ಗುತ್ತಿಗಾರು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಲಯನ್ಸ್ ಕ್ಲಬ್ ಜಲದುರ್ಗ ಬೆಳ್ಳಾರೆ, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್, ಬಿ.ಯಂ.ಯಸ್. ಆಟೋ ಚಾಲಕರ ಸಂಘ ಗುತ್ತಿಗಾರು ಹಾಗೂ ಜೆಸಿಐ ಪಂಜ ಪಂಚಶ್ರೀ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವು ಆ.22ರಂದು ಗುತ್ತಿಗಾರಿನ ಪ.ವರ್ಗದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಲವಾರು ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಪುನರ್ಜನ್ಮ ನೀಡಿದರು. ಕಾರ್ಯಕ್ರಮವನ್ನು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಾದ ದೇವರಾಜ್ ಮುತ್ಲಾಜೆ, ನಿವೃತ್ತ ಪ್ರಾಂಶುಪಾಲರಾದ ವೆಂಕಪ್ಪ ಗೌಡ ಕೇನಾಜೆ, ಹಿರಿಯಡ್ಕ ಲಯನ್ಸ್ ಅಧ್ಯಕ್ಷರಾದ ಜಯಪ್ರಕಾಶ್ ನಾಯಕ್, ಬೆಳ್ಳಾರೆ ಲಯನ್ಸ್ ನ ಪ್ರದೀಪ್ ರೈ ಪಂಬಾರ್, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷಷರಾದ ನವೀನ್, ರೆಡ್ ಕ್ರಾಸ್ ಮುಖ್ಯಸ್ಥರಾದ ಶ್ರೀಮತಿ ಅಮಿಷ, ಟ್ರಸ್ಟ್ ಉಪಾಧ್ಯಕ್ಷರಾದ ಮೋಹನ್ ದಾಸ್ ಶಿರಾಜೆ, ರಮಿತ ಆಚಳ್ಳಿರವರು ಜೊತೆಯಾಗಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷರಾದ ದೇವಿಪ್ರಸಾದ್ ಚಿಕ್ಮುಳಿ, ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಶ್ರೀಮತಿ ಲತಾ ರವಿಕುಮಾರ್ ಅಜಡ್ಕ, ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಅಭಿಲಾಷಾ ಶಿವಪ್ರಕಾಶ್, ರೆಡ್ ಕ್ರಾಸ್ ಸದಸ್ಯರಾದ ನಾಗಬ, ನಿರಂತ್ ದೇವಸ್ಯ,ಟ್ರಸ್ಟ್ ಕೋಶಾಧಿಕಾರಿ ಸುಕುಮಾರ್ ಕೊಡೋಮ್ ಬು, ಮೋಹನ್ ಮುಕ್ಕೂರ್, ಪ್ರಶಾಂತ್ ತಂಟೆಪ್ಪಾಡಿ, ಶ್ರೀಕಾಂತ್ ಪೈಕಾ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.ಅಮರ ಚಾರಿಟೇಬಲ್ ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸುಕೇಶ್ ಚಾರ್ಮಾತ ಪ್ರಾರ್ಥನೆ ಸಲ್ಲಿಸಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading