ಸುಳ್ಯ : ಎನ್.ಎಂ ಪಿಯುಸಿ ಯಲ್ಲಿ ನೂತನ ದೃಕ್ ಶ್ರವಣೋಪಕರಣ ಕೊಠಡಿ ಉದ್ಘಾಟನೆ

ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಆಧುನಿಕ ತಾಂತ್ರಿಕತೆ, ವಿನ್ಯಾಸಗಳನ್ನು ಒಳಗೊಂಡ ದೃಕ್ ಶ್ರವಣೋಪಕರಣ ಕೊಠಡಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಎ.ಓ.ಎಲ್.ಇ(ರಿ.) ಉಪಾಧ್ಯಕ್ಷರಾದ ಶೋಭಾ ಚಿದಾನಂದ ಉದ್ಘಾಟಿಸಿದರು.

. . . . . . . . .

ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ ಸಿ ಅವರು ದೀಪ ಪ್ರಜ್ವಲನಗೈದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಪದವಿ ವಿಭಾಗದ ಪ್ರಾಚಾರ್ಯರಾದ ಡಾ. ರುದ್ರ ಕುಮಾರ್ ಎಂ.ಎಂ, ಪಿಯು ಪ್ರಾಚಾರ್ಯರಾದ ಮಿಥಾಲಿ.ಪಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಪ್ರಾಚಾರ್ಯರಾದ ಮಿಥಾಲಿ.ಪಿ ರೈ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ.ಎಂ ವಂದಿಸಿದರು. ಕೆವಿಜಿ ಸಮೂಹ ಸಂಸ್ಥೆಯ ಉದ್ಯೋಗಿಗಳು, ಪಿಯು, ಪದವಿ ವಿಭಾಗದ ಬೋಧಕ ಬೋಧಕೇತರ ವೃಂದದವರು ಉಪಸ್ಥಿರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading