ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ : 28-05-2026 ಗುರುವಾರ

*01,🐏ಮೇಷ ರಾಶಿ🐏*
📃,ಇಂದು ತೊಡಕುಗಳಿಂದ ಕೂಡಿದ ದಿನವಾಗಿರಲಿದೆ. ಯಾರೋ ಹೇಳಿದ ವಿಷಯದ ಬಗ್ಗೆ ನಿಮಗೆ ಬೇಸರವಾಗುತ್ತದೆ. ನಿಮ್ಮ ನೆರೆಹೊರೆ ಯವರೊಂದಿಗೆ ವಿವಾದಗಳಿಂದ, ದೂರವಿರುವುದು, ಉತ್ತಮ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೀರ್ಘಾವಧಿ ಸಾಲ ಮನ್ನಾ ಆಗಲಿದೆ,
ಗಮನಿಸಿ:-ದೂರ ಪ್ರಯಾಣದ ಸೂಚನೆಗಳಿವೆ, ಪರಿಹಾರ:-ಶ್ರೀಮಹಾಲಕ್ಷ್ಮಿಯನ್ನು ಪೂಜಿಸಿ,

. . . . . . . . .

*02,🐂ವೃಷಭ ರಾಶಿ🐂*
📃,ಇಂದು ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳಿಂದ ನೀವು ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು, ಕುಟುಂಬದ ಹಿರಿಯರಿಂದ ಅಚ್ಚರಿಯ ವಿಷಯಗಳನ್ನು ಕಲಿಯುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ನೀವು ಅಲ್ಪ ಲಾಭವನ್ನು ಪಡೆಯುತ್ತೀರಿ, ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮವಲ್ಲ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾದರೂ ನಿಗದಿತ ಸಮಯಕ್ಕೆ ಪೂರ್ಣಗೊಳಿಸುತ್ತೀರಿ, ಗಮನಿಸಿ:-ಆದಾಯ ಚೆನ್ನಾಗಿರಲಿದೆ,
ಪರಿಹಾರ:-ಅನಾಥರಿಗೆ ಅನ್ನದಾನ ಮಾಡಿ,

. . . . . . .

*03,👥ಮಿಥುನ ರಾಶಿ👥*
📃,ನಿಮ್ಮ ಯಾವುದೇ ಕೆಲಸವು ಹಣದ ಕಾರಣದಿಂದಾಗಿ ಬಾಕಿ ಉಳಿದಿದ್ದರೆ, ಅದನ್ನು ಸಹ ಪೂರ್ಣಗೊಳ್ಳಬಹುದು. ಬಾಲ್ಯ ಮಿತ್ರರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ, ಭಾಗವಹಿಸುತ್ತೀರಿ. ಸ್ಥಿರಾಸ್ತಿ ವಿವಾದಗಳು ಇತ್ಯರ್ಥವಾಗುತ್ತವೆ ಸಮಾಜದಲ್ಲಿ ಹೊಸ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತವೆ. ವ್ಯವಹಾರಗಳನ್ನು ಪ್ರಾರಂಭಿಸಲು, ಸ್ನೇಹಿತರಿಂದ ಹೂಡಿಕೆಗಳನ್ನು, ಸ್ವೀಕರಿಸಲಾಗುತ್ತದೆ,
ಗಮನಿಸಿ:-ಮನೆ ನಿರ್ಮಾಣ, ಕಾರ್ಯಗಳು ವೇಗಗೊಳ್ಳಲಿವೆ,
ಪರಿಹಾರ:-ದನ ಕರುಗಳಿಗೆ ಆಹಾರ ನೀಡಿ, 

*04,🦀ಕಟಕ ರಾಶಿ🦀*
📃,ಈ ದಿನವು ಆಶ್ಚರ್ಯಗಳಿಂದ ತುಂಬಿರುತ್ತದೆ. ನೀವು ಅನಿರೀಕ್ಷಿತ ಬದಲಾವಣೆಗಳನ್ನು ಅನುಭವಿಸಬಹುದು, ಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ. ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು, ದೊರೆಯುತ್ತವೆ ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಗಮನಿಸಿ:-ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ,
ಪರಿಹಾರ:-ದೇವಸ್ತಾನಕ್ಕೆ ತುಳಸಿಯನ್ನು ನೀಡಿ,

*05,🦁ಸಿಂಹ ರಾಶಿ🦁*
📃,ವೃತ್ತಿಪರ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ, ದೂರ ಪ್ರಯಾಣದಲ್ಲಿ ಹೊಸ ಸ್ನೇಹಿತರನ್ನು ಭೇಟಿಮಾಡುತ್ತೀರಿ. ಬಾಲ್ಯ ಸ್ನೇಹಿತರ ನಡುವಿನ ವಿವಾದಗಳು ಬಗೆಹರಿಯುತ್ತವೆ. ಕುಟುಂಬದ ಸದಸ್ಯರನೆರವಿನಿಂದ, ಬಹುಕಾಲದಿಂದ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ,
ಗಮನಿಸಿ:- ಇಂದು ಶಾಂತ ಮನಸ್ಸಿನಿಂದ ಇರಿ,
ಪರಿಹಾರ:-ಕಾಳಿಕಾದೇವಿಯ ದರ್ಶನ ಮಾಡಿ,

 *06,👩‍🦳ಕನ್ಯಾ ರಾಶಿ👩‍🦳*
📃,ನಿಮ್ಮ ಕೆಲಸದ ಬಗ್ಗೆ ಇಂದು ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಹಠಾತ್ ಆರ್ಥಿಕ ಲಾಭದಿಂದ ಸಂತೋಷವಾಗಿರುತ್ತೀರಿ. ಬಂಧುಗಳಿಂದ ಅನಿರೀಕ್ಷಿತ ಆಹ್ವಾನಗಳು ಬರುತ್ತವೆ. ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಹಣಕಾಸಿನ ತೊಂದರೆಗಳನ್ನು ನಿವಾರಿಸಲಾಗುತ್ತದೆ. ಎಲ್ಲಾ ಕಡೆಯಿಂದ ಆದಾಯಬರುತ್ತದೆ, ಗಮನಿಸಿ:-ಉದ್ಯೋಗಿಗಳು ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ,
ಪರಿಹಾರ:- ನಿಮ್ಮ ಗ್ರಾಮ ದೇವತೆಯನ್ನು ನೆನೆಯಿರಿ,

*07,⚖️ತುಲಾ ರಾಶಿ⚖️*
📃,ಮನೆ ನಿರ್ಮಾಣ ವಿಷಯದಲ್ಲಿ ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ಹೊಸ ಉದ್ಯೋಗ ಪ್ರಯತ್ನಗಳು ವೇಗಗೊಳ್ಳಲಿವೆ, ಹೊಸ ವಾಹನ ಸೌಖ್ಯವಿದೆ. ಹಣಕಾಸಿನ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದಾಯ ತೃಪ್ತಿಕರವಾಗಿರುತ್ತದೆ. ಆತ್ಮೀಯ ಸ್ನೇಹಿತರೊಂದಿಗೆ ಸಾಮರಸ್ಯದಿಂದ ವ್ಯವಹರಿಸುತ್ತೀರಿ. ಉದ್ಯೋಗಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತದೆ, ಗಮನಿಸಿ:-ಬಾಲ್ಯದ ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ,
ಪರಿಹಾರ:-ತಾಯಿ ಚಾಮುಂಡೇಶ್ವರಿಯ ಪ್ರಾರ್ಥನೆ ಮಾಡಿ,

*08,🦂ವೃಶ್ಚಿಕ ರಾಶಿ🦂*
📃,ನಿಮ್ಮ ಕೆಲಸದಲ್ಲಿ ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರ ವಾಗಿರುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗಿ ಅಲ್ಪ ಲಾಭ ದೊರೆಯುತ್ತದೆ. ಉದ್ಯೋಗಿಗಳಿಗೆ, ಅಧಿಕಾರಿಗಳ ಸಹಾಕಾರದಿಂದ, ಬಡ್ತಿ ಹೆಚ್ಚಾಗುತ್ತದೆ,
ಗಮನಿಸಿ:-ಕೈಗೆತ್ತಿಕೊಂಡ ಕೆಲಸಗಳು ನಿಧಾನವಾಗಿ ಸಾಗುತ್ತವೆ,
ಪರಿಹಾರ:-ನಿಮ್ಮ ಮನೆದೇವರ ಸ್ಮರಣೆ ಮಾಡಿ,

*09,🏹ಧನಸ್ಸು ರಾಶಿ🏹*
📃,ನಿಮ್ಮ ಹಣ ಕಳೆದು ಹೋದರೆ, ನೀವು ಅದನ್ನು ಮರಳಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಸಂಗಾತಿಯ ಸಲಹೆತೆಗೆದು ಕೊಳ್ಳುವುದು ಒಳ್ಳೆಯದು. ವೃತ್ತಿಪರ ಉದ್ಯೋಗಗಳಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ಸಹೋದರ ರೊಂದಿಗೆ, ಸೌಹಾರ್ದತೆಯಿಂದ ವರ್ತಿಸುತ್ತೀರಿ. ಕೈಗೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ, ಗಮನಿಸಿ:-ಉದ್ಯೋಗದ ವಾತಾವರಣವು, ಶಾಂತಿಯುತವಾಗಿರುತ್ತದೆ,
ಪರಿಹಾರ:-ಗ್ರಾಮ ದೇವತೆಗೆ ಪೂಜೆ ಮಾಡಿಸಿ,

*10,🐊ಮಕರ ರಾಶಿ🐊*
📃,ಇಂದು ಅತ್ಯಂತ ಯಶಸ್ವಿ ಮತ್ತು ಫಲಪ್ರದ ದಿನವಾಗಲಿದೆ. ಕೆಲವು ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ನೀವು ಪಡೆಯುತ್ತೀರಿ, ವೃತ್ತಿ ಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹಣಕಾಸಿನ ಸಮಸ್ಯೆಗಳಿಂದ, ಹೊರಬರುತ್ತೀರಿ. ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಮಕ್ಕಳ ವಿಷಯಗಳಲ್ಲಿ ಶುಭ ಸುದ್ದಿ ಇರುತ್ತದೆ. ಎಲ್ಲ ಕ್ಷೇತ್ರಗಳಿಗೂ ಆದಾಯ ಹೆಚ್ಚಾಗುತ್ತದೆ,
ಗಮನಿಸಿ:-ದೈವಿಕ ಚಿಂತನೆ ಹೆಚ್ಚಾಗುತ್ತದೆ,
ಪರಿಹಾರ:-ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ,

*11,⚱️ಕುಂಭ ರಾಶಿ⚱️*
📃,ನೀವು ಯಾರ ಮಾತನ್ನೂ ಅತಿಯಾಗಿ ನಂಬಬಾರದು ಮತ್ತು ಕೇಳದೆ ಯಾರಿಗೂ ಸಲಹೆ ನೀಡಬಾರದು. ಕುಟುಂಬ ಸದಸ್ಯರೊಂದಿಗಿನ ವಿವಾದಗಳನ್ನು ರಾಜಿಮಾಡಿ ಕೊಳ್ಳುತ್ತೀರಿ. ಸಮಾಜದ ಹಿರಿಯರೊಂದಿಗಿನ, ಪರಿಚಯಗಳು ವಿಸ್ತಾರಗೊಳ್ಳುತ್ತವೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ, ಗಮನಿಸಿ:-ನಿರುದ್ಯೋಗಿಗಳುಉತ್ತಮ ಅವಕಾಶಗಳನ್ನು ಪಡೆಯುತ್ತಾರೆ,
ಪರಿಹಾರ:-ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ,

*12,🐬ಮೀನ ರಾಶಿ🐬*
📃,ಇಂದು ನಿಮ್ಮ ಗೌರವದ ಹೆಚ್ಚಳದಿಂದ ಸಂತೋಷವಾಗಿರುತ್ತೀರಿ. ಉದ್ಯೋಗಿಗಳಿಗೆ ಹೊಸಪ್ರೋತ್ಸಾಹ ದೊರೆಯುತ್ತದೆ. ಹಣಕಾಸಿನ, ವ್ಯವಹಾರ ಸುಗಮವಾಗಿ ಸಾಗುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ದೂರಪ್ರಯಾಣ ಕೈಗೊಳ್ಳುತ್ತೀರಿ,
ಗಮನಿಸಿ:-ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ,
ಪರಿಹಾರ:-ಶ್ರೀ ಆಂಜನೇಯ ಸ್ತೋತ್ರ ಪಠಿಸಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading