ಬೆಳ್ಳಾರೆ : ಕಾಂಗ್ರೆಸ್ ಗ್ರಾಮ ಸಮಿತಿಯ ಸಭೆ – ಪಕ್ಷಕ್ಕೆ ಸೇರ್ಪಡೆ

ಕಾಂಗ್ರೆಸ್ ಪಕ್ಷದ ಬೆಳ್ಳಾರೆ ಗ್ರಾಮ ಸಮಿತಿಯ ಸಭೆಯು ಜು.26 ರಂದು ಬೆಳ್ಳಾರೆಯಲ್ಲಿ ವಿಠಲ ದಾಸ್ ಮಾಸ್ತಿಕಟ್ಟೆ ಇವರ ಮನೆಯ ಆವರಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ವಹಿಸಿದ್ದರು. ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಹಿರಿಯ ಕಾಂಗ್ರೆಸ್ ನಾಯಕಿಯಾದ ಶ್ರೀಮತಿ ರಾಜೀವಿ.ಆರ್ ರೈ ಪುಡ್ಕಜೆ, ಬ್ಲಾಕ್ ಉಪಾಧ್ಯಕ್ಷರಾದ ಅನಿಲ್ ರೈ ಬೆಳ್ಳಾರೆ, ವಿಠಲದಾಸ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಹಮೀದ್ ಹೆಚ್.ಎಂ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ಪರಿಶಿಷ್ಟ ಜಾತಿ ಬ್ಲಾಕ್ ಘಟಕದ ಅಧ್ಯಕ್ಷರಾದ ಮಹೇಶ್ ಬೆಳ್ಳಾರ್ಕರ್, ನಂದರಾಜ್ ಸಂಕೇಶ್ ಉಪಸ್ಥಿತರಿದ್ದರು. ಸಭೆಯನ್ನು ಉದ್ದೇಶಿಸಿ ಬ್ಲಾಕ್ ಕಾರ್ಯದರ್ಶಿ ಭವಾನಿ ಶಂಕರ್ ಕಲ್ಮಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೀವಿ ರೈ ಪುಡ್ಕಜೆ ಅವರು ಕಾರ್ಯಕರ್ತರನ್ನುದೇಶಿಸಿ ಮಾತನಾಡಿ ಪಕ್ಷ ಸಂಘಟನೆಗೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಮಾತನಾಡಿ ಬೆಳ್ಳಾರೆಯ ಬೇಡಿಕೆಗಳಾದ ಪ್ರಾಥಮಿಕ ಸರಕಾರಿ ಆಸ್ಪತ್ರೆಯನ್ನು ದಿನದ ಇಪ್ಪತ್ತನಾಲ್ಕು ತಾಸು ಸರ್ಕಾರಿ ವೈದ್ಯರು ಕಾರ್ಯನಿರ್ವಹಿಸುವ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲು ಆರೋಗ್ಯ ಮಂತ್ರಿಗಳ ಜೊತೆ ಹೋಗಿ ಮಾತನಾಡಲು ಸಹಕರಿಸುವುದಾಗಿ ಹೇಳಿದರು. ಬೆಳ್ಳಾರೆಯ ಅಭಿವೃದ್ದಿಗೆ ಬೇಕಾದ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದು ಪ್ರಯತ್ನಿಸುವುದಾಗಿ ತಿಳಿಸಿದರು. 

. . . . . . . . .

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯರಾಮ ಉಮಿಕ್ಕಳ ಬಿಜೆಪಿ ಪಕ್ಷವನ್ನು ತೊರೆದು ಅಧಿಕೃತವಾಗಿ ಬ್ಲಾಕ್ ಅಧ್ಯಕ್ಷರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ಸಭೆಯನ್ನು ಉದ್ದೇಶಿಸಿ ಬ್ಲಾಕ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಮಾತಾನಾಡಿ ಪಕ್ಷವನ್ನು ಸದೃಢವಾಗಿ ಗ್ರಾಮ ಪಂಚಾಯತ್ ಚುನಾವಣೆಗೆ ತಯಾರಾಗುವಂತೆ ತಿಳಿಸಿದರು. ಬ್ಲಾಕ್ ಮಟ್ಟದಿಂದ ಬೇಕಾದ ಎಲ್ಲಾ ತರಹದ ಸಹಕಾರ ನೀಡುವುದಾಗಿ ತಿಳಿಸಿದರು. ಸಭೆಯಲ್ಲಿ ಹೊಸ ಗ್ರಾಮ ಸಮಿತಿಯನ್ನು ರಚಿಸಲಾಯಿತು. 

. . . . . . .

ಕಾಂಗ್ರೆಸ್ ಪಕ್ಷದ ಬೆಳ್ಳಾರೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ವಿಠಲ ದಾಸ್ ಮಾಸ್ತಿಕಟ್ಟೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹಿಮಾನ್, ಮಣಿಕಂಠ ಕಲ್ಲೋಣಿ, ಆನಂದ ಬೆಳ್ಳಾರೆ, ರಝಾಕ್ ಬಂಡಿಮಜಲು, ಶಶಿಕಲಾ ರೈ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಅಹ್ಮದ್ ನೇಲ್ಯಮಜಲು , ಕಾರ್ಯದರ್ಶಿಗಳಾಗಿ ಸಂಜೀವ ಮಣಿಯಾಣಿ, ಹುಸೈನ್ ಸಾಹೇಬ್ ದರ್ಖಾಸ್ತು, ವಿಠಲ ಪಾಟಾಜೆ, ಲಲಿತಾ ಮೂಲ್ಯ, ಜನಾರ್ಧನ ಬೆಳ್ಳಾರೆ,ಕಾರ್ಯಕಾರಿ ಸದಸ್ಯರಾಗಿ ಅಬ್ದುಲ್ ಕುಂಞ ಉಮಿಕ್ಕಳ, ಮುಸ್ತಫಾ ಕಲ್ಲಪಣೆ, ಜಯಂತಿ, ಸುಶೀಲ,ವಸಂತಿ ಪಾಟಾಜೆ, ಶಕುಂತಲಾ ನಾಗರಾಜ್, ಮಾಧವ ಬೀಡು, ಅಜರುದ್ದೀನ್, ಯಶವಂತ, ಮಹೇಂದ್ರ, ಉಷಾ ನವಗ್ರಾಮ,ಇಬ್ರಾಹಿಂ ಬೀಡು, ವೇದಾವತಿ, ಖಲೀಲ್ ಬಿಸ್ಮಿಲ್ಲಾ, ಬಶೀರ್ ಉಮಿಕ್ಕಳ, ನಳಿನಿ ತಡಗಜೆ, ಸುಂದರಿ ಪಾಟಾಜೆ, ಜುಬೈರ್ ಮಾಸ್ತಿಕಟ್ಟೆ, ಕಂದಸ್ವಾಮಿ ದರ್ಖಾಸ್ತು, ಲೋಕನಾಥ ಕಲ್ಲೋಣಿ, ಮುರಳಿ ಕಲ್ಲೋಣಿ, ಬಶೀರ್ ಯು.ಪಿ ಉಮಿಕ್ಕಳ, ಹರಿಶ್ಚಂದ್ರ ದರ್ಖಾಸ್ತು, ರಫೀಕ್ ಕಲ್ಲೋಣಿ,ಜಯರಾಮ ಉಮಿಕ್ಕಳ, ಸುಂದರ ರಾಜ್ ನವಗ್ರಾಮ ಇವರನ್ನು ನೇಮಕ ಮಾಡಲಾಯಿತು. ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ನೇಲ್ಯಮಜಲು ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading