ಕುಕ್ಕೆ ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ಸ್ವಾಸ್ಥ್ಯ ತರಬೇತಿ – “ಮೊಬೈಲ್ ವ್ಯಾಮೋಹ ತ್ಯಜಿಸಿ ಗುರಿಯತ್ತ ಸಾಗಿದರೆ ಭವಿಷ್ಯ ಉಜ್ವಲ” : ಶ್ರೀಮತಿ ರೇಖಾರಾಣಿ ಸೋಮಶೇಖರ್ ಅಭಿಮತ

ಸುಬ್ರಹ್ಮಣ್ಯ : “ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಮೊಬೈಲ್ ನ ಬಗ್ಗೆ ಆಕರ್ಷಿತರಾಗುವುದು ಸರ್ವೇಸಾಮಾನ್ಯ ವಾಗಿದೆ. ಮೊಬೈಲ್ ವ್ಯಾಮೋಹ ತ್ಯಜಿಸಿ ಗುರಿಯತ್ತ ಸಾಗಿದರೆ ಬದುಕು ಉಜ್ವಲವಾಗುತ್ತದೆ. ಆಧುನಿಕ ತಂತ್ರಜ್ಞಾನಗಳನ್ನು ನಮ್ಮ ಜ್ಞಾನಾಭಿವೃದ್ದಿಗೆ ಪೂರಕವಾಗಿ ಉಪಯೋಗಿಸುವತ್ತ ಯುವ ವಿದ್ಯಾರ್ಥಿಗಳು ಮುಂದಡಿಯಿಡಬೇಕು” ಎಂದು ಹಿರಿಯ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಶ್ರೀಮತಿ ರೇಖಾರಾಣಿ ಸೋಮಶೇಖರ್ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿನಿಯರಿಗೆ ನಡೆದ ಆರೋಗ್ಯ ಮತ್ತು ಸ್ವಾಸ್ಥ್ಯ ತರಭೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮಾಹಿತಿ : ಆರೋಗ್ಯ ವೃದ್ದಿಗೆ ಅನುಸರಿಸಬೇಕಾದ ಕ್ರಮ, ಮಹಿಳಾ ಸಬಲೀಕರಣ, ವಿದ್ಯಾರ್ಜನೆಯ ಮಹತ್ವ, ಆರೋಗ್ಯ ಜಾಗೃತಿ, ಸ್ವಚ್ಚತೆ, ಗುರಿ ನಿರ್ವಹಣೆ ಇತ್ಯಾದಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ರೇಖಾರಾಣಿ ಸೋಮಶೇಖರ್ ಮಾಹಿತಿ ನೀಡಿದರು.
ಉಪನ್ಯಾಸಕಿಯರಾದ ಸೌಮ್ಯಕೀರ್ತಿ, ಮಾನಸಾ ಭಟ್ ವೇದಿಕೆಯಲ್ಲಿದ್ದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading