ಕುಕ್ಕೆ ಸುಬ್ರಹ್ಮಣ್ಯ : ಮನಮುದಗೊಳಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ

ಸುಬ್ರಹ್ಮಣ್ಯ : ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ.) ಸುಬ್ರಹ್ಮಣ್ಯ ಇದರ 56ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಗುರುವಾರ ಸಂಜೆ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಸಂಗೀತ ಕಲಾವಿದ ವಿದ್ವಾನ್ ಡಾ.ಕೊಲ್ಲಂ ಜಿ.ಎಸ್.ಬಾಲಮುರಳಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಮೇರು ಕಲಾವಿದರು ತನ್ನ ಎರಡು ಗಂಟೆಗಳ ಉತ್ಕೃಷ್ಟ ಪ್ರಸ್ತುತಿ ಮೂಲಕ ಕಲಾಸಕ್ತರ ಮನಮುದಗೊಳಿಸಿದರು.ಸಂಗೀತ ಪ್ರೀಯನಾದ ಕುಕ್ಕೆ ಸುಬ್ರಹ್ಮಣ್ಯನು ನವಾನ್ನ ನೈವೇಧ್ಯ ಸ್ವೀಕರಿಸಿದ ಪುಣ್ಯದಿನ ಶ್ರೀ ದೇವಳದ ರಥಬೀದಿಯ ಸಭಾಂಗಣದಲ್ಲಿ ನಡೆದ ಕಛೇರಿಯು ಸೇರಿದ್ದ ಸಂಗೀತ ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ಕಛೇರಿಯನ್ನು ಹಂಸಧ್ವನಿ ರಾಗದ ಆದಿತಾಳದಲ್ಲಿ ವಾತಾಪಿ ಗಣಪತಿಂ ಭಜೆ ಮೂಲಕ ಕಾರ್ಯಕ್ರಮ ಆರಂಭಿಸಿದ ಕಲಾವಿದರು ಬಳಿಕ ಹಿಮಗಿರಿ ತನಯೆ, ಗೋಪಾಲಕ, ಮಹಾದೇವ ಶಿವ ಶಂಭೋ, ಮುರುಗ ಮುರುಗ ಮುಂತಾದ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

. . . . . . . . .

ಕಾರ್ಯಕ್ರಮದ ನಡುವೆ ನಡೆದ ತನಿ ಆವರ್ತನವು ಹಿಮ್ಮೇಳ ಕಲಾವಿದರ ಕಲಾಪ್ರೌಢಿಮೆಗೆ ಸಾಕ್ಷಿಯಾಯಿತು. ಇವರಿಗೆ ಮೃದಂಗಂನಲ್ಲಿ ವಿದ್ವಾನ್ ಡಾ. ಪಾಲಕ್ಕಾಡ್ ಕೆ. ಜಯಕೃಷ್ಣನ್,ಘಟಂನಲ್ಲಿ ವಿದ್ವಾನ್ ವೆಳ್ಳಾಟ್ಟಂಜೂರ್ ಶ್ರೀಜಿತ್ ಹಿಮ್ಮೇಳ ಸಹಕಾರ ನೀಡಿದರು. ಕಾರ್ಯಕ್ರಮದ ಸಂಯೋಜಕರಾಗಿ ಕುಕ್ಕೆ ದೇವಳದ ಅಧೀಕ್ಷಕ ಕೆ. ಎಂ. ಗೋಪಿನಾಥ ನಂಬೀಶ,ಕಲಾವಿದ ಕೆ.ಯಜ್ಞೇಶ್ ಆಚಾರ್, ಪುರೋಹಿತ ಸರ್ವೇಶ್ವರ ಭಟ್, ದಿಯಾನ್ ಎಸ್ ಸುಬ್ರಹ್ಮಣ್ಯ, ರತ್ನಾಕರ ಸುಬ್ರಹ್ಮಣ್ಯ, ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶರ್ಮ, ಕಲಾಸಕ್ತ ಶೇಖರ್ ಪಾಂಗಣ್ಣಾಯ, ಕುಕ್ಕೆ ದೇವಳದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್. ಎಸ್ ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading