ಸುಳ್ಯ : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟನೆ ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ

“ವಿದ್ಯಾರ್ಥಿಗಳು ದುಶ್ಚಟಗಳಿಗೆ ಆಕರ್ಷಣೆಗೊಂಡು ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸಮಾಜದಲ್ಲಿ ಮಾನವ ಕಳ್ಳ ಸಾಗಣೆ ಮಾಡಿ, ಯುವತಿಯರನ್ನು ಲೈಂಗಿಕ ಶೋಷಣೆಗೆ, ಭಿಕ್ಷುಟನೆಗೆ, ಮನೆ ಕೆಲಸಗಳಿಗೆ ಬಳಸಿ ಕೊಳ್ಳುವ ಜಾಲ ಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು” ಎಂದು ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಶ್ರೀಮತಿ ಟಿ.ದಮಯಂತಿ ಸೋಮಯ್ಯ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ 

. . . . . . . . .

 ಜು.30 ರಂದು ಸುಳ್ಯದ ಕೊಡಿಯಾಲಬೈಲ್ ನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಪ್ರೊ. ಸತೀಶ್ ಎನ್.ಪಿ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ದಳ ಸುಬ್ರಾಯ ಭಟ್ ಮಾತನಾಡಿ “ದುಶ್ಚಟ ಹಾಗೂ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಮಾಹಿತಿ ನೀಡಿದರು. ಮಾದಕ ವಸ್ತುಗಳ ಬಳಕೆ ಮಾಡಬೇಡಿ. ಸಂಸ್ಕಾರಯುತ ಜೀವನ ಮಾಡಿ ಪ್ರೀತಿ ಆಕರ್ಷಣೆಗೆ ಬಲಿಯಾಗದೆ ತಮ್ಮ ತಂದೆ ತಾಯಿಗಳನ್ನು ಪ್ರೀತಿಸಿ” ಎಂದರು.

ವಕೀಲ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಸುಳ್ಯದ ನೈಜ ಘಟನೆ ಉದಾಹರಣೆ ನೀಡಿ ಮಾದಕ ಮುಕ್ತ ಜೀವನ ಮಾಡುವಂತೆ ಸಲಹೆ ನೀಡಿದರು.

ಜನಜಾಗೃತಿ ತಾಲ್ಲೂಕು ಅಧ್ಯಕ್ಷ ವೆಂಕಪ್ಪ ಗೌಡ ಮಾತನಾಡಿ “ಮಾದಕ ವಸ್ತು ಸೇವನೆ ಹಾಗೂ ಜಾಲದಿಂದ ಮಾಡಿದ ಅಪರಾಧ ಗಳಿಗೆ ನೀಡುವ ಶಿಕ್ಷೆಗಳ ಬಗ್ಗೆ ಹಾಗೂ ಜನಜಾಗೃತಿ ವೇದಿಕೆ ವತಿಯಿಂದ ತಾಲೂಕಿನ 15 ಸ್ವಾಸ್ತ್ಯ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾಗುವುದು” ಎಂದರು. 

ಪೊಲೀಸ್ ಉಪ ನಿರೀಕ್ಷಕರು ಮಾತನಾಡಿ “ಅಪರಾಧ, ಮಾನವ ಕಳ್ಳ ಸಾಗಣೆಗಳು ಮಾಡುವುದು ಕಂಡಾಗ 1930, ಹಾಗೂ 112 ಗೆ ತಿಳಿಸುವಂತೆ” ಮಾಹಿತಿ ನೀಡಿದರು.

ಯೋಜನಾಧಿಕಾರಿ ಮಾಧವ ಗೌಡ ರವರು ಪ್ರಸ್ತಾವಿಕವಾಗಿ ಮಾತನಾಡಿ “ಮೋಜಿಗಾಗಿ, ಕುತೂಹಲಕ್ಕಾಗಿ ಪ್ರಾರಂಭ ಆಗುವ ಮಾದಕ ವಸ್ತು ಸೇವನೆ, ಮದ್ಯಪಾನದಂತಹ ದುಶ್ಚಟಗಳು ಮುಂದೆ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ. ಮದ್ಯ ವ್ಯಸನಿಗಳಿಗೂ ಜೀವನ ಇದೆ. ಇದಕ್ಕಾಗಿ ಪೂಜ್ಯರು ಮಧ್ಯವರ್ಜನ ಶಿಬಿರ ಗಳನ್ನು ಪ್ರಾರಂಭ ಮಾಡಿರುತ್ತಾರೆ. ಚಟಕ್ಕೆ ಬಿದ್ದವರ ಮನ ಪರಿವರ್ತನೆಯಿಂದ ಮಾತ್ರ ಬಿಡಿಸಲು ಸಾಧ್ಯ ಹಾಗೂ ದುಶ್ಚಟ ಬೀಳುವುದಕ್ಕಿಂತ ಮುಂಚೆನೇ ಎಚ್ಚೆತ್ತುಕೊಳ್ಳಬೇಕು”ಎಂದರು ನಂತರ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಹಾಯಕ ಸರಕಾರಿ ಅಭಿಯಂತರಾದ ಕು. ಪ್ರೀತಿ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸುರೇಶ್ ಕಣೆಮರಡ್ಕ, ವಲಯಾಧ್ಯಕ್ಷ ಮನೋಹರ್, ತಾಲ್ಲೂಕು ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷ ಲೋಕನಾಥ ಅಮೆಚೂರು, ಜನಜಾಗೃತಿ ವಲಯಧ್ಯಕ್ಷ ವಿಜಯ ಕುಮಾರ್ ಉಬರಡ್ಕ, ಜನಜಾಗೃತಿ ಸದಸ್ಯರಾದ ಪದ್ಮನಾಭ ಜೈನ್ ಉಪಸ್ಥಿತರಿದ್ದರು.

ಮೇಲ್ವಿಚಾರಕರಾದ ದಿನೇಶ್.ಡಿ ನಿರೂಪಿಸಿ, ಉಪನ್ಯಾಸಕರಾದ ಕಿಶೋರ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕಿ ಮೋನಿಷಾ ವಂದಿಸಿದರು. ಪ್ರತೀಕ್ಷಾ ತಂಡದವರು ಪ್ರಾರ್ಥಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading