ಸುಳ್ಯದ ಭಾರತ್ ಸಿನೆಮಾಸ್ ನಲ್ಲಿ ನಿರಂತರ ಅತ್ಯುತ್ತಮ ಸಿನೆಮಾಗಳ ಪ್ರದರ್ಶನ

ಸುಳ್ಯದ ಸಿನಿಪ್ರಿಯರಿಗೆ ಹಲವಾರು ವರ್ಷಗಳ ಕಾಲ ರಸದೌತಣವನ್ಬು ನೀಡಿದ್ದ ಸಂತೋಷ್ ಥಿಯೇಟರ್ ನೂತನ ಆಡಳಿತದಲ್ಲಿ ಸಿನೆಮಾ ಮಂದಿರದಲ್ಲಿ ಹೊಸ ಅಧ್ಯಾಯಗಳನ್ನು ಆರಂಭಿಸುವ ಸಲುವಾಗಿ ಭಾರತ್ ಸಿನೆಮಸ್ ಎಂಬ ನವನಾಮದಲ್ಲಿ ನವ ವಿನ್ಯಾಸಗಳಿಗೆ ತೆರೆದುಕೊಂಡಿದೆ. ಇದೀಗ ನಿರಂತರ ಸಿನೆಮಾಗಳ ಪ್ರದರ್ಶನ ಆರಂಭಗೊಂಡಿದ್ದು, ಜನರು ತಂಡೋಪತಂಡವಾಗಿ ಬಂದು ಸಿನೆಮಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರತೀ ದಿನ ಮಧ್ಯಾಹ್ನ 1:15 ರಿಂದ 4:15 ರವರೆಗೆ, ರಾತ್ರಿ 7:15 ರಿಂದ 10:15 ರವರೆಗೆ ಗಜಾನನ ಕ್ರಿಕೆಟರ್ಸ್ ಜಂತೊಟ್ಟು(since-1985) ಎಂಬ ತುಳು ಸಿನೆಮಾ, ಮಧ್ಯಾಹ್ನ 1:30 ರಿಂದ 4:30 ರವರೆಗೆ ಮತ್ತು ರಾತ್ರಿ 7:30 ರಿಂದ 10:30 ರವರೆಗೆ ದೃಶ್ಯಂ-3(ಮಲಯಾಳಂ 2ಡಿ) ಸಿನೆಮಾ, ಸಂಜೆ 4:30ಕ್ಕೆ ಅದಿರಡಿ(ಮಲಯಾಳಂ 2ಡಿ) ಸಿನೆಮಾ, ಮಧ್ಯಾಹ್ನ 1:30 ರಿಂದ 7:30 ಮತ್ತು 10:15ಕ್ಕೆ ಕರುಪ್ಪು(ತಮಿಳು 2ಡಿ) ಸಿನೆಮಾ ಪ್ರದರ್ಶನಗೊಳ್ಳುತ್ತಿದೆ.
ಸುಳ್ಯದಲ್ಲಿರುವ ಭಾರತ್ ಸಿನೆಮಾಸ್ ಚಿತ್ರ ಪ್ರೇಮಿಗಳ ಮನಸೂರೆಗೊಂಡು ಮುನ್ನಡೆಯುತ್ತಿದೆ. ಬುಕ್ ಮೈ ಶೋ ಆ್ಯಪ್ ನಲ್ಲಿ ಮುಖಾಂತರ ಇಲ್ಲಿ ಪ್ರದರ್ಶನಗೊಳ್ಳುವ ಸಿನೆಮಾಗಳ ಮಾಹಿತಿಗಳು ದೊರೆಯಲಿವೆ. ಮತ್ತು ಇಲ್ಲಿ ಪ್ರದರ್ಶನಗೊಳ್ಳುವ ಪ್ರತಿಯೊಂದು ಸಿನೆಮಾಗಳಿಗೆ ಜನರ ಪ್ರತಿಕ್ರಿಯೆ ನೋಡಿ ಸಿನೆಮಾಗಳು ದಿನ ಕಾಣಲಿವೆ ಎಂದು ಸುಳ್ಯದ ಭಾರತ್ ಸಿನೆಮಾಸ್ ನವರು ತಿಳಿಸಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading