ಅಡ್ತಲೆ : ಜತೆಗಿದ್ದ ಆನೆ ದಾಳಿ ಶಂಕೆ – ಹೆಣ್ಣು ಆನೆ ಮರಿ ಸಾವು

ಅಮರ ಸುಳ್ಯ ಸುದ್ದಿ E ಪತ್ರಿಕೆ ಓದಲು ಈ ಲಿಂಕ್ ಬಳಸಿ https://epaper.amarasuddi.com/
ಕ್ಷಣ ಕ್ಷಣದ ಸುದ್ದಿಗಳಿಗಾಗಿ www.amarasuddi.com ವೀಕ್ಷಿಸಿ

. . . . . . . . .

ಅರಂತೋಡು ಗ್ರಾಮದ ಅಡ್ತಲೆ ಬೆದ್ರುಪಣೆ ಸಮೀಪ ಕಾಡಾನೆಯ ದಾಳಿಗೆ ಜತೆಗಿದ್ದ ಮರಿಯಾನೆ ಮೃತಪಟ್ಟ ಘಟನೆ ಕಳೆದ ರಾತ್ರಿ ನಡೆದಿದೆ. ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬೆದ್ರುಪಣೆ ಭಾಗದಲ್ಲಿ ಆನೆಗಳು ಕೃಷಿಗೆ ದಾಳಿ ನಡೆಸುತ್ತಿರುವ ಮಾಹಿತಿ ಮೇರೆಗೆ ಟಾಸ್ಕ್ ಫೋರ್ಸ್ ತಂಡ ಹಾಗೂ ಊರವರು ಆನೆಗಳನ್ನು ಕಾಡಿಗೆ ಅಟ್ಟಿದ್ದರು. ಆದರೇ ಮತ್ತೆ 3 ಗಂಟೆ ವೇಳೆಗೆ ಕಾಡಾನೆಗಳು ತೋಟಕ್ಕೆ ದಾಳಿ ಮಾಡಿದ್ದವು. ಆ ವೇಳೆ ಇತರ ಆನೆಯ ಹೊಡೆತದಿಂದ ಹೆಣ್ಣು ಮರಿ ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸುಳ್ಯ ಅರಣ್ಯಾಧಿಕಾರಿ  ಮಂಜುನಾಥ್ ಎನ್., ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈಲ್ಡ್ ಲೈಫ್ ವಿಭಾಗದ ಪಶು ವೈಧ್ಯಾಧಿಕಾರಿ ಡಾ. ಯಶಸ್ವಿ ಯವರು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಆನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading