ಬೆಳ್ಳಾರೆ : ಪಳ್ಳಿಮಜಲು ಮಸೀದಿಯಲ್ಲಿ ಸ್ವಲಾತ್ ಮಾಸಿಕ ಮಜ್ಲಿಸ್

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ)ನಾಮದ ಜುಮುಅ: ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ವಿಷಯ ಮಂಡನೆಯು ಮೇ 24ರಂದು ಆದಿತ್ಯವಾರ ಆಸ್ತಮಿಸಿದ ಸೋಮವಾರ ಮುಸ್ಸಂಜೆಯಿಂದ ರಾತ್ರಿ 9:30ಯ ವರೆಗೆ ನಡೆಯಿತು.ಮಗ್ರಿಬ್(ಮುಸ್ಸಂಜೆ)ನಮಾಝಿನ ನಂತರ 7 ಘಂಟೆಗೆ ಸ್ವಲಾತ್ ಆರಂಭವಾಯಿತು.ಪಳ್ಳಿಮಜಲು ಮಸೀದಿಯ ಖತೀಬ್ ಮತ್ತು ಇಲ್ಲಿನ ಸಿರಾಜುಲ್ ಹುದಾ ಸೆಕೆಂಡರಿ ಮದರಸದ ಮುಖ್ಯೋಪಾಧ್ಯಾಯ ಮುಹಮ್ಮದ್ ಸವಾದ್ ಮದನಿ, ಈ ಮಸೀದಿಯ ಮುಅದ್ಸಿನ್ ಮತ್ತು ಇಲ್ಲಿರುವ ಮದರಸದ ಅಧ್ಯಾಪಕ ಹಬೀಬುರ್ರಹ್ಮಾನ್ ಹಿಮಮಿ ಸ್ವಲಾತ್ ಸಂಘಟಿಸಿದರು.ಇಶಾ: ನಮಾಝಿನ ನಂತರ ಪೈಚಾರು ಜುಮುಅ: ಮಸೀದಿಯ ಖತೀಬರಾದ ಕೆ.ಎ.ಹೈದರಲಿ ಸಅದಿ ಕುಕ್ಕಿಲ ವಿಷಯ ಮಂಡಿಸಿದರು.ನಂತರ ಲೋಖೋನ್ನತಿಗಾಗಿ ಪ್ರಾರ್ಥನೆ ನಡೆಯಿತು.ವಿಷಯ ಮಂಡನೆ ನಡೆಯುವಾಗ ಮಜ್ಲಿಸಿನಲ್ಲಿ ಪಳ್ಳಿಮಜಲು ಮಸೀದಿಯ ಖತೀಬ್ ಮುಹಮ್ಮದ್ ಸವಾದ್ ಮದನಿ,ಮದರಸ ಅಧ್ಯಾಪಕ ಹಬೀಬುರ್ರಹ್ಮಾನ್ ಹಿಮಮಿ,ಪಳ್ಳಿಮಜಲು ಮಸೀದಿಯ ಆಡಳಿತ ಸಮಿತಿ ಪದಾಧಿಕಾರಿಗಳು,ಪಳ್ಳಿಮಜಲು ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬೂಡು,ಪಳ್ಳಿಮಜಲು ಸ್ವಲಾತ್ ಕಮಿಟಿ ಅಧ್ಯಕ್ಷ ಮೂಸಾ ಬೂಡು ಉಪಸ್ಥಿತಿಯಲ್ಲಿದ್ದರು.ಹೊರಭಾಗದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿತ್ತು.ಮಸೀದಿ ಖತೀಬ್ ಮುಹಮ್ಮದ್ ಸವಾದ್ ಮದನಿ ಸ್ವಾಗತಿಸಿದ್ದರು.ಕೊನೆಯಲ್ಲಿ ತಬರ್ರುಖ್ ವಿತರಣೆಯು ನಡೆದಿತ್ತು.ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading