ಬಾಂಜಿಕೋಡಿ ಪ್ರದೇಶವನ್ನು ನಗರ ವ್ಯಾಪ್ತಿಗೆ ಸೇರಿಸದಂತೆ ಗ್ರಾಮಸ್ಥರಿಂದ ಮನವಿ

ಐವರ್ನಾಡು ಗ್ರಾಮದ ಬಾಂಜಿಕೋಡಿ ಪ್ರದೇಶವನ್ನು ನಗರ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ಗ್ರಾಮಸ್ಥರು ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

. . . . . . . . .

ಕರ್ನಾಟಕ ಭೂ ಕಂದಾಯ ಅಧಿನಿಯಮ ಹಾಗೂ ಭೂಮಸೂದೆ ತಿದ್ದುಪಡಿ ಕಾಯಿದೆಯಡಿ ನಗರ ವ್ಯಾಪ್ತಿಯನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸುಳ್ಯ ನಗರವನ್ನು ಕೇಂದ್ರವಾಗಿಟ್ಟುಕೊಂಡು, ಸುಳ್ಯದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಬಾಂಜಿಕೋಡಿ ಪ್ರದೇಶವನ್ನು ನಗರ ವ್ಯಾಪ್ತಿಗೆ ಒಳಪಡಿಸುವ ಸೂಚನೆ ಕಂಡು ಬಂದಿದೆ. ಇದರಿಂದ ಈ ಭಾಗದ ಕೃಷಿಕರ ಜಮೀನುಗಳು ಹಾಗೂ ಕೃಷಿಕರ ಸ್ವಾಧೀನದಲ್ಲಿರುವ ಭೂಮಿಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಅನೇಕರು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

. . . . . . .

ಬಾಂಜಿಕೋಡಿ ಪ್ರದೇಶವು ಗ್ರಾಮೀಣ ಮತ್ತು ಕೃಷಿ ಪ್ರಧಾನ ಪ್ರದೇಶವಾಗಿರುವುದರಿಂದ, ನಗರ ವ್ಯಾಪ್ತಿಯ ಮಾನದಂಡಗಳಿಗೆ ಇದು ಹೊಂದಿಕೆಯಾಗುವುದಿಲ್ಲ. ಹೀಗಾಗಿ ಸದರಿ ಪ್ರದೇಶವನ್ನು ನಗರ ವ್ಯಾಪ್ತಿಗೆ ಸೇರಿಸದಿರುವ ಕುರಿತು ಐವರ್ನಾಡು ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು, ಸಂಬಂಧಪಟ್ಟ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಸೂಕ್ತ ಕ್ರಮ ಕೈಗೊಂಡು ಕೃಷಿಕರ ಹಿತಾಸಕ್ತಿಯನ್ನು ಕಾಪಾಡುವಂತೆ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಮಂಜುನಾಥ ಮಡ್ತಿಲ, ರಾಜೇಶ್ ಭಟ್ ಬಾಂಜಿಕೋಡಿ, ರಂಜನ್ ಮೂಲೆತೋಟ, ಸದಾನಂದ ಹುಲಿಮನೆ, ಅನಂತ ಕುಮಾರ್ ಖಂಡಿಗೆಮೂಲೆ, ಮಹೇಶ್ ಹುಲಿಮನೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading