ಎಣ್ಣೆಮಜಲು ಅಂಗನವಾಡಿ ಶಾಲೆಗೆ ಕೊಡುಗೆಗಳ ಹಸ್ತಾಂತರ

ಸುಬ್ರಹ್ಮಣ್ಯ ಜುಲೈ 02 : ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಜಂಟಿಯಾಗಿ ಬಳ್ಪ ಸಮೀಪದ ಎಣ್ಣೆಮಜಲು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಪೂರ್ತಿಯಾಗಿ ಬಣ್ಣ ಬೆಳೆಯುವುದು ಹಾಗೂ ಅಂಗನವಾಡಿ ಮಕ್ಕಳಿಗೆ ಕಲರಿಂಗ್ ಬುಕ್, ಕ್ರೇಯಾನ್ಸ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಯಿತು.

. . . . . . . . .

ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋಹಿತ್ ಬಿ.ಬಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಊರಿನ ಹಿರಿಯರಾದ ಎಣ್ಣೆಮಜಲು ಪಟೇಲ್ ಪುಟ್ಟಣ್ಣ ಗೌಡ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಸೌಮ್ಯ ದಿನೇಶ್, ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಜಯಪ್ರಕಾಶ್.ಆರ್, ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್, ಇನ್ನರ್ ವೀಲ್ ನಿಕಟಪೂರ್ವಾಧ್ಯಕ್ಷರಾದ ವಿಮಲ ರಂಗಯ್ಯ, ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ವಿಶ್ವನಾಥ ನಡುತೋಟ, ಗೋಪಾಲ ಎಣ್ಣೆಮಜಲು ವೇದಿಕೆಯಲ್ಲಿದ್ದರು. ಸದಸ್ಯರಾದ ದಿನೇಶ್ ಎಣ್ಣೆಮಜಲು, ಯೋಗಣ್ಣ, ಬಳ್ಪ ಗ್ರಾಮ ಪಂಚಾಯತ್ ಸದಸ್ಯ ಶಶಿಕಲಾ ಸೂಂತಾರು, ಅಂಗನವಾಡಿ ಶಿಕ್ಷಕಿ ಸಿಂಚನ, ಸಹಾಯಕಿ, ಮಕ್ಕಳ ಪೋಷಕರು, ಊರಿನವರು ಹಾಜರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading