ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ – “ಭಗವಂತನ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವುದು ಭಾಗ್ಯ” : ಸೋಮಶೇಖರ್ ನಾಯಕ್ ಅಭಿಮತ

ಸುಬ್ರಹ್ಮಣ್ಯ : “ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದು ಭಾಗ್ಯ. ಭಗವಂತನ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಶ್ರೇಷ್ಠ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು.ಶ್ರೀ ದೇವರ ಪ್ರಸಾದ ಬೋಜನ ಸೇರಿದಂತೆ ಅಧ್ಯಾಯನಕ್ಕೆ ಬೇಕಾದ ಸಕಲ ಸೌಕರ್ಯಗಳು ಶ್ರೀ ದೇವರ ಕೃಪೆಯಾಗಿದೆ. ಕಳೆದ ಐದು ದಶಕಗಳಿಂದ ಅಸಂಖ್ಯಾತ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಔನತ್ಯ ಸಾಧಿಸಿದ ಉದಾಹರಣೆ ಸಹಸ್ರಾರು ಇದೆ. ಆದುದರಿಂದ ನೂತನವಾಗಿ ವಿದ್ಯಾಸಂಸ್ಥೆಗೆ ಆಗಮಿಸಿದ ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರಮದಿಂದ ಅಧ್ಯಾಯನ ಮಾಡಿ ಉನ್ನತಿಯನ್ನು ಸಾಧಿಸಬೇಕು” ಎಂದು ಎಸ್‌.ಎಸ್‌.ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಹೇಳಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌.ಎಸ್‌.ಪಿ.ಯು ಕಾಲೇಜಿನಲ್ಲಿ ನಡೆದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು “ವಿದ್ಯೆ ಅನ್ನುವುದು ಬದುಕಿಗೆ ಅತ್ಯವಶ್ಯಕ. ಆದ್ದರಿಂದ ಕಠಿಣ ಪರಿಶ್ರಮದ ವ್ಯಾಸಂಗದತ್ತ ಸರ್ವರೂ ಪ್ರಧಾನ ಆಧ್ಯತೆ ನೀಡಬೇಕು ಎಂದರು.
ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಗುಣವರ್ಧನ ಕೆದಿಲ ಮುಖ್ಯ ಅತಿಥಿಗಳಾಗಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ರೇಖರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕರಾದ ಜಯಪ್ರಕಾಶ್.ಆರ್, ದೈಹಿಕ ಶಿಕ್ಷಣ ಉಪನ್ಯಾಸಕರಾದ ರಾಧಾಕೃಷ್ಣ ಚಿದ್ಗಲ್, ಉಪನ್ಯಾಸಕರಾದ ಜಯಶ್ರೀ.ವಿ.ದಂಬೆಕೋಡಿ, ಗಿರೀಶ್, ಜಯಪ್ರಕಾಶ್.ಆರ್, ಶ್ರೀಧರ್ ಪುತ್ರನ್, ಮನೋಜ್ ಕುಮಾರ್ ಬಿ.ಎಸ್, ಜ್ಯೋತಿ ಪಿ.ರೈ, ಯೋಗಣ್ಣ ಎಂ.ಎಸ್, ಸವಿತಾ ಕೈಲಾಸ್, ಸುಧಾ, ಪೂರ್ಣಿಮಾ, ಪ್ರವೀಣ್ ಎರ್ಮಾಯಿಲ್, ಸೌಮ್ಯಾ ದಿನೇಶ್, ಶ್ರುತಿ ಅಶ್ವಥ್, ಭವ್ಯಶ್ರೀ ಕುಲ್ಕುಂದ, ಸೌಮ್ಯಕೀರ್ತಿ, ಮಾನಸ ಭಟ್ ವೇದಿಕೆಯಲ್ಲಿದ್ದರು.
ಉಪನ್ಯಾಸಕರಾದ ರತ್ನಾಕರ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಮಹೇಶ್ ಕೆ.ಎಚ್, ಹನುಮಂತಪ್ಪ ಗಡದವರ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆ ಮೂಲಕ ವಿದ್ಯಾಸಂಸ್ಥೆಗೆ ಸ್ವಾಗತಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading