ಸ್ಥಗಿತಗೊಂಡ ಸಿಎಲ್-2ಎ ಮದ್ಯದಂಗಡಿಗಳ ಸನ್ನದು ಮರುಹಂಚಿಕೆಗೆ ಇ-ಹರಾಜು; ಜು. 14ರಂದು ತರಬೇತಿ ಕಾರ್ಯಗಾರ

ಕರ್ನಾಟಕ ಸರ್ಕಾರವು ಸ್ಥಗಿತಗೊಂಡಿರುವ ಸಿಎಲ್-2ಎ ಮದ್ಯದಂಗಡಿಗಳ ಸನ್ನದುಗಳ ಮರುಹಂಚಿಕೆಗಾಗಿ ಇ-ಹರಾಜು (e-Auction) ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಸಂಬಂಧ ಆಸಕ್ತ ಬಿಡ್ ದಾರರ ಆನ್‌ಲೈನ್ ನೋಂದಣಿ ಜು. 3ರಿಂದ ಆರಂಭಗೊಂಡಿದೆ.

. . . . . . . . .

ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಂದಾಯಿತ ಬಿಡ್ ದಾರರು ಹಾಗೂ ಅಬಕಾರಿ ಇಲಾಖೆಯ ನೋಡಲ್ ಅಧಿಕಾರಿಗಳಿಗಾಗಿ ಜು. 14ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆ.

. . . . . . .

ಇ-ಹರಾಜು ಪ್ರಕ್ರಿಯೆಯು ಜು. 24ರಿಂದ 31ರವರೆಗೆ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 29 ಸಿಎಲ್-2ಎ ಮದ್ಯದಂಗಡಿಗಳ ಸನ್ನದುಗಳನ್ನು ಹರಾಜಿಗೆ ಗುರುತಿಸಲಾಗಿದೆ. ಇದರಲ್ಲಿ ಪುತ್ತೂರು ಅಬಕಾರಿ ವಲಯ ವ್ಯಾಪ್ತಿಯ ಎರಡು CL-2ಎ ಮದ್ಯದಂಗಡಿಗಳೂ ಸೇರಿವೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು, ಇ-ಹರಾಜು ಪ್ರಕ್ರಿಯೆ ಹಾಗೂ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸುವಂತೆ ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading