ಸುಳ್ಯ : ರಾಜ್ಯಮಟ್ಟದ ಗಾನಶಾರದೆ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಹಾಗೂ ಪ್ರಶಸ್ತಿ ಪ್ರಧಾನ ಮತ್ತು ಸಾಧಕರಿಗೆ ಸನ್ಮಾನ

ಪುತ್ತೂರಿನ ಆರ್.ಪಿ ಕಲಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸುಳ್ಯದ ಶ್ರೀ ಎ.ಎಸ್ ವಿಜಯ 

. . . . . . . . .

ಕುಮಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 21-06-2026 ಭಾನುವಾರ ರಾಜ್ಯಮಟ್ಟದ ಗಾನಶಾರದೆ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಹಾಗೂ ಪ್ರಶಸ್ತಿ ಪ್ರಧಾನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.

. . . . . . .

ಉದ್ಘಾಟನಾ ಸಮಾರಂಭದಲ್ಲಿ ಶ್ರೀಧರ್ ಎಕ್ಕಡ್ಕ ಆರ್.ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇವರ ಸಭಾಧ್ಯಕ್ಷತೆಯಲ್ಲಿ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯಶುಭ ರೈ ಪ್ರಾರ್ಥಿಸಿದರು. ಗೌರವಾನ್ವಿತ ಅತಿಥಿಗಳನ್ನು ಕಾರ್ಯದರ್ಶಿಗಳಾದ ವಿನಯ್ ಕುಮಾರ್ ಅಡ್ಯನಡ್ಕ ಇವರು ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಸಂಜೀವ ಮಠoದೂರು ,ಕೆ.ಕೆ ಅಶೋಕ್ ಪ್ರಭು, ವಿಕ್ರಂ ಅಡ್ಪಂಗಾಯ, ಬಿ.ಚಂದ್ರ ಕಾವು ಬಂಗ್ಲಗುಡ್ಡೆ, ಸುರೇಶ್ ದೇವರಗುಂಡ, ಮಾಧವ ಬೆಳ್ಳಾರೆ, ನಾರಾಯಣ ರೈ ಕುಕ್ಕುವಳ್ಳಿ, ಸುಬ್ರಾಯ ಭಟ್ ನೀರ್ಕಜೆ ಹಾಗೂ ಶ್ರೀಮತಿ ಸಂಧ್ಯಾ ಮಂಡೆಕೋಲು ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು. ನಂತರ ಜೂನಿಯರ್ ವಿಭಾಗ ಹಾಗೂ ಸೀನಿಯರ್ ವಿಭಾಗದ ಸಂಗೀತ ಗಾಯನೋತ್ಸವ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ರೋಹಿತ್ ಕುರಿಕ್ಕಾರ್ ನೆರವೇರಿಸಿದರು.

ಸಂಜೆಯ ಸಮಾರೋಪ ಸಮಾರಂಭದಲ್ಲಿ ಸಭಾ ಅಧ್ಯಕ್ಷರಾದ ರವಿ ಪಾಂಬಾರು ಮುಖ್ಯ ಅತಿಥಿಗಳಾಗಿ ಟಿ.ಎಂ ಶಹೀದ್ ತೆಕ್ಕಿಲ್, ಸದಾನಂದ ಮಾವಜಿ, ಕೆ.ಎಂ ಮುಸ್ತಫ, ಡಾ. ಲೀಲಾಧರ್, ಅಂಗಾರ, ಸುರೇಶ್ ಕಣೆಮರಡ್ಕ, ಹೇಮನಾಥ್ ಶೆಟ್ಟಿ ಕಾವು ಸುಬ್ರಾಯ ಕಲ್ಪಣೆ, ಶಿವಕುಮಾರ್ ಆರಾಧ್ಯ, ರಾಧಾಕೃಷ್ಣ ಬೊಳ್ಳೂರು,ಎಚ್.ಸಿ ಸದಾನಂದ ಬೆಂಗಳೂರು, ರವೀಂದ್ರ ಪ್ರಭು, ಸಂತೋಷ್ ಕುತ್ತಮುಟ್ಟೆ, ಪದ್ಮರಾಜ್ ಬಿ.ಸಿ ಚಾರ್ವಕ, ಸಂತೋಷ್ ಠಾಣಾಧಿಕಾರಿ ಎಚ್.ಭೀಮರಾವ್ ವಾಷ್ಠರ್ ಬೆಂಗಳೂರು ಉಪಸ್ಥಿತರಿದ್ದರು.

ಅತಿಥಿಗಳನ್ನು ಆರ್.ಪಿ ಕಲಾ ಸೇವಾ ಟ್ರಸ್ಟ್ ನ ಸಂಚಾಲಕರಾದ ರವಿ ಪಾಂಬಾರು ಅವರು ಸ್ವಾಗತಿಸಿದರು. ಅತಿಥಿಗಳು ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಫಲಿತಾಂಶವನ್ನು ಘೋಷಿಸಿದರು. ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಭವೀಶ್ ಮೆಸ್ತಾ, ದ್ವಿತೀಯ ಸ್ಥಾನ ಮನೀಶ್ ವಾಲಿ, ತೃತೀಯ ಸ್ಥಾನ ನಮಸ್ವಿ ಭಾಸ್ಕರ್ ಪುತ್ತೂರು. ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಶಶಾಂಕ್ ವಿ ಹೊಳ್ಳ, ದ್ವಿತೀಯ ಸ್ಥಾನ ತುಷಾರ ಶಂಕರ ಉಡುಪಿ, ತೃತೀಯ ಸ್ಥಾನ ಶರಣ್ಯ ವಿ ಹೊಳ್ಳ ಪಡೆದುಕೊಂಡರು. ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಗಾಯಕರಿಗೆ ಪ್ರಮಾಣ ಪತ್ರ ಹಾಗೂ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 05 ಟ್ರೋಫಿ ನೀಡಿ ಗೌರವಿಸಲಾಯಿತು. ಹಾಗೆಯೇ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಾಧಕರಿಗೆ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಪದಾಧಿಕಾರಿಗಳಾದ ಪವಿತ್ರ ಯಂ ಬೆಳ್ಳಿಪ್ಪಾಡಿ, ನವ್ಯ ಅಮ್ಚಿನಡ್ಕ , ಹರೀಶ್ ಪಂಜಿಕಲ್ಲು, ಜಯದಿನೇಶ್ ಸವಣೂರು, ನವ್ಯ.ಕೆ, ಮಮತಾ ಮಡಿಕೇರಿ ಇವರ ಸಮಗ್ರ ನಿರ್ವಹಣೆಯ ಜವಾಬ್ದಾರಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading