ಇಂದ್ರಾಜೆಯಲ್ಲಿ ಎಸ್ಎಸ್ಎಫ್ ಸಾಹಿತ್ಯೋತ್ಸವ –  ಪಳ್ಳಿಮಜಲು ಘಟಕ ಪ್ರಥಮ, ಬೆಳ್ಳಾರೆ ಘಟಕ ದ್ವಿತೀಯ

ಎಸ್ಎಸ್ಎಸ್ ಬೆಳ್ಳಾರೆ ಸೆಕ್ಟರ್ ನ 14ನೇ   ಸಾಹಿತ್ಯೋತ್ಸವವು ಕಲ್ಮಡ್ಕ ಗ್ರಾಮದ ಇಂದ್ರಾಜೆಯ ಬದ್ರಿಯಾ ಜುಮುಅ: ಮಸೀದಿ ವಠಾರದಲ್ಲಿ ಜು. 4ರಂದು ಜರುಗಿತು.
ಸಾಹಿತ್ಯೋತ್ಸವದಲ್ಲಿ ಎಸ್ಎಸ್ಎಫ್ ಬೆಳ್ಳಾರೆ ಸೆಕ್ಟರಿನ ಬೆಳ್ಳಾರೆ, ತಂಬಿನಮಕ್ಕಿ, ಪೆರುವಾಜೆ, ಪಳ್ಳಿಮಜಲು, ಇಂದ್ರಾಜೆ, ಮಾಲೆಂಗ್ರಿ ಘಟಕಗಳು ಭಾಗವಹಿಸಿದ್ದವು. ಈ ಸಾಹಿತ್ಯೋತ್ಸವದಲ್ಲಿ ಬೆಳ್ಳಾರೆ ಗ್ರಾಮದ ಎಸ್ಎಸ್ಎಫ್ ಪಳ್ಳಿಮಜಲು ಘಟಕ ಸರ್ವಾಂಗೀಣ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು. ಜಿದ್ದಿನ ಹೋರಾಟ ನಡೆಸಿದ ಎಸ್ಎಸ್ಎಫ್ ಬೆಳ್ಳಾರೆ ಘಟಕ ದ್ವಿತೀಯ ಸ್ಥಾನಿಯಾಯಿತು. ಬೆಳ್ಳಾರೆ ಗ್ರಾಮದ ಎಸ್ಎಸ್ಎಫ್ ತಂಬಿನಮಕ್ಕಿ ಘಟಕ ತೃತೀಯ ಸ್ಥಾನ ಪಡೆಯಿತು. ಅತಿಥೇಯ ಎಸ್ಎಸ್ಎಫ್ ಇಂದ್ರಾಜೆ ಘಟಕ ಚತುರ್ಥ ಸ್ಥಾನ ಪಡೆದುಕೊಂಡಿತು.

. . . . . . . . .

ವರದಿ-ಎಂ.ಎ. ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading