ಕೆರೆಮೂಲೆ ನಿವಾಸಿಗಳಿಗೆ ರಸ್ತೆ ನಿರ್ಮಾಣಕ್ಕೆ ಆಗ್ರಹ: ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಎಚ್ಚರಿಕೆ; ಗಿರಿಧರ ನಾಯ್ಕ್

ಸುಳ್ಯ: ಸುಳ್ಯದ ಕೆರೆಮೂಲೆ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಒಂದು ಮನೆ ಸೇರಿದಂತೆ ಇತರ ಮನೆಗಳಿಗೆ ಕಳೆದ ಸುಮಾರು 42 ವರ್ಷಗಳಿಂದಲೂ ಕಾಲುದಾರಿ ಮಾತ್ರ ಇದ್ದು, ಸಂಪರ್ಕ ರಸ್ತೆಯಿಲ್ಲದೆ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕದ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಆರೋಪಿಸಿದರು.

. . . . . . . . .

ಅವರು ಜು. 25ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿ ಮಾತನಾಡಿ, ಈ ಕುರಿತು ಸಂಘಟನೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಹಲವು ಬಾರಿ ತೊಂದರೆ ಉಂಟಾಗಿರುವುದಲ್ಲದೆ, ಇತ್ತೀಚೆಗೆ ತುರ್ತು ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಸಮಯಕ್ಕೆ ಸರಿಯಾಗಿ ಸಾಗಿಸಲು ಸಾಧ್ಯವಾಗದೆ ಜೀವಹಾನಿ ಸಂಭವಿಸಿದೆ.

. . . . . . .

ಇದಲ್ಲದೆ, ಪಡಿತರ ಹಾಗೂ ದಿನಸಿ ಸಾಮಗ್ರಿಗಳನ್ನು ತಂದುಕೊಳ್ಳಲು ನಿವಾಸಿಗಳು ಪರದಾಡುವಂತಾಗಿದ್ದು, ಶಾಲಾ ಮಕ್ಕಳು ಸಹ ಪ್ರತಿದಿನ ಕಾಲ್ನಡಿಗೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವು ವರ್ಷಗಳಿಂದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲ್ಲದೆ ಇರುವುದು ಶೋಚನೀಯ ಸಂಗತಿಯಾಗಿದೆ.

ಆದ್ದರಿಂದ, ಸೆಪ್ಟೆಂಬರ್ 20ರ ಒಳಗಾಗಿ ಕೆರೆಮೂಲೆ ಪ್ರದೇಶದ ಕಾಲುದಾರಿಯನ್ನು ಸಂಪರ್ಕ ರಸ್ತೆಯಾಗಿ ಅಭಿವೃದ್ಧಿಪಡಿಸಿ ಮೂಲಭೂತ ಸೌಲಭ್ಯ ಒದಗಿಸುವಂತೆ
ಆಗ್ರಹಿಸಿದರು. ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಿವಾಸಿಗಳಾದ ಸುಧಾ ಕೆರೆಮೂಲೆ, ಸಂತೋಷ್, ಲಕ್ಷ್ಮೀ, ಸಮೀಕ್ಷಾ ಉಪಸ್ಥಿತರಿದ್ದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading