“ಯಾರಿಗೋಸ್ಕರವೂ ನಾವು ಇಡೀ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ” : ರಜನಿ.ಆರ್ ಭಟ್ – ಸುಬ್ರಹ್ಮಣ್ಯದಲ್ಲಿ ಇನ್ನರ್ ವೀಲ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಜಿಲ್ಲಾ ಚೇರ್ ಮನ್

ಸುಬ್ರಹ್ಮಣ್ಯ ಆಗಸ್ಟ್ 24 : ಸುಬ್ರಹ್ಮಣ್ಯ ಇನ್ನರ್ವೀಲ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಜಿಲ್ಲಾ ಚೇರ್ಮನ್ ಶಾಲಿನಿ ಆರ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಇಂದು ನಾವು ನಮ್ಮ ಸ್ವಾರ್ಥ ಅಥವಾ ಸ್ವಯಂ ಕೇಂದ್ರಿತ ಯೋಚನೆಯನ್ನು ಮೀರಿ ಯೋಚಿಸಬೇಕಾಗಿದೆ ಹಾಗೆಯೇ ಸಮುದಾಯವನ್ನ ಮೀರಿ ನೋಡಬೇಕಾಗಿದೆ, ಹೊಸ ಸವಾಲುಗಳನ್ನು ಕೂಡ ಸ್ವೀಕರಿಸಬೇಕಾಗಿದೆ. ಇನ್ನರ್ವೀಲ್ ಕ್ಲಬ್ಬಿನ ಮಹಿಳೆಯರು ತಮ್ಮ ಪ್ರದೇಶ ವಲಯಕ್ಕೆ ಸಂಬಂಧ ಪಟ್ಟ ಆರ್ಥಿಕವಾಗಿ ಹಿಂದುಳಿದ ಅಥವಾ ತೀರ ಬಡವರಾಗಿರುವ ಜನರ ಕಷ್ಟ ಸುಖಗಳಿಗೆ ಭಾಗಿಯಾಗುವುದರೊಂದಿಗೆ ತಮ್ಮಿಂದಾದ ಸಹಾಯ ಹಸ್ತವನ್ನು ನೀಡಬೇಕು. ಸಮಾಜದಲ್ಲಿ ಇಂದು ಮಹಿಳೆಯರ ಸ್ಥಾನ ಉನ್ನತ ಮಟ್ಟದಲ್ಲಿದ್ದು, ಅದನ್ನು ಉಳಿಸಬೇಕು ಹಾಗೂ ಪ್ರೋತ್ಸಾಹ ನೀಡಬೇಕು. ನೀವು ಯಾರೊಬ್ಬರಿಗಾಗಿ ಅವರ ಬದುಕನ್ನೇ ಬದಲಾಯಿಸಬಹುದು, ಆದರೆ ಯಾರಿಗೋಸ್ಕರವೂ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನೀವೆಲ್ಲರೂ ಸಮಾಜದಲ್ಲಿ ಗುರುತಿಸಿಕೊಂಡು ಉನ್ನತ ಸ್ಥಾನಕ್ಕೆ ಏರಿ. ನಿಮ್ಮಿಂದಾದ ಸಹಾಯವನ್ನು ಸಮಾಜಕ್ಕೆ ನೀಡಿ” ಎಂದು ಜಿಲ್ಲಾ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೇ ರಜನಿ ಆರ್ ಭಟ್ ಅವರು ಮಹಿಳೆಯರಿಗೆ ಕರೆಕೊಟ್ಟರು.

. . . . . . . . .

 ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಮಣ್ಯ ಇನ್ನರ್ವೆಲ್ ಕ್ಲಬ್ಬಿನ ಅಧ್ಯಕ್ಷೆ ಸೌಮ್ಯ ದಿನೇಶ್ ಎಲ್ಲರನ್ನು ಸ್ವಾಗತಿಸಿ ಸುಬ್ರಹ್ಮಣ್ಯ ಇನ್ನರ್ವೇಲ್ ಕ್ಲಬ್ ಹೆಚ್ಚೆಚ್ಚು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲು ಎಲ್ಲರ ಸಹಕಾರವನ್ನು ಕೋರಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋಹಿತ್ ಬಿ.ಬಿ ಶುಭಹಾರೈಸಿದರು. ಇನ್ನರ್ ವೀಲ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷೆ ವಿಮಲಾ ರಂಗಯ್ಯ ಜಿಲ್ಲಾ ಚೇರ್ ಮನ್ ರವರ ಪರಿಚಯ ಮಾಡಿದರು. ಪೂರ್ವಾಧ್ಯಕ್ಷೆ ಸಚಿತ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶೋಭಾ ಗಿರಿಧರ್ ಸಂದೇಶವಾಚನದೊಂದಿಗೆ ವರದಿಯನ್ನು ವಾಚಿಸಿದರು. ಪೂರ್ವಾಧ್ಯಕ್ಷೆ ಭಾರತಿ ದಿನೇಶ್ ಬುಲೆಟಿನ್ ತಯಾರಿಸಿದ್ದರು. ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಸೌಮ್ಯ ದಿನೇಶ್ ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಠೇವಣಿಯ ಬಡ್ಡಿ ಹಣದಿಂದ ವಾರ್ಷಿಕ ನಗದು ಬಹುಮಾನ ನೀಡಲು ರೂ 50 ಸಾವಿರ ರೂಪಾಯಿ ಚೆಕ್‌ಅನ್ನು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅವರಿಗೆ ಹಸ್ತಾಂತರಿಸಿದರು. ಛಾಯಾ ರತ್ನ ಪ್ರಶಸ್ತಿ ಪುರಸ್ಕೃತ ಲೋಕೇಶ್ ಬಿಎನ್ ಅವರನ್ನು ಗೌರವಿಸಲಾಯಿತು. ಪೂರ್ವಧ್ಯಕ್ಷೆ ಲೀಲಾ ವಿಶ್ವನಾಥ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಜಿಶಾ ಚಂದ್ರಶೇಖರ್ ಧನ್ಯವಾದ ಸಮರ್ಪಿಸಿದರು.

. . . . . . .

 ಆಟಿ ಉತ್ಸವದ ಸಂಭ್ರಮ
ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಇನ್ನರ್ವೀಲ್ ಕ್ಲಬ್ ನ ವತಿಯಿಂದ ಆಟಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಚೇರ್ಮೆನ್ ರಜನಿ.ಆರ್ ಭಟ್ ಚೆನ್ನಮಣೆ ಆಟ ಆಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೂರ್ವ ಅಧ್ಯಕ್ಷೆ ಹಾಗೂ ಸುಬ್ರಹ್ಮಣ್ಯ ಇನ್ನರ್ವೀಲ್ ಸದಸ್ಯರುಗಳು ಸಹಕರಿಸಿದರು. ಹಾಗೆ ಉತ್ಸವದಲ್ಲಿ ವಿವಿಧ ಬಗೆಯ ತಿಂಡಿಗಳಾದ ಪತ್ರೊಡೆ, ನೆನ್ನೆರಿ, ಆಟಿ ಪಾಯಸ, ತಜಂಕ್ ಪಲ್ಯ, ಕಣಿಲೆ ಪಲ್ಯ, ತಿಮರೆ ಚಟ್ನಿ, ಕೆಸು ಪಲ್ಯ, ಪಚುಡಿ, ಇತ್ಯಾದಿ ಖ್ಯಾಧ್ಯಗಳನ್ನು ಏರ್ಪಡಿಸಿದ್ದರು. ಇನ್ನರ್ ವೀಲ್ ಹಾಗೂ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರು, ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading