ರೈತರಿಗೆ ಕೃಷಿ ಇಲಾಖೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳು – ಮಾಹಿತಿ ನೀಡಿದ ಸುಳ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು

2026ನೇ ಸಾಲಿನಲ್ಲಿ ಕೃಷಿ ಇಲಾಖೆ ಸುಳ್ಯ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಈ ಕೆಳಗೆ ನೀಡಿದಂತಹ ಸೌಲಭ್ಯಗಳು ದೊರೆಯಲಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್ ರವರು ತಿಳಿಸಿದ್ದಾರೆ.
ಭತ್ತದ ಬಿತ್ತನೆ ಬೀಜ(ಎಂ.ಒ-4 ತಳಿ) ಪ್ರತೀ ಕೆಜಿ ಬೀಜಕ್ಕೆ 8 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಹಸಿರೆಲೆ ಬಿತ್ತನೆ ಬೀಜ(ಸನ್‌ಹೆಂಪ್) – ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರೆಲೆ ಬಿತ್ತನೆ ಬೀಜಗಳನ್ನು 50 ಶೇಕಡಾ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತದೆ.
ಕೃಷಿ ಯಂತ್ರೋಪಕರಣಗಳಾದ ಕಳೆ ಕೊಚ್ಚುವ ಯಂತ್ರ, ಹೆಚ್.ಟಿ.ಪಿ ಸಿಂಪಡಣೆ ಯಂತ್ರ, ಮೇವು ಕತ್ತರಿಸುವ ಯಂತ್ರ, ಲೋಡ್ ಕಾರ್ಟ್ ಯಂತ್ರೋಪಕರಣಗಳನ್ನು ಸಾಮಾನ್ಯ ರೈತರಿಗೆ ಎಲ್1 ಸಹಾಯಧನದ ಮಾದರಿಯಲ್ಲಿ 50 ಶೇಕಡಾ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ರೈತರಿಗೆ 90 ಶೇಕಡಾ ಸಹಾಯಧನದಲ್ಲಿ ಅನುದಾನದ ಲಭ್ಯತೆಯ ಆಧಾರದ ಮೇಲೆ ನೀಡಲಾಗುತ್ತದೆ.
ತುಂತುರು ನೀರಾವರಿ – ಸ್ಪಿಂಕ್ಲರ್/ಕಪ್ಪು ಪೈಪ್ ಗಳನ್ನು ಎಲ್ಲಾ ವರ್ಗದ ರೈತರಿಗೂ 90 ಶೇಕಡಾ ಸಹಾಯಧನದಲ್ಲಿ ವಿತರಿಸಲಾಗುವುದು.
ಪಿ.ವಿ.ಸಿ ಪೈಪ್ – ಪ್ರತೀ ಹೆಕ್ಟೇರ್ ಪ್ರದೇಶಕ್ಕೆ ಗರಿಷ್ಠ 10 ಸಾವಿರ ರೂಪಾಯಿ ಮೀರದಂತೆ ಸಹಾಯಧನದಲ್ಲಿ ಪಿ.ವಿ.ಸಿ ಪೈಪ್ ವಿತರಣೆ ಮಾಡಲಾಗುವುದು.
ಝಿಂಕ್/ಬೋರಾನ್/ಸುಣ್ಣ 50 ಶೇಕಡಾ ಸಹಾಯಧನದಲ್ಲಿ ವಿತರಣೆ ಮಾಡಲಾಗುವುದು.
ಕೃಷಿ ಭಾಗ್ಯ ಯೋಜನೆ – 10x10x3, 12x12x3, 15x15x3, 18x18x3, 21x21x3 ವಿವಿಧ ಅಳತೆಯ ಕೃಷಿ ಹೊಂಡಗಳನ್ನು ರೈತರ ಜಮೀನಿನಲ್ಲಿ ಅಳವಡಿಸಲು ಸಾಮಾನ್ಯ ರೈತರಿಗೆ 80 ಶೇಕಡಾ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ 90 ಶೇಕಡಾ ಸಹಾಯಧನವನ್ನು ನೀಡಲಾಗುವುದು.
ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ರೈತ ಸಂಪರ್ಕ ಕೇಂದ್ರ ಸುಳ್ಯ ಮತ್ತು ಪಂಜ ಹಾಗೂ ಸುಳ್ಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading