ಪಂಜ : ಸ್ಕೌಟ್ ಗೈಡ್ಸ್ ಪಟಾಲಂ ನಾಯಕರ ಶಿಬಿರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಬ್, ಬುಲ್ ಬುಲ್, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳ ಎರಡು ದಿನಗಳ ಪಟಾಲಂ ನಾಯಕರ ತರಬೇತಿ ಶಿಬಿರವು ಕೆಪಿಎಸ್ ಪಂಜ ಇದರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ದೇವಸ್ಥಾನ ಪೈಂದೋಡಿ ಪಂಜ ಇಲ್ಲಿ 22 ಮತ್ತು 23 ಆಗಸ್ಟ್ 2026ರಂದು ಜರುಗಿತು.

. . . . . . . . .

ಪೈಂದೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಕುದ್ವ ಅವರಿಂದ ಉದ್ಘಾಟಿಸಲ್ಪಟ್ಟ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೆಪಿಎಸ್ ಪಂಜ ಇದರ ಪ್ರಾಂಶುಪಾಲರಾದ ಚಿದಾನಂದ.ಕೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ದ.ಕ ಜಿಲ್ಲಾ ಗೈಡ್ ಆಯುಕ್ತೆ ವಿಮಲ ರಂಗಯ್ಯ, ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ, ಜಿಲ್ಲಾ ಸಹಾಯಕ ಸ್ಕೌಟ್ ಆಯುಕ್ತರಾದ ದೇವಿಪ್ರಸಾದ್ ಜಾಕೆ, ಸಂಪನ್ಮೂಲ ವ್ಯಕ್ತಿ ಚೇವಾರು ವಿನೋದ, ಶಿಬಿರ ನಾಯಕರದ ಶಿವಪ್ರಸಾದ್.ಜಿ, ಸರೋಜಿನಿ.ಕೆ, ಶಕುಂತಲಾ ಮುರುಳ್ಯ ಉಪಸ್ಥಿತರಿದ್ದರು. ಕೋಶಾಧಿಕಾರಿ ಸೋಮಶೇಖರ ನೇರಳ ಸ್ವಾಗತಿಸಿ, ಗೈಡರ್ ಪ್ರತಿನಿಧಿ ನಳಿನಾಕ್ಷಿ ಮುರುಳ್ಯ ವಂದಿಸಿದ ಉದ್ಘಾಟನಾ ಕಾರ್ಯಕ್ರಮವನ್ನು ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ಬಾಳಿಲ ನಿರೂಪಿಸಿದರು.

. . . . . . .

ಆರು ಪ್ರತ್ಯೇಕ ಬೇಸ್ ಗಳನ್ನು ಮಾಡಿ ಧ್ವಜ ವಂದನೆ, ಪಟಾಲಂಪದ್ದತಿ, ದಿಕ್ಸೂಚಿ, ಪ್ರಥಮ ಚಿಕಿತ್ಸೆ, ಬ್ಯಾಂಡೇಜ್, ಗಂಟುಗಳು ಮತ್ತು ಹಿಚ್ ಗಳು, ಲಾಷಿಂಗ್ ಗಳು, ಅಂದಾಜುಗಣನೆ, ಲಾಗ್ ಬುಕ್, ಪ್ರಾವೀಣ್ಯತಾ ಪದಕ, ದಳ ಸಭೆ, ಬಿಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ಮೊದಲಾದ ಸ್ಕೌಟಿಂಗ್ ಗೈಡಿಂಗ್ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲಾಯಿತು. ಹಾಡು ಆಟಗಳನ್ನು ಒಳಗೊಂಡ ರಂಜನೆಯು ಜೊತೆ ಜೊತೆಗೆ ಸಾಗಿತು. ರಾತ್ರಿ ನಡೆದ ಶಿಬಿರಾಗ್ನಿ ಕಾರ್ಯಕ್ರಮವನ್ನು ದೇವಾಲಯದ ಪ್ರಧಾನ ಅರ್ಚಕರಾದ ವಿಷ್ಣು ಭಟ್ ಪೈಂದೋಡಿ ಉದ್ಘಾಟಿಸಿದರು. ಪಂಜ ಪಂಚಶ್ರೀ ಜೆಸಿಐ ಅಧ್ಯಕ್ಷರಾದ ದೇವಿಪ್ರಸಾದ್ ಚಿಕ್ಮುಳಿ, ಕೆಪಿಎಸ್ ಪಂಜ ಇದರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸವಿತಾರಾ ಮುಡೂರು ಉಪಸ್ಥಿತರಿದ್ದರು. ಬಳಿಕ ಪ್ರತಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಮರುದಿನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾಧವ ಬಿಕೆ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಭವಾನಿ ಶಂಕರ ಪಾಲೋಳಿ, ಕೆಪಿಎಸ್ ಪಂಜಾ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ದೇವಿ ಪ್ರಸಾದ್ ಎ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಕುದ್ವ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಶಿಬಿರದ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಉಪಾಧ್ಯಕ್ಷರಾದ ದಾಮೋದರ ನೇರಳ ಸ್ವಾಗತಿಸಿ, ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ಬಾಳಿಲ ವಂದಿಸಿದ ಈ ಕಾರ್ಯಕ್ರಮವನ್ನು ಸಹನಾ ಬಿ ಬಿ ಬಾಳಿಲ ನಿರೂಪಿಸಿದರು.

73 ಸ್ಕೌಟ್ಸ್, 80 ಗೈಡ್ಸ್ 11 ಕಬ್ಸ್, 12 ಬುಲ್ ಬುಲ್ಸ್, 15 ರೋವರ್ಸ್, 4 ರೇಂಜರ್ಸ್ ಹಾಗೂ 28 ಶಿಕ್ಷಕರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯದ ರೋವರ್ಸ್, ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರಿನ ರೋವರ್ಸ್ ಮತ್ತು ರೆಂಜರ್ಸ್ ಸ್ವಯಂಸೇವಕರಾಗಿ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading