ಗುತ್ತಿಗಾರು : ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ದೇರಪ್ಪಜ್ಜನ ಮನೆ ಅವರಿಗೆ ಬೀಳ್ಕೊಡುಗೆ

ಗುತ್ತಿಗಾರು ಪ್ರಾ.ಕೃ ಪ.ಸ.ಸಂಘದ ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಕೃಷ್ಣ ದೇರಪ್ಪಜ್ಜನ ಮನೆ ಮೇ.30 ರಂದು ಸೇವಾ ನಿವೃತ್ತರಾಗಿದ್ದು, ಸಹಕಾರಿ ಸಂಘ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.  ಬಾಲಕೃಷ್ಣ ದೇರಪ್ಪಜ್ಜನ ಮನೆ  ಮತ್ತು ಮಂಜುಳಾ ದಂಪತಿಗಳನ್ನು  ಸನ್ಮಾನಿಸಿ ಗೌರವಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ಉಪಾಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಮಾಜಿ ಆಧ್ಯಕ್ಷರುಗಳಾದ ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ನಿರ್ದೇಶಕರಾದ ನವೀನ್ ಬಾಳುಗೋಡು, ಕುಂಞ ಬಳ್ಳಕ್ಕ, ವಿನ್ಯಾಸ್ ಕೊಚ್ಚಿ, ರವೀಂದ್ರ ಕಾನಾವು,ಪದ್ಮನಾಭ ಮೀನಾಜೆ, ಜನಾರ್ದನ ನಾಯ್ಕ ಅಚ್ರಪ್ಪಾಡಿ, ಶ್ರೀಮತಿ ತಿಲಕ ಕೋಲ್ಯ, ಶ್ರೀಮತಿ ವಿನುತಾ ಪ್ರಶಾಂತ್ ಜಾಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . .

ಬಾಲಕೃಷ್ಣ ರವರು1989 ರಿಂದ ಸುಧೀರ್ಘ 37 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಕಿರಿಯ ಗುಮಾಸ್ತನಾಗಿ ಕರ್ತವ್ಯಕ್ಕೆ ಸೇರಿದ ಇವರು 2015 ರಿಂದ ಹಿರಿಯ ಗುಮಾಸ್ತನಾಗಿ, 2017 ರಿಂದ ನಗದು ಗುಮಾಸ್ತನಾಗಿ 2024 ರಿಂದ ಉಪ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading