ಸಾಹಿತಿ ಭೀಮರಾವ್ ವಾಷ್ಠರ್ ನೇತೃತ್ವದಲ್ಲಿ ಕವಿಗೋಷ್ಠಿ, ಯೋಗ ಪ್ರದರ್ಶನ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಸಮಾರಂಭ

ಸುಳ್ಯದ ಚಂದನ ಸಾಹಿತ್ಯ ವೇದಿಕೆಯ 21ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಚಂದನ ಕವಿಗೋಷ್ಠಿ, ಯೋಗ ಪ್ರದರ್ಶನ ಮತ್ತು ಸಾಹಿತ್ಯ ಕೃತಿ ಬಿಡುಗಡೆ ಸಮಾರಂಭವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ಜೂ. 21ರಂದು ಜರುಗಿತು.

. . . . . . . . .

ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷರಾದ, ನಟ, ನಿರ್ದೇಶಕ, ಸಾಹಿತಿ, ಜ್ಯೋತಿಷಿಯಾದ ಎಚ್.ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು. ಚಂದನ ಕವಿಗೋಷ್ಠಿ 2026 ಇದರ ಅಧ್ಯಕ್ಷತೆಯನ್ನು ಪುತ್ತೂರಿನ ಸಾಹಿತಿ ಫ್ಲಾವಿಯಾ ಅಲ್ಬುಕರ್ಕ್ ಅವರು ವಹಿಸಿದ್ದರು. ಹಿರಿಯ ಸಾಹಿತಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಯವರು ಉದ್ಘಾಟಿಸಿ ಶುಭಹಾರೈಸಿದರು. ಖ್ಯಾತ ಕಲಾವಿದ ಪಟ್ಟಾಭಿರಾಮ್ ಸುಳ್ಯ, ಚಂದನ ಸಾಹಿತ್ಯ ಬಳಗದ ಉಪಾಧ್ಯಕ್ಷೆ ಸಾಹಿತಿ ಅನುರಾಧಾ ಶಿವಪ್ರಕಾಶ್, ಸುದ್ದಿ ಬಿಡುಗಡೆ ವಾರಪತ್ರಿಕೆಯ ಪ್ರಧಾನ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ, ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ ಮುಖ್ಯ ಅತಿಥಿಗಳಾಗಿದ್ದರು. 

. . . . . . .

ಕಾರ್ಯಕ್ರಮದಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸುಬ್ರಹ್ಮಣ್ಯದ ಖ್ಯಾತ ಯೋಗಪಟು ಗೌರಿತ ಕೆ.ಜಿ ರವರು ಯೋಗ ಪ್ರದರ್ಶನ ನೀಡಿದರು. ಕಲಾವಿದ ಪಟ್ಟಾಭಿರಾಮ ಸುಳ್ಯ ರವರು ವಿವಿಧ ಹಾಸ್ಯದ ತುಣುಕುಗಳನ್ನು ಮಿಮಿಕ್ರಿ ಮೂಲಕ ಮನರಂಜಿಸಿದರು. ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ 273ನೇ ಸಾಹಿತ್ಯ ಕೃತಿ ಮನಸು ಮಾತಾಡಿತು ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಫ್ಲಾವಿಯಾ ಅಲ್ಬುಕರ್ಕ್ ಅವರಿಗೆ , ಯೋಗ ಪ್ರದರ್ಶನ ನೀಡಿದ ಗೌರಿತ ಸುಬ್ರಹ್ಮಣ್ಯ ಅವರಿಗೆ, ಮಿಮಿಕ್ರಿ ಮಾಡಿ ನಗಿಸಿದ ಪಟ್ಟಾಭಿರಾಮ ಸುಳ್ಯ ಅವರಿಗೆ ಮತ್ತು ಸಾಹಿತಿ ಸ್ವಾಮೀಜಿ ಅವರಿಗೆ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗಾಯಕಿ ರಶ್ಮಿತಾ ಸುಳ್ಯ ಮತ್ತು ಗಾಯಕ ಸಾಯಿ ಪ್ರಶಾಂತ್ ಕೋಳಿವಾಡ ರವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ನಡೆದ ಚಂದನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಎಂ.ಎ ಮುಸ್ತಫ ಬೆಳ್ಳಾರೆ, ಸುಮಂಗಲ ಲಕ್ಷ್ಮಣ್ ಕೋಳಿವಾಡ, ಹರೀಶ್ ಕಜೆ, ಪೂರ್ಣಿಮಾ ಸಾಲೆತ್ತೂರು, ಆಕಾಶ್ ಉಳ್ಳಾಲ ಮಂಗಳೂರು, ಅನಾರ್ಕಲಿ ಸಲೀಂ ಮಂಗಳೂರು, ಪೂರ್ಣಿಮಾ ತೋಟಪ್ಪಾಡಿ, ಪೆರುಮಾಳ್ ಐವರ್ನಾಡು, ಪುಷ್ಪ ಡಿ ಎಡಮಂಗಲ, ವಿಜಯಕುಮಾರ್ ಕಾಣಿಚ್ಚಾರ್, ಅನುರಾಧಾ ಶಿವಪ್ರಕಾಶ್, ಪ್ರಣವಿ ಎಂ ಅಜ್ಜಾವರ ಮತ್ತು ಸುರೇಶ್ ಬಿಳಿಯೂರು ಕವನ ವಾಚನ ಮಾಡಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು. ಪುಷ್ಪ ನೆರಮಂಗಲ ಪ್ರಾರ್ಥನಾ ಗೀತೆ ಹಾಡಿದರು. ಸುಮಂಗಲ ಕೋಳಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ತೋಟಪ್ಪಾಡಿ ಸ್ವಾಗತಿಸಿದರು. ಅನಾರ್ಕಲಿ ಸಲೀಂ ಅವರು ವಂದಿಸಿದರು. ಸಾಹಿತಿ ವಿಜಯಕುಮಾರ್ ಕಾಣಿಚಾರ್ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading