ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ : 23-07-2026 ಗುರುವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ
ಮಂಡೆಕೋಲು, ಸುಳ್ಯ
ಮೊ: 9591969197

. . . . . . . . .

*01,🐏ಮೇಷರಾಶಿ🐏*

. . . . . . .

📃,ಈ ದಿನ ಸಾಲಕ್ಕೆ ಸಂಬಂಧ ಪಟ್ಟ ವಿಚಾರಗಳಿಂದ ದೂರವಿರಿ, ಅತಿ ಮುಖ್ಯ ನಿರ್ಣಯಗಳನ್ನು ಇಂದು ಮುಂದೂಡಿ, ಈ ದಿನ ದುಃಖದಾಯಕ ಘಟನೆಗಳು ಸಂಭವಿಸಬಹುದು, ಯಾವುದೇ ರೀತಿಯ ಮನಸ್ತಾಪ ಜಗಳಗಳಿಗೆ ಭಾಗಿಯಾಗದಿರಿ, ಮಾನಸಿಕ ಚಿಂತೆ ನಿಮ್ಮನ್ನಿಂದು ಕಾಡುವುದು,

ಗಮನಿಸಿ:-ಇಂದು ನಿಮ್ಮ

ಖರ್ಚಿನ ಕಡೆ ವಿಶೇಷ ಗಮನವಿರಲಿ,

ಪರಿಹಾರ:-ಶಿವಾಲಯಕ್ಕೆ ಭೇಟಿ ಕೊಡಿ,

*02,🐂ವೃಷಭರಾಶಿ🐂*

📃,ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು, ಜನಾಭಿಪ್ರಾಯವು ನಿಮ್ಮ ಪರವಾಗುವುದು ಜನ ಮನ್ನಣೆ ನಿಮಗಿಂದು ದೊರೆಯುವದು,

ಗಮನಿಸಿ:-ನೀವುಈ ದಿನ ಮಾಡುವ ಕೆಲಸಗಳು ನಿಮಗೆ ಶುಭವಾಗುವವು,

ಪರಿಹಾರ:-ಈ ದಿನ ವೆಂಕಟೇಶ್ವರನ ದರ್ಶನ ಮಾಡಿ,

*03,👥ಮಿಥುನರಾಶಿ👥*

📃,ಕೆಲವು ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ, ಸ್ವಉದ್ಯೋಗ ಯೋಜನೆಗಳಿಗೆ ಚಾಲನೆ ದೊರೆಯುವುದು ಮತ್ತು ಅದರಿಂದ ಸಾಕಾರಸಿದ್ದಿಯು ಲಭಿಸುವುದು, ಈ ದಿನ ನಿಮ್ಮನ್ನು ಆಲಸ್ಯವು ಅಸಫಲತೆ ನಿಮ್ಮದಾಗುವುದು,

ಗಮನಿಸಿ:-ಇಂದು ನೀವು ಹೊಸ ಯೋಜನೆಗಳನ್ನು ಅಥವಾಹೊಸಕಾರ್ಯಗಳನ್ನು.ನಿಶ್ಚಿನಿತರಾಗಿ ಆರಂಭಿಸಬಹುದು,

ಪರಿಹಾರ:-ಶ್ರೀ ಆಂಜನೇಯ ಸ್ತೋತ್ರ ಪಠಿಸಿ,

*04,🦀ಕಟಕ ರಾಶಿ🦀*

📃,ಈ ದಿನ ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು, ಹೊಸ ಕಾರ್ಯವನ್ನು ಆರಂಭಿಸಲು ಖರೀದಿ/ಮಾರಾಟ ವ್ಯವಹಾರಗಳನ್ನು ಮಾಡಲು ಈ ದಿನ ಉತ್ತಮವಾಗಿದೆ, ಮನುಜನು ಮಾಡುವ ಕೆಲಸ ಯಶಸ್ವಿಯಾಗುವುದಕ್ಕೆ ಕೇವಲ ಲೌಕಿಕ ಪ್ರಯತ್ನ ಸಾಲದು,

ಗಮನಿಸಿ:- ದೇವರ ಆಶೀರ್ವಾದಕ್ಕಾಗಿ, ನಿಮ್ಮ ಮನೆ ದೇವರ ದರ್ಶನ ಮಾಡಿ, 

ಪರಿಹಾರ:-ನಿಮ್ಮ ಕುಲದೇವರ ಪ್ರಾರ್ಥನೆ ಅಥವಾ ದರ್ಶನ ಮಾಡಿ,

*05,🦁ಸಿಂಹ ರಾಶಿ🦁*

📃,ನೆನೆಬಿದ್ದ ಕೆಲಸಗಳಿಂದಾಗಿ ನಿಮ್ಮಲ್ಲಿ ಇಂದು ಲವಲವಿಕೆ ಕಂಡು ಬರುವುದಿಲ್ಲ. ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ. ಈ ದಿನವೂ ನಿಮ್ಮ ಮನವು ಅಸ್ತವ್ಯಸ್ತವಾಗಿರುವದು, ಶಾಂತಚಿತರಾಗಿರಲು ಪ್ರಯತ್ನಿಸಿ,

ಗಮನಿಸಿ:- ಇಂದು ನಿಮ್ಮ ಪರಿಸ್ಥಿತಿಗಳನ್ನು ಸಮರ್ಥ ರೀತಿಯಿಂದ ಎದುರಿಸಿ, 

ಪರಿಹಾರ:-ಶಿವಮಂತ್ರವನ್ನು ಪಠಿಸಿ,

*06👩‍🦳ಕನ್ಯಾ ರಾಶಿ👩‍🦳*

📃,ಬಾಳಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಾಗುವುದು. ಉದ್ಯೋಗದಲ್ಲಿ ದಿಢೀರನೆ ಸಮಸ್ಯೆಗಳು ಎದುರಾಗುವ ಸಂದರ್ಭವಿದೆ. ಕೆಲವು ವಿಷಯಗಳಲ್ಲಿ ಆತುರದ ನಿರ್ಧಾರವು ಕೆಡಕುಗಳಿಗೆ ಮೂಲ ಕಾರಣವಾಗುವುದು. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ದೊರೆಯುತ್ತದೆ, ಗಮನಿಸಿ:-ಇಂದುನಿಮ್ಮ

ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ,

ಪರಿಹಾರ:-ಶ್ರೀಗುರುರಾಘವೇಂದ್ರರ ಪ್ರಾರ್ಥನೆ ಮಾಡಿ,

*07,⚖️ತುಲಾ ರಾಶಿ⚖️*

📃,ಸಣ್ಣ ವಿಷಯವೂ ಗಹನವಾಗಿ ಕಾಡುವುದು. ಸಣ್ಣಪುಟ್ಟ ವಿಷಯಗಳೇ ನಿಮ್ಮ ಮನಸ್ಸಿನ ಚಿಂತೆಗೆ ಕಾರಣವಾಗುವವು. ಹಣಕಾಸಿನ ಮೇಲೆ ಹೆಚ್ಚಿನ ಹಿಡಿತವಿಟ್ಟುಕೊಳ್ಳುವುದು ಒಳ್ಳೆಯದು. ಸಾಲಕ್ಕೆ ಸಂಬಂದಿಸಿದ ವಿಚಾರಗಳನ್ನು ಈ ದಿನ ಮುಂದೂಡುವದು ಶುಭ, ಗಮನಿಸಿ:-ಇಂದು ನಿಮ್ಮ ಮಕ್ಕಳ ಸಮಸ್ಯೆಗಳನ್ನು ನಿಭಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ, 

ಪರಿಹಾರ:-ನಿಮ್ಮಕುಲದೇವರನ್ನು ಸ್ಮರಣೆ ಮಾಡಿ,

*08,🦂ವೃಶ್ಚಿಕ ರಾಶಿ🦂*

📃,ತುಂಬಿದ ಕೊಡ ತುಳಕಲಾರದು. ಅಂತೆಯೆ ಖಾಲಿ ಇರದ ಕೊಡವೂ ಶಬ್ದ ಮಾಡಲಾರದು. ಆದರೆ ನೀವು ತುಂಬಿದ ಕೊಡದಂತೆ ಸಮಯಕ್ಕೆ ತಕ್ಕಂತೆ ನಡೆದುಕೊಳ್ಳುವ ಸ್ವಭಾವ ಇರುವ ನಿಮ್ಮನ್ನು ಎಲ್ಲರೂ ಮೆಚ್ಚುವರು. ಹಣಕಾಸಿನ ವಿಚಾರ ಪ್ರಗತಿಯಲ್ಲಿರುತ್ತದೆ. ಗಮನಿಸಿ:- ಇಂದು ನಿಮ್ಮ ದೇಹದ ನೋವು ಮತ್ತು ಒತ್ತಡ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ, 

ಪರಿಹಾರ:-ಶಿವ ನಾಮ ಸ್ಮರಣೆ ಮಾಡಿ,

*09,🏹ಧನಸ್ಸುರಾಶಿ🏹*

📃,ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ಉಂಟಾಗುತ್ತದೆ, ಗಮನಿಸಿ:-ಇಂದು ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ, 

ಪರಿಹಾರ:-ಶ್ರೀಗಣಪತಿಯನ್ನು ನೆನೆಯಿರಿ,

*10,🐊ಮಕರ ರಾಶಿ🐊*

📃,ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಗಮನಿಸಿ:- ಇಂದು ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ,

ಪರಿಹಾರ:-ವಿಷ್ಣು ಸಹಸ್ರ ನಾಮ ಜಪಿಸಿ,

*11,⚱️ಕುಂಭ ರಾಶಿ⚱️*

📃, ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ವಾತಾವರಣವು ಅನುಕೂಲಕರವಾಗುತ್ತದೆ. ಹಠಾತ್ ಧನ ವ್ಯಯದ ಸೂಚನೆಗಳಿವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ.ಹಣಕಾಸಿನ ವ್ಯವಹಾರಗಳು ನಿರುತ್ಸಾಹ ಗೊಳಿಸುತ್ತದೆ,

ಗಮನಿಸಿ:-ಇಂದು ಸಣ್ಣ ಅನಾರೋಗ್ಯದ ಸೂಚನೆಗಳಿವೆ, 

ಪರಿಹಾರ:- ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿ,

*12,🐬ಮೀನ ರಾಶಿ🐬*

📃,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ,

ಗಮನಿಸಿ:-ಗುರು ಹಿರಿಯರ ಸಲಹೆ ಪಡೆಯಿರಿ,

ಪರಿಹಾರ:-ಇಷ್ಟ ದೈವದ ಪ್ರಾರ್ಥನೆ ಮಾಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading