ಆ 4-ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್  ಸಂಯುಕ್ತ ಖಾಝಿ ಅಸ್ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಲ್ ಖಾಝಿ ಸ್ವೀಕಾರ ಕಾರ್ಯಕ್ರಮ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಸಂಯುಕ್ತ  ಖಾಝಿಯಾಗಿ ಸ್ವೀಕರಿಸಲಾಗಿರುವ ಬಹು-ಸಯ್ಯಿದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಲ್ ರವರ ಖಾಝಿ ಸ್ವೀಕಾರ  ಕಾರ್ಯಕ್ರಮವು ಆ. 4ರಂದು ಸಂಜೆ 4 ಘಂಟೆಗೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಸಯ್ಯದ್ ಎನ್. ಪಿ. ಎಂ. ಝೈನುಲ್ ಆಬಿದೀನ್ ತಂಙಲ್ ಕುನ್ನುಂಗೈ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಅಸ್ಸಯ್ಯದ್ ಕೆ. ಎಸ್. ಅಲಿ ತಂಙಲ್ ಕುಂಬೋಲ್ ನೂತನ ಖಾಝಿಯವರಿಗೆ ಪೇಟವನ್ನು ತೊಡಿಸಲಿದ್ದಾರೆ. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಲ್ ಪುತ್ತೂರು, ಶೈಖುನಾ ಅಬ್ದುಲ್ಲ ಮುಸ್ಲಿಯಾರ್ ಕೊಡಗು, ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಶೈಖುನಾ ಕೆ.ವಿ. ಝೈನುದ್ದೀನ್ ಮುಸ್ಲಿಯಾರ್, ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಶೈಖುನಾ ಉಮರ್ ಫೈಝಿ ಮುಕ್ಕ,ಉಸ್ತಾದ್ ಅಬ್ದುಸ್ಸಲಾಂ ಬಾಖವಿ ಮತ್ತು ಕರ್ನಾಟಕ ಸರಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಜನಾಬ್ ಟಿ. ಎಂ. ಶಹೀದ್ ತೆಕ್ಕಿಲ್ ಹಾಗೂ ಸುನ್ನೀ ಉಲಮಾ, ಉಮರಾ ನಾಯಕರು, ವಿವಿಧ ರಂಗಗಳ ಗಣ್ಯರು ಭಾಗವಹಿಸಲಿದ್ದಾರೆ.
ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading