ಬೆಳ್ಳಾರೆ-ಬೂಡು-ಉಪ್ಪಂಗಳ-ಪಾಠಾಜೆ ರಸ್ತೆಯ ಕಾಂಕ್ರೀಟೀಕರಣ ಪೂರ್ಣ-ಜೂನ್ 12ಕ್ಕೆ ಉದ್ಘಾಟನೆ

ಬೆಳ್ಳಾರೆ ಗ್ರಾಮದ ಉಮಿಕ್ಕಳ ವಾರ್ಡ್ ಸಂಖ್ಯೆ 143ರ ಬೂಡು-ಉಪ್ಪಂಗಳ-ಪಾಠಾಜೆ ರಸ್ತೆಯು ಮರು ಡಾಮರೀಕರಣಗೊಳ್ಳದೆ ಸುಮಾರು 14 ವರುಷಗಳೇ ಕಳೆದು ಹೋಗಿದ್ದವು.ಈ ರಸ್ತೆಯಲ್ಲಿ ಕಳೆದ ಹಲವಾರು ವರುಷಗಳಿಂದ ಪಾದಾಚಾರಿಗಳು ಮತ್ತು ವಾಹನ ಸವಾರರು ಹೇಳ ತೀರದ ಬವಣೆ ಅನುಭವಿಸಿ ಸಾಗುತ್ತಿದ್ದರು‌ ಮತ್ತು ಮೂರು ತಿಂಗಳ ಹಿಂದೆ ಈ ರಸ್ತೆಯ ಎದ್ದು ಹೋಗಿರುವ ರೀತಿಗಳಿಗೆ ಒಂದು ನೂರು ಮೀಟರು ಮಣ್ಣು ಹಾಕಿದ್ದರಿಂದ ಈ ರಸ್ತೆಯು ಪೂರ್ತಿ ಧೂಳುಮಯವಾಗಿ ಸಂಚಾರ ಕಷ್ಟಕರವಾಗಿತ್ತು.ಈ ರಸ್ತೆಯ ಅವ್ಯವಸ್ಥಿತ ರೀತಿಯ ಕುರಿತು ಈ ರಸ್ತೆಯ ಫಲಾನುಭವಿ ಎಂ. ಎ. ಮುಸ್ತಫಾ ಬೆಳ್ಳಾರೆಯವರು ಕೆಲವು ವರುಷಗಳ ಹಿಂದೆ ಅಂದಿನ ಶಾಸಕ ಮತ್ತು ಮಾಜಿ ಸಚಿವ ಅಂಗಾರ ಅವರಿಗೂ,ಇಂದಿನ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಅವರಿಗೂ ಮನವಿ ತಿಳಿಸಿದ್ದರು.ಎರಡು ವರುಷಗಳಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ಸಭೆಗಳಲ್ಲೂ,ಅಧ್ಯಕ್ಷರ ಕಛೇರಿಯಲ್ಲೂ,ಸದಸ್ಯರನ್ನೂ ಕಂಡು ಸ್ಪಂದನೆಗೆ ಕೋರಿದ್ದರು.ಈ ವಾರ್ಡಿನ ಇತರ ಪ್ರಮುಖರು ಬೆಳ್ಳಾರೆ ಗ್ರಾಮ ಪಂಚಾಯತ್ ಸಭೆಗಳಲ್ಲಿ ಮತ್ತು ಇತರ ಸಮಯಗಳಲ್ಲಿ ಧ್ವನಿ ಎತ್ತಿದ್ದರು.  ಸುಮಾರು ಎಂಭತ್ತು ಮನೆಗಳಿಗೆ ಸಂಪರ್ಕ ಹಾಗೂ ಪಳ್ಳಿಮಜಲು ಮಸೀದಿ,ಬೂಡು ಶ್ರೀ ಅಡ್ಯಂತಾಯ ದೈವಚಾವಡಿ,ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ, ಪಾಠಾಜೆ ಸ. ಕಿ. ಪ್ರಾ ಶಾಲೆಯನ್ನೂ ಸಂಪರ್ಕಿಸಿ ಸಾಗುವ ರಸ್ತೆಯಾಗಿದ್ದು ಇದು ಇದೀಗ ಕಾಂಕ್ರೀಟಿಕರಣಗೊಂಡಿದೆ.ಈ ರಸ್ತೆಯ ಕಾಂಕ್ರೀಟಿಕರಣಕ್ಕೆ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯರವರು ಸಿ.ಎಮ್.ಐ.ಡಿ.ಪಿ ಯೋಜನೆಯಡಿಯಲ್ಲಿ ರೂ ಹತ್ತು ಲಕ್ಷ,ಎಸ್.ಸಿ.ಎಸ್.ಟಿ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ ಎಂಟು ಲಕ್ಷ ಹಾಗೂ ಮಲೆನಾಡು ಪರಿಹಾರ ಯೋಜನೆ ಅಡಿಯಲ್ಲಿ ರೂ 5.5 ಲಕ್ಷ ಹೀಗೆ ಒಟ್ಟು ರೂ.  23.5 ಲಕ್ಷ ಅನುದಾನವನ್ನು ಒದಗಿಸಿಕೊಟ್ಟಿದ್ದರು. ಈ  ರಸ್ತೆಯ ಉದ್ಘಾಟನೆಯು ಜೂ.12ರಂದು ನಡೆಯಲಿದೆ ಎಂದು ತಿಳಿದು ಬಂದಿದೆ. ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading