ಸುಳ್ಯ : ಸ್ವಸ್ತಿಕ್ ಕಂಪ್ಯೂಟರ್ಸ್‌ನ ನೂತನ ಶೋರೂಮ್ ಶುಭಾರಂಭ

ಸುಳ್ಯ : ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಸೇವೆ ಹಾಗೂ ವಿವಿಧ ಪರಿಕರಗಳಿಗಾಗಿ ಗ್ರಾಹಕರ ವಿಶ್ವಾಸ ಗಳಿಸಿರುವ ಸ್ವಸ್ತಿಕ್ ಕಂಪ್ಯೂಟರ್ಸ್‌ನ ನೂತನ ಹಾಗೂ ವಿಸ್ತೃತ ಮಳಿಗೆ ಮತ್ತು ಶೋರೂಂ ಆ.26ರಂದು ಶುಭಾರಂಭಗೊಂಡಿತು.

. . . . . . . . .

ಕಾಸರಗೋಡಿನ ನ್ಯಾಯವಾದಿ ಶ್ರೀಕಾಂತ್ ತ್ರಿಕನ್ನಾಡ್ ನೂತನ ಶೋರೂಂ ಉದ್ಘಾಟಿಸಿ ದೀಪ ಪ್ರಜ್ವಲಿಸಿದರು.

. . . . . . .

ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೃಪಾಶಂಕರ್ ತುದಿಯಡ್ಕ, ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷ ಸುಧಾಕರ ರೈ, ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಾಫ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ಹಾಗೂ ಸಂಸ್ಥೆಯ ಮಾಲಕರ ತಾಯಿ ಸಾವಿತ್ರಿ ಬೈಪಡಿತ್ತಾಯ ಹಾಗೂ ಸಿಬ್ಬಂದಿಗಳು ಭಾಗಿಯಾದರು.

ಮಾಲಕ ಕೃಷ್ಣರಾಜ್ ಬೈಪಡಿತ್ತಾಯ ಹಾಗೂ ಶ್ವೇತಾ ಕೃಷ್ಣರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಸಹೋದರ ಕಿರಣ್ ಬೈಪಡಿತ್ತಾಯ ಸಹಕರಿಸಿದರು. ವಿ.ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.

ಸ್ವಸ್ತಿಕ್ ಕಂಪ್ಯೂಟರ್ಸ್‌ನಲ್ಲಿ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್‌ಗಳ ಮಾರಾಟ, ಸೇವೆ ಮತ್ತು ತಾಂತ್ರಿಕ ಬೆಂಬಲ, ವಿವಿಧ ಉಪಕರಣಗಳು ಹಾಗೂ ಪೆರಿಫೆರಲ್ಸ್, ನೈಜ ಉತ್ಪನ್ನಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ತಜ್ಞರ ಸೇವೆ ಲಭ್ಯವಿರಲಿದೆ. ಅತ್ಯುತ್ತಮ ಬ್ರಾಂಡ್ಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವುದರ ಜೊತೆಗೆ ವಿಶ್ವಾಸಾರ್ಹ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂದು ಸಂಸ್ಥೆಯ ಕಿರಣರಾಜ್ ಬೈಪಡಿತ್ತಾಯ ಹಾಗೂ ಕೃಷ್ಣರಾಜ್ ಬೈಪಡಿತ್ತಾಯ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading