ಕುಕ್ಕೆ ಕ್ಷೇತ್ರದ ಗಜರಾಣಿ ‘ಯಶಸ್ವಿನಿ’ಗೆ 23ನೇ ವರ್ಷದ ಜನ್ಮದಿನದ ಸಂಭ್ರಮ

ಸುಬ್ರಹ್ಮಣ್ಯ : ನಾಗಾರಾಧನೆಯ ಮೂಲಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಯಶಸ್ವಿನಿ ಜು.18 ಶನಿವಾರ ತನ್ನ ಹುಟ್ಟಿದ ದಿನವಾಗಿ 23ನೇ ವರ್ಷಕ್ಕೆ ಪಾದಾರ್ಪಣೆ ಮಾದಿದ್ದಾಳೆ. ಹುಟ್ಟು ಹಬ್ಬದ ದಿನವಾದ ಶನಿವಾರ ಯಶಸ್ವಿನಿಯ ಹೆಸರಿನಲ್ಲಿ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಸಂಜೆ ವಿಶೇಷ ರಂಗ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಕಾಶಿಕಟ್ಟೆಯಿಂದ ಮುಖ್ಯ ರಸ್ತೆಯಲ್ಲಿ ಮೈಯಾಡಿಸುತ್ತಾ, ಸೊಂಡಿಲೆತ್ತಿ, ತಲೆಮುಟ್ಟಿ ಹರಸಿಕೊಂಡು ತೆರಳಿದ ದೃಶ್ಯ ಸುಂದರವಾಗಿ ಕಾಣುತಿತ್ತು.
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಹಿಂದಿನ ಇಂದುಮತಿಯ ಬಳಿಕ ಆ ಸ್ಥಾನಕ್ಕೆ ಬಂದ ಯಶಸ್ವಿನಿ ದೇವಳದ ಪೂಜಾಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪುಟಾಣಿ ಮಕ್ಕಳ ಹಾಗೂ ಊರ ನಾಗರಿಕರ, ಭಕ್ತಾಧಿಗಳ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
18-07-2004ರಂದು ಹುಟ್ಟಿದ ಯಶಸ್ವಿ ಆನೆಯನ್ನು 29-12-2007ರಂದು ಬಳ್ಳಾರಿ ಶಾಸಕ ಆನಂದ್ ಸಿಂಗ್ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ದಾನವಾಗಿ ನೀಡಿದಾಗ ಹೆಣ್ಣಾನೆ ಯಶಸ್ವಿ 3ರ ಹರೆಯ. ದೇವಳಕ್ಕೆ ಬಂದು 23ವರ್ಷ ಪೂರೈಸಿದ್ದು ಇದೀಗ 23ರ ಹರೆಯ. ಮುಂಜಾನೆ ಹೊಳೆಯಲ್ಲಿ ಜಳಕವಾಗಿ ಆಹಾರ ಸೇವಿಸಿದ ಬಳಿಕ ಪ್ರತಿನಿತ್ಯ ಮದ್ಯಾಹ್ನದ ಪೂಜೆಗೆ 11:45ಕ್ಕೆ ದೇವಳದಲ್ಲಿ ಹಾಜರಾಗುತ್ತದೆ. ಪೂಜೆಯ ಬಳಿಕ1:00ಗಂಟೆಗೆ ದೇವರಿಗೆ ವಂದಿಸಿ ಮತ್ತೆ ಸ್ವಸ್ಥಾನಕ್ಕೆ ತೆರಳುತ್ತದೆ. ಮದ್ಯಾಹ್ನದ ಭೋಜನದ ಬಳಿಕ ಮತ್ತೆ ಸಂಜೆ ಪೂಜೆಗೆ6:45ರಿಂದ 7:30ರ ತನಕ ದೇವಳದಲ್ಲಿ ಪೂಜೆಯ ಸಮಯ ಘಂಟೆ ಬಾರಿಸುವ ಯಶಸ್ವಿನಿ ಬಳಿಕ ಬಂದ ಭಕ್ತಾಧಿಗಳನ್ನು ಹರಸಿ ಮತ್ತೆ ಸ್ವಸ್ಥಾನ ಸೇರುವುದು ಯಶಸ್ವಿಯ ದೈನಂದಿನ ದಿನಚರಿ.
ಆಹಾರ : ರಾಗಿಮುದ್ಧೆ, ಹುರುಳಿ, ಕುಚ್ಚಲು ಅಕ್ಕಿ ಅನ್ನ, ಬೈನೆ, ತಾಳೆಗರಿ, ಕಬ್ಬು, ಬಿದಿರಿನ ಸೊಪ್ಪು ಯಶಸ್ವಿಯ ಆಹಾರ. ಮುಂಜಾನೆ 9ಕೆ.ಜಿ ರಾಗಿಮುದ್ದೆ, ಮದ್ಯಾಹ್ನ 5ಕೆ.ಜಿ ಕುಚ್ಚಲು ಅಕ್ಕಿಯ ಅನ್ನ ಮತ್ತು 5ಕೆ.ಜಿ ಹುರುಳಿ ಮಿಶ್ರಿತ ಆಹಾರ ನೀಡಲಾಗುತ್ತದೆ. ರಾತ್ರಿವೇಳೆ ಬೈನೆ, ತಾಳೆಗರಿ,ಕಬ್ಬು, ಬಿದಿರಿನ ಸೊಪ್ಪುನ್ನು ಆಹಾರವಾಗಿ ನೀಡಲಾಗುತ್ತದೆ. ಹಗಲು ಹೊತ್ತಿನಲ್ಲೂ ಕೂಡ ಸೊಪ್ಪನ್ನು ನೀಡಲಾಗುತ್ತದೆ. ಯಶಸ್ವಿಗೆ ಬೈನೆ, ತಾಳೆಗರಿ, ಬಿದಿರಿನ ಸೊಪ್ಪು ಪ್ರಿಯವಾದುದು.
ಸ್ಟೇಟಸ್ ಮೂಲಕ ಶುಭಾಶಯ : ಶನಿವಾರ ಗಜರಾಣಿ ಯಶಸ್ವಿನಿಯ ಹುಟ್ಟು ಹಬ್ಬದ ದಿನ. ಮುಂಜಾನೆಯಿಂದ ಸಾಮಾಜಿಕ ಜಾಲತಣದಲ್ಲಿ ಯಶಸ್ವಿನಿಯ ಫೋಟೋ ಹಾಕಿ ಶುಭಾಶಯಗಳನ್ನು ಮಾಡಲಾಗಿದೆ. ಸುಬ್ರಹ್ಮಣ್ಯ ಕ್ಷೇತ್ರದ ಪ್ರತಿಯೊಬ್ಬ ಜನರ ಮೊಬೈಲ್ ಸ್ಟೇಟಸ್‌ನಲ್ಲಿ ಗಜರಾಣಿಯ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರ. ಸುಬ್ರಹ್ಮಣ್ಯ ಅಲ್ಲದೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತಾಧಿಗಳ ಶುಭಾಶಯಗಳು ಕೂಡ ಜಾಲತಾಣಗಳಲ್ಲಿ ಕಂಡುಬಂತು. ಅಲ್ಲದೆ ಸುಬ್ರಹ್ಮಣ್ಯ ಜನತೆಯಿಂದ ಹುಟ್ಟುಹಬ್ಬದ ಸಲುವಾಗಿ ಹಲಸಿನ ಕಾಯಿ, ಕಬ್ಬು, ಬಾಳೆಹಣ್ಣು ಇನ್ನಿತರ ವಸ್ತಗಳನ್ನು ಆಹಾರವಾಗಿ ನೀಡಿ ಹರಸಿದರು.
ಫೋಟೋ : ಪ್ರಕಾಶ್, ಪ್ರತಿರೂಪ ಡಿಜಿಟಲ್ ಸುಬ್ರಹ್ಮಣ್ಯ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading