ಕುಕ್ಕೆ ಸುಬ್ರಹ್ಮಣ್ಯ : 22ನೇ ಕೃಷ್ಣಾಷ್ಠಮಿ ಸಮಿತಿಯ ಅಧ್ಯಕ್ಷರಾಗಿ ರತ್ನಾಕರ ಸುಬ್ರಹ್ಮಣ್ಯ

ಸುಬ್ರಹ್ಮಣ್ಯ : ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ(ರಿ.) ಸುಬ್ರಹ್ಮಣ್ಯ ಇದರ ವತಿಯಿಂದ ಸುಬ್ರಹ್ಮಣ್ಯದಲ್ಲಿ ನಡೆಯುವ 22ನೇ ವರ್ಷದ ಕೃಷ್ಣಾಷ್ಠಮಿ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ನೇಮಕಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ಉದ್ಯಮಿ ಜಯರಾಮ ಎಚ್.ಎಲ್ ಆಯ್ಕೆಯಾಗಿದ್ದಾರೆ. ಸ್ಥಾಪಕಾಧ್ಯಕ್ಷರಾದ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಳಿದಂತೆ ಉಪಾಧ್ಯಕ್ಷರಾಗಿ ಮಹೇಶ್ ಗುಡ್ಡೆಮನೆ, ಭುವನೇಶ್ ಅಗೋಳಿಕಜೆ, ಕೋಶಾಧಿಕಾರಿಯಾಗಿ ದೇವಿಚರಣ್ ಕಾನಡ್ಕ, ಜತೆ ಕಾರ್ಯದರ್ಶಿಯಾಗಿ ಗಗನ್ ಅಗೋಳಿಕಜೆ, ಜತೆಕಾರ್ಯದರ್ಶಿಗಳಾಗಿ ಸುಹಾಸ್ ಎಚ್.ಎಸ್, ಶೇಖರ್ ಸುಬ್ರಹ್ಮಣ್ಯ ನೇಮಕಗೊಂಡರು. ಸಂಚಾಲಕರಾಗಿ ರಾಜೇಶ್ ಎನ್.ಎಸ್, ವೆಂಕಟೇಶ್ ಎಚ್.ಎಲ್, ಶ್ರೀಕೃಷ್ಣ ಶರ್ಮ, ಲೋಕೇಶ್ ಬಿ.ಎನ್, ಗೌರವ ಸಲಹೆಗಾರರಾಗಿ ಕೆ.ಯಜ್ಞೇಶ್ ಆಚಾರ್, ಎ.ವೆಂಕಟ್ರಾಜ್, ಸಮಿತಿ ಸದಸ್ಯರಾಗಿ ದಿನೇಶ್ ಮೊಗ್ರ, ಮನೋಜ್ ಕೈಕಂಬ, ಗಿರೀಶ್ ಆಚಾರ್ಯ ಪೈಲಾಜೆ, ಯಶೋಧಕೃಷ್ಣ ನೂಚಿಲ, ಪ್ರಕಾಶ್ ಸುಬ್ರಹ್ಮಣ್ಯ, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ ಮುಂದುವರೆದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading