ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ ಹಾಗೂ ಕೈಗಾರಿಕೋದ್ಯಮಕ್ಕೆ ಭೇಟಿ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಇಂಜಿನಿಯರ್ಸ್ ಡೇ ಅಂಗವಾಗಿ ತಾಲೂಕಿನ ಹಿರಿಯ ಇಂಜಿನಿಯರ್ ಸೂರ್ಯರಾಯ್ ಹೊಸಮನೆ ಅವರನ್ನು ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

. . . . . . . . .

ಕಾರ್ಯಕ್ರಮದ ನಿರ್ವಹಣೆಯನ್ನು ರೋಟರಿಯನ್ ಪ್ರಭಾಕರ್ ಆಳ್ವ ಭಜನಿ ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜೋನಲ್ ಲೆಫ್ಟಿನೆಂಟ್ ರೋಟರಿಯನ್ ಚಂದ್ರಶೇಖರ್ ರೈ ಬಜನಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೋಟರಿಯನ್ ಅರಿಫ್ ಬೆಳ್ಳಾರೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಶ್ರೀ ಸೂರ್ಯರಾಯ್ ಹೊಸಮನೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

. . . . . . .

ಇದೇ ಸಂದರ್ಭದಲ್ಲಿ ಆಶ್ರಯ ಗ್ರೂಪ್ಸ್ ಸಂಸ್ಥಾಪಕರಾದ ಇಂಜಿನಿಯರ್ ಸುಗಣ್ಯ ರಾಯ್ ಹೊಸಮನೆ ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೋಟರಿಯನ್ ಅರಿಫ್ ಬೆಳ್ಳಾರೆ ಅವರನ್ನು ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು. ಕೊನೆಯಲ್ಲಿ ಕ್ಲಬ್ ಕಾರ್ಯದರ್ಶಿ ರೋಟರಿಯನ್ ಪ್ರಶಾಂತ್ ಟಿ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ ಸದಸ್ಯರು, ಊರವರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಬಳಿಕ ರೋಟರಿ ಸದಸ್ಯರು ಹಾಗೂ ಗಣ್ಯರು ಆಶ್ರಯ ಸಿಮೆಂಟ್ ಪ್ರಾಡಕ್ಟ್ಸ್ ಕೈಗಾರಿಕೋದ್ಯಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೈಗಾರಿಕೆಯ ಕಾರ್ಯವೈಖರಿ, ಉತ್ಪಾದನಾ ಪ್ರಕ್ರಿಯೆ ಹಾಗೂ ಉದ್ಯಮದ ವಿವಿಧ ಚಟುವಟಿಕೆಗಳ ಕುರಿತು ಇಂಜಿನಿಯರ್ ಸೂರ್ಯರಾಯ್ ಹೊಸಮನೆ ಅವರು ಸಂಕ್ಷಿಪ್ತವಾಗಿ ವಿವರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading