ಬೆಳ್ಳಾರೆ-ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ವಿಷಯ ಮಂಡನೆ

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ.ಅ)ಜುಮುಅ: ಮಸೀದಿಯಲ್ಲಿ ಪ್ರವಾದಿ ಪೈಗಂಬರ್(ಸ್ವ.ಅ)ರವರ ಮೇಲೆ ಪ್ರತಿ ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ನಡೆಸುವ ಸ್ವಲಾತ್ ಮಜ್ಲಿಸಿನ ಮಾಸಿಕ ಸ್ವಲಾತ್ ಮಜ್ಲಿಸ್ ಜು 19ರಂದು ಮಗ್ರಿಬ್(ಮುಸ್ಸಂಜೆ) ನಮಾಝಿನ ನಂತರ 7-30ಕ್ಕೆ ನಡೆಯಿತು. ಈ ಮಸೀದಿಯ ಖತೀಬ್ ಮುಹಮ್ಮದ್ ಸವಾದ್ ಮದನಿ ಹಾಗೂ ಇಲ್ಲಿನ ಮದರಸ ಅಧ್ಯಾಪಕ ಹಬೀಬುರ್ರಹ್ಮಾನ್ ಹಿಮಮಿ ಸ್ವಲಾತ್ ಮಜ್ಲಿಸಿಗೆ ನೇತೃತ್ವ ನೀಡಿದರು.

. . . . . . . . .

ಈಶಾ: ನಮಾಝಿನ ನಂತರ ರಾತ್ರಿ 8-45ಕ್ಕೆ ಬೆಳ್ತಂಗಡಿ ತಾಲೂಕಿನ ಮೂಡಡ್ಕ ಮದೀನತುಲ್ ಮುನವ್ವರ ಇಸ್ಲಾಮಿಕ್ ವಿದ್ಯಾ ಸಂಸ್ಥೆಯ ಸ್ಥಾಪಕ ಅಶ್ರಫ್ ಸಖಾಫಿ ಮೂಡಡ್ಕ ವಿಷಯ ಮಂಡಿಸಿದರು. “ಕೌಟುಂಬಿಕ ಕಲಹ, ಆತ್ಮಹತ್ಯೆ, ವಿವಾಹ ವಿಚ್ಛೇದನ, ಮಾದಕ  

. . . . . . .

ದ್ರವ್ಯದಿಂದ ದೂರವಾಗಿ ಸುಂದರ ಜೀವನ ನಡೆಸಬೇಕು.‌ ಆಡಂಬರದ ಜೀವನದ ಹಿಂದೆ ಹೋಗಬಾರದು. ಬಡ್ಡಿ ವ್ಯವಹಾರ ನಡೆಸುವವನಿಗೆ ದೇವರ ಶಾಪವಿದೆ ಎನ್ನುತ್ತಾ ಇರುವುದರಲ್ಲಿ ತೃಪ್ತಿಪಟ್ಟು ಜೀವನ ನಡೆಸಬೇಕು ಹಾಗೂ ಸತ್ಯವನ್ನು ಹೇಳಿ ವ್ಯಾಪಾರ ಮಾಡಬೇಕು, ದುಂದು ವೆಚ್ಚ ಮಾಡಬಾರದು, ಅನಾವಶ್ಯಕ ಖರ್ಚು ಮಾಡಬಾರದೆಂದರು”. ಅಂತಿಮವಾಗಿ ಸಕಲರ ಸುಂದರ ಜೀವನಕ್ಕಾಗಿ ಪ್ರಾರ್ಥನೆ ನಡೆಸಿದರು.

ಈ ಮಜ್ಲಿಸಿನಲ್ಲಿ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್(ಎಸ್.ಎಂ.ಎ) ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪೋಲಾಜೆ, ಪಳ್ಳಿಮಜಲು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹನೀಫ್ ಸಲಾಲಹ್, ಪಳ್ಳಿಮಜಲು ಮಸೀದಿ ಖತೀಬ್ ಮುಹಮ್ಮದ್ ಸವಾದ್ ಮದನಿ, ಪಳ್ಳಿಮಜಲು ಮದರಸ ಅಧ್ಯಾಪಕ ಹಬೀಬುರ್ರಹ್ಮಾನ್ ಹಿಮಮಿ, ಪಳ್ಳಿಮಜಲು ಸ್ವಲಾತ್ ಕಮಿಟಿ ಅಧ್ಯಕ್ಷ ಮೂಸಾ ಬೂಡು, ಪಳ್ಳಿಮಜಲು ಮಸೀದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬೂಡು ಹಾಗೂ ಜಮಾಅತರು ಇದ್ದರು.

ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್(ಎಸ್. ಎಂ. ಎ)ಬೆಳ್ಳಾರೆ ಪ್ರಾದೇಶಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಝಂ,ಝಂ ಸ್ವಾಗತಿಸಿದರು. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿತ್ತು. ಕೊನೆಯಲ್ಲಿ ತಬರ್ರುಖ್ ವಿತರಣೆ ನಡೆಯಿತು. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading