ಪೋಷಕರು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕು: ಬಿ.ವಿ. ಸೂರ್ಯನಾರಾಯಣ

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಮನೆ ಮತ್ತು ಶಾಲೆ ಎರಡು ಸಮಾನ ಪಾಲುದಾರರು. ಪೋಷಕರ ಪ್ರೋತ್ಸಾಹ ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಒಂದಾದಾಗ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತದೆ. ಶಿಕ್ಷಕರ ಹಾಗೂ ಪೋಷಕರ ಧನಾತ್ಮಕ ನಡವಳಿಕೆಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಪೋಷಕರು ಮಕ್ಕಳೊಂದಿಗೆ ಧನಾತ್ಮಕ ಮನೋಭಾವದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕು. ಆ ಮೂಲಕ ಮಕ್ಕಳನ್ನು ಅರ್ಥ ಮಾಡಿಕೊಂಡು ಅವರ ಕಲಿಕೆಯನ್ನು ಸುಗಮಗೊಳಿಸಲು ಶಿಕ್ಷಕರಿಗೆ ಸಾಧ್ಯವಾಗುತ್ತದೆ ಎಂದು ಕೆಪಿಎಸ್ ಬೆಳ್ಳಾರೆ ಇದರ ವಿಶ್ರಾಂತ ಪ್ರಾಂಶುಪಾಲರಾದ ಬಿ.ವಿ. ಸೂರ್ಯನಾರಾಯಣ ಇವರು ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದಲ್ಲಿ ಜು. 17ರಂದು ನಡೆದ ಪೋಷಕರ ಶೈಕ್ಷಣಿಕ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸವನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಎಸ್‌ಡಿಎಂಸಿ ಕಾರ್ಯಧ್ಯಕ್ಷ ಹರ್ಷ ಜೋಗಿ ಬಿಟ್ಟು ಅವರು  ತಂದೆ ತಾಯಿಗಳು ಮಕ್ಕಳಿಗೆ ತಮ್ಮ ಅನುಭವದ ಮೇಲೆ ಪ್ರಪಂಚವನ್ನ ತೋರಿಸುವಂತಹ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಕೆಪಿಎಸ್ ಬೆಳ್ಳಾರೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಕೂಡ ಒಂದಿಷ್ಟು ಕಲಿಕೆಯನ್ನ ಪಡೆಯುವಂತಹ ಒಂದು ಅವಕಾಶ ಇದೆ. ಅಂತಹ ಸಂಸ್ಥೆಯಲ್ಲಿ ನಾವೆಲ್ಲರೂ ಇರುವಂತದ್ದು ನಮಗೆ ಸಂತಸ ತಂದಿದೆ ಎಂದರು.
ಶಾಲೆಯ ಪದವೀಧರೆತರ ಮುಖ್ಯೋಪಾಧ್ಯಾಯ ಮಾಯಿಲಪ್ಪ ಜಿ. ಯವರು ಶಾಲೆಯು ನಡೆದು ಬಂದ ದಾರಿ, ಪೋಷಕರ ಸಹಕಾರ ಹಾಗೂ ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪೋಷಕರಿಗೆ ನೀಡಿದರು. ಶಾಲೆಯ ಸಹ ಶಿಕ್ಷಕ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ ದಿನೇಶ್ ಮಾಚಾರ್ ರವರು ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವ ಬಗ್ಗೆ ಜಾಗರೂಕತೆಯನ್ನು ವಹಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ತೊಡಗಿಸಿ ಕೊಳ್ಳದಂತೆ ಜಾಗೃತ ವಹಿಸಬೇಕು ಮತ್ತು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್‌ಡಿಎಂಸಿ ಸದಸ್ಯ ನವೀನ್ ಸಾರಕೆರೆ, ಸುಜಾತ, ತಾಯಂದಿರ ಸಮಿತಿಯ ಅಧ್ಯಕ್ಷೆ ರೇಷ್ಮಾ ಉಪಸ್ಥಿತರಿದ್ದರು. ಎಲ್‌ಕೆಜಿಯಿಂದ 7ನೇ ತರಗತಿ ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
ವಿದ್ಯಾರ್ಥಿನಿ ರಶ್ಮಿ ಪಿ.ಆರ್. ಪ್ರಾರ್ಥಿಸಿ, ಶಿಕ್ಷಕಿ ಶಾಂತಕುಮಾರಿ ಸ್ವಾಗತಿಸಿ, ಶಿಕ್ಷಕಿ ಸುಶೀಲ ಹೆಗಡೆ ವಂದಿಸಿ, ಶಿಕ್ಷಕಿ ಅರುಣಾಕ್ಷಿ ಕೆ.ಎಲ್. ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading