ಸುಳ್ಯ-ಕಡಬದಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಸುಳ್ಯ: ಸುಳ್ಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

. . . . . . . . .

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಮಿತ್ತಡ್ಕ, ಅಮರ ಮುಡ್ನೂರು ಗ್ರಾಮದ ದೊಡ್ಡತೋಟ ಹಾಗೂ ಕಡಬ ತಾಲೂಕಿನ ಐನೆಕಿದು ಗ್ರಾಮದ ಐನೆಕಿದು ಕೇಂದ್ರಗಳಲ್ಲಿ ನೇಮಕಾತಿ ನಡೆಯಲಿದೆ.

. . . . . . .

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸುಳ್ಯ ಕಸಬಾ ಗ್ರಾಮದ ವಾರ್ಡ್-13ರ ಬೂಡು, ವಾರ್ಡ್-16ರ ಕಾಯರ್ತೋಡಿ, ವಾರ್ಡ್-4ರ ಬೆಟ್ಟಂಪಾಡಿ, ಮರ್ಕಂಜ ಗ್ರಾಮದ ದಾಸರಬೈಲು, ದೇವಚಳ್ಳ ಗ್ರಾಮದ ಸೇವಾಜೆ, ವಾಲ್ತಾಜೆ, ಕಂದ್ರಪ್ಪಾಡಿ, ಮುಪ್ಪೇರಿಯ ಗ್ರಾಮದ ಇಂದ್ರಾಜೆ, ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಹಾಗೂ ನಡುಗಲ್ಲು, ಅಮರ ಮುಡ್ನೂರು ಗ್ರಾಮದ ಹಾಸನಡ್ಕ ಮತ್ತು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಮರ್ದೂರಡ್ಕ ಹಾಗೂ ಏನೆಕಲ್ಲು ಗ್ರಾಮದ ದೇವರಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ನೇಮಕಾತಿ ನಡೆಯಲಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಸಂಬಂಧಿತ ಗ್ರಾಮದ 19ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 10, 2026 ಸಂಜೆ 5.30 ಆಗಿದ್ದು, ಬಳಿಕ ಸ್ವೀಕರಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೆಸ್ಕಾಂ ಕಚೇರಿ ಸಮೀಪ, ಕುರುಂಜಿಭಾಗ್ ಅಂಚೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಅಥವಾ ದೂರವಾಣಿ 08257-298139 ಅನ್ನು ಸಂಪರ್ಕಿಸಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading