ಇಂಧನ ಕೇತ್ರದಲ್ಲಿ ವಿಫುಲ ಅವಕಾಶ – ಸುಳ್ಯದಲ್ಲಿ ಆರಂಭವಾಗಲಿದೆ PNG, CNG ಹಾಗೂ LNG ವೃತ್ತಿಪರ ಕೋರ್ಸ್

ಸುಳ್ಯ: ಸುಬ್ಬಯ್ಯ ನಾಯ್ಕ ಶಿಕ್ಷಣ ಮತ್ತು ದೇವಕಿ ಅಮ್ಮ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಟ್ಟಿಪಳ್ಳದಲ್ಲಿರುವ ವಿಜಯಾನಂದ ಸ್ಕೂಲ್ ಆಫ್ ಎನರ್ಜಿ, ಹಿರಿಯರ ಮನೆ ಹಾಗೂ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದಲ್ಲಿ 6 ತಿಂಗಳ ವೃತ್ತಿಪರ PNG, CNG ಹಾಗೂ LNG ತರಬೇತಿ ಕೋರ್ಸ್‌ಗೆ ಪ್ರವೇಶ ಆರಂಭಿಸಲಾಗಿದೆ ಎಂದು ವಿಜಯಾನಂದ ಸುಳ್ಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

. . . . . . . . .

ಅವರು ಮಾತನಾಡಿ, ಇಂಧನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಈ ತರಬೇತಿ ಕೋರ್ಸ್ ಅನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ PNG (Piped Natural Gas), CNG (Compressed Natural Gas) ಹಾಗೂ LNG (Liquefied Natural Gas) ವ್ಯವಸ್ಥೆಗಳ ಅಳವಡಿಕೆ, ಸುರಕ್ಷತಾ ಕ್ರಮಗಳು ಮತ್ತು ನಿರ್ವಹಣೆಯ ಕುರಿತು ಪ್ರಾಯೋಗಿಕ ಹಾಗೂ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

. . . . . . .

ಈ ತರಬೇತಿ ಕೋರ್ಸ್ ಸೆಪ್ಟೆಂಬರ್ 16, 2026ರಿಂದ ಆರಂಭವಾಗಲಿದ್ದು, ಆನ್‌ಲೈನ್ ತರಗತಿಗಳನ್ನು ಅಕ್ಟೋಬರ್ 26ರಿಂದ ಆರಂಭಿಸಲಾಗುತ್ತದೆ. ಕೋರ್ಸ್‌ನ ಅವಧಿ 6 ತಿಂಗಳುಗಳಾಗಿದ್ದು, ಶುಲ್ಕ ರೂ. 30,000 ನಿಗದಿಪಡಿಸಲಾಗಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಪ್ರಸ್ತುತ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಮಾಹಿತಿಗಾಗಿ ವಿಜಯಾನಂದ ಸ್ಕೂಲ್ ಆಫ್ ಎನರ್ಜಿ, ಹಿರಿಯರ ಮನೆ, ವಿಷನ್ ಚಾರಿಟೇಬಲ್ ಟ್ರಸ್ಟ್, ಜಟ್ಟಿಪಳ್ಳ, ಸುಳ್ಯ, ದಕ್ಷಿಣ ಕನ್ನಡ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8951767355 ಹಾಗೂ 9449065355 ಸಂಖ್ಯೆಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading