ಅರಂತೋಡು : ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

ಜೇಸಿಐ ಸುಳ್ಯ ಪಯಸ್ವಿನಿ ಹಾಗೂ ಸುಳ್ಯ ಪೊಲೀಸ್ ಇಲಾಖಾ ವತಿಯಿಂದ  ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ-2026   ಪ್ರಯುಕ್ತ  ಜೂ. 23ರಂದು ನೆಹರು ಸ್ಮಾರಕ ವಿದ್ಯಾಸಂಸ್ಥೆ ಅರಂತೋಡು ಇಲ್ಲಿನ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರವನ್ನು ಸುಳ್ಯ ಪೊಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕ ತಾರನಾಥ್ ಹಾಗೂ ಪ್ರೋಭೇಷನರಿ ಸಹಾಯಕ ಉಪ ನಿರೀಕ್ಷಕ ಕೃಷ್ಣ ಜಿ. ಬಿ, ಯವರು ನಡೆಸಿಕೊಟ್ಟರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿಯ ಅಧ್ಯಕ್ಷ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪಾಪ್ಯುಲರ್ ಫ್ರಂಟ್ ಎಜ್ಯುಕೇಶನ್ ಸೊಸೈಟಿ ಇದರ ಸಂಚಾಲಕ ಅಬ್ದುಲ್ ಅರಂತೋಡು, ಕಾಲೇಜಿನ ಸಂಚಾಲಕ ಎ.ಸಿ. ವಸಂತ್, ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್., ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ತಾರಾ ಮಾದವ ಚೂಂತಾರು ಹಾಗೂ ಕಾರ್ಯಕ್ರಮದ ಸಂಚಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . . . .

ಸಂಸ್ಥೆಯ ಮುಖ್ಯ ಶಿಕ್ಷಕ ಸೋಮಶೇಖರ ಪಿ., ಇವರು ಅತಿಥಿಗಳನ್ನು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮೌಲ್ಯ ಪ್ರಾರ್ಥಿಸಿ,
ಇತಿಹಾಸ ಉಪನ್ಯಾಸಕ ಜೇಸಿ. ಮೋಹನ್ ಚಂದ್ರ ನಿರೂಪಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading