ಎಸ್. ಎಸ್.ಎಲ್.ಸಿ ಮರು ಮೌಲ್ಯಮಾಪನ, ಮರು ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಸುಶ್ಮಿತಾ ಗೆ ಒಟ್ಟು 624 ಅಂಕ – ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ – ಅಂತಿಮ ಮಾರ್ಕ್ಸ್ ಲಿಸ್ಟ್ ನಲ್ಲಿ ಶಿಕ್ಷಣ ಇಲಾಖೆಯಿಂದ ಮತ್ತೆ ಪ್ರಮಾದ…!

ಎಸ್.ಎಸ್.ಎಲ್.ಸಿ‌ ಮರು ಮೌಲ್ಯ ಮಾಪನ ಮತ್ತು ಮರು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆಯುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಸುಶ್ಮಿತಾ 624 ಅಂಕಗಳೊಂದಿಗೆ 
ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿ ಉತ್ತಮ ಸಾಧನೆ ಮಾಡಿದ್ದಾರೆ‌. ಆರಂಭದಲ್ಲಿ ಸುಶ್ಮಿತಾ ಒಟ್ಟು 613 ಅಂಕ ಪಡೆದಿದ್ದರು. ಸಮಾಜ ವಿಜ್ಞಾನದಲ್ಲಿ 95 ಅಂಕ ಪಡೆದಿದ್ದು ಮರು ಮೌಲ್ಯಮಾಪನವಾದಾಗ 99 ಅಂಕ ಪಡೆದರು. ಹಾಗೆ ಒಟ್ಟು 617 ಅಂಕ ಪಡೆದರು. ವಿಜ್ಞಾನ ವಿಷಯವನ್ನು ಮರು ಪರೀಕ್ಷೆ ಬರೆದಾಗ ಪೂರ್ಣ ಅಂಕ ಪಡೆದರು. ಹಾಗೆ 625 ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾರೆ. ಸುಶ್ಮಿತಾ ಅವರು ನಾಲ್ಕೂರು ಗ್ರಾಮದ ಅಂಜೇರಿಯವರಾಗಿದ್ದು ಕೃಷಿಕರಾಗಿರುವ ಸುಬ್ಬಪ್ಪ ಪಾಟಾಳಿ ಮತ್ತು ಶ್ರೀಮತಿ ವೇದಾವತಿ ದಂಪತಿಯ ಪುತ್ರಿ. 
ಶಿಕ್ಷಣ ಇಲಾಖೆಯಿಂದ ಮತ್ತೆ ಪ್ರಮಾದ : ಸುಶ್ಮಿತಾ ಅವರ ಅಂತಿಮ ಅಂಕ ಪಟ್ಟಿಯಲ್ಲಿ ಮರು ಮರು ಮೌಲ್ಯಮಾಪನದ 4 ಹೆಚ್ಚುವರಿ ಅಂಕಗಳು ನಮೂದಾಗದೇ ಟೋಟಲ್ 620 ಎಂದೇ ದಾಖಲಾಗಿದ್ದು, ಈ ಪ್ರಮಾದವನ್ನು ಮತ್ತೆ ಸರಿಪಡಿಸಬೇಕಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading