರಿನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ನಿವೇಶನದಲ್ಲಿ ಕೇಂದ್ರ ಕಛೇರಿ – ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಹಾಗೂ ರಜತ ಮಹೋತ್ಸವ | ಹಿರಿಯ ಸಹಕಾರಿ ಜಾಕೆ ಮಾಧವ ಗೌಡರಿಗೆ ಆದರ್ಶ ರಜತ ಪ್ರಶಸ್ತಿ – ಸನ್ಮಾನ ಹಾಗೂ ಸಾಂಸ್ಕೃತಿಕ ಸಂಭ್ರಮ

. . . . . . . . .

ಸವಣೂರಿನಲ್ಲಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ನಿವೇಶನದಲ್ಲಿ ಕೇಂದ್ರ ಕಛೇರಿ- ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮವು ನ.16ರಂದು ಜರುಗಲಿದೆ.

. . . . . . .

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಕೇಂದ್ರ ಕಛೇರಿಯನ್ನು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಸರಗೋಡಿನ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮತ್ತು ಒಡಿಯೂರಿನ ಗುರುದೇವದತ್ತ ಸಂಸ್ಥಾನಂನ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.
ಸವಣೂರು ಶಾಖೆಯನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಎ.ಜೆ. ಶೆಟ್ಟಿ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಚೇರ್ ಮ್ಯಾನ್ ಡಾ. ಎ.ಜೆ. ಶೆಟ್ಟಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ರಜತ ಮಹೋತ್ಸವದ ಸವಿ ನೆನಪಿಗಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ನಿಲ್ದಾಣವನ್ನು
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರಿ ಧ್ವಜಾರೋಹಣ ನೆರವೇರಿಸಲಿದ್ದು, ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಸವಣೂರು ಗ್ರಾ.ಪಂ. ಆಡಳಿತಾಧಿಕಾರಿ ಹರೀಶ್ ಕೆ. ಅವರು ಗೌರವ ಉಪಸ್ಥಿತರಿರಲಿದ್ದಾರೆ.

ಸನ್ಮಾನ ಸಮಾರಂಭ
ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಇದರ ಜೊತೆಗೆ ಆದರ್ಶ ಸಹಕಾರ ಸಂಘದಲ್ಲಿ ಪ್ರಾರಂಭದಿಂದಲೂ ಇದ್ದು ಪ್ರಸ್ತುತ ಆಡಳಿತ ಮಂಡಳಿಯಲ್ಲಿರುವ ನಿರ್ದೇಶಕರುಗಳಾದ ಸಹಕಾರ ರತ್ನ ರೋ. ಸವಣೂರು ಸೀತಾರಾಮ ರೈ ಕೆ. ಯನ್. ಸುಂದರ ರೈ ಸವಣೂರು, ರವೀಂದ್ರನಾಥ ಶೆಟ್ಟಿ ಕೇನ್ಯ, ಎಸ್.ಎಂ‌.ಬಾಪೂ ಸಾಹೇಬ್ ಸುಳ್ಯ, ಬಿ. ಮಹಾಬಲ ರೈ ಬೊಳಂತೂರು ಬಂಟ್ವಾಳ, ಶ್ರೀಮತಿ ಪೂರ್ಣಿಮಾ ಎಸ್. ಆಳ್ವ ಮಂಗಳೂರು ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಸಂಘದಲ್ಲಿ ಪ್ರಾರಂಭದಿಂದಲೂ ಇದ್ದು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಮಹಾಪ್ರಬಂಧಕ ವಸಂತ್ ಜಾಲಾಡಿ, ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹೆಚ್. ಮೋನಪ್ಪ ಗೌಡ ವಿಟ್ಲ, ಶ್ರೀನಿವಾಸ ತಂತ್ರಿ ಎಸ್. ಉಜಿರೆ, ಮನೋಜ್ ಕುಮಾರ್ ಕೆ.ಎನ್. ಸುಳ್ಯ, ಶ್ರೀಮತಿ ಸುರೇಖಾ ಬಿ. ಬೆಳ್ತಂಗಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಸಂಘ ಪ್ರಾರಂಭಗೊಂಡು ಇಂದಿನ ತನಕ ನಿತ್ಯನಿಧಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಪುತ್ತೂರು ಶಾಖೆಯ ಕೃಷ್ಣಪ್ಪ ಕೆ. ಸುಬ್ರಹ್ಮಣ್ಯ ಶಾಖೆಯ ಶ್ರೀನಿವಾಸ ಡಿ., ಉಜಿರೆ ಶಾಖೆಯ ಮಂಜುನಾಥ ಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಜೊತೆಗೆ ಸಂಘದ ಕಟ್ಟಡದ ಗುತ್ತಿಗೆದಾರರಾದ ಪುತ್ತೂರಿನ ಡೆಕ್ಕನ್ ಡೀಲ್ ಎಂ.ಎನ್. ಪ್ರಭಾಕರ್ , ಸಂಘದ ಕಟ್ಟಡದ ಇಂಜಿನಿಯರ್ ನಿರ್ವಾಕ್ ಅಸೋಸಿಯೇಟ್ಸ್ ಪುತ್ತೂರಿನ ಸಚ್ಚಿದಾನಂದ ಅವರಿಗೆ ಸನ್ಮಾನ ನಡೆಯಲಿದೆ.

ಸಾಂಸ್ಕೃತಿಕ ಸಂಭ್ರಮ
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 9ರಿಂದ ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ಗಾನಾಮೃತ ಕಾರ್ಯಕ್ರಮ, ಬೆಳಿಗ್ಗೆ 10ರಿಂದ ಪುತ್ತೂರಿನ ಉಮೇಶ್ ದೇವಾಡಿಗ ಮತ್ತು ಬಳಗದವರಿಂದ ರಾಗ್ ರಂಗ್ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಅಪರಾಹ್ನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಚೆಲ್ಯಡ್ಕ ಮತ್ತು ಬಳಗದವರಿಂದ ಯಕ್ಷ ನೃತ್ಯರೂಪಕ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading