ಇಂದಿನ(ಮೇ 23) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ದರದಲ್ಲಿ ಮುಂದುವರಿದ ಕುಸಿತ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 23 ಮೇ 2026
ವಾರ : ಶನಿವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 23) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 415 ರಿಂದ 455
ಹಳೆ ಅಡಿಕೆ : 430 ರಿಂದ 535
ಡಬಲ್ ಚೋಲ್ : 430 ರಿಂದ 535
ಫಟೋರಾ : 340 ರಿಂದ 390
ಉಳ್ಳಿಗಡ್ಡೆ : 270 ರಿಂದ 290
ಕರಿಗೋಟು : 255 ರಿಂದ 285
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಇಂದು(ಮೇ 23) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಪ್ರಮುಖ ಪ್ರಬೇಧಗಳ ಬೆಲೆಗಳು ಸ್ಥಿರವಾಗಿದ್ದರೂ, ಉಪ ಉತ್ಪನ್ನವಾದ ‘ಫಟೋರಾ’ ಬೆಲೆಯಲ್ಲಿ ₹5 ರಷ್ಟು ಕುಸಿತ ದಾಖಲಾಗಿದೆ. ಉಳಿದೆಲ್ಲಾ ಅಡಿಕೆ ತಳಿಗಳು ನಿನ್ನೆಯ(ಮೇ 22) ದರದಲ್ಲೇ ಮುಂದುವರಿದಿವೆ.
ಮುಖ್ಯ ಅಡಿಕೆ ಧಾರಣೆ ಸ್ಥಿರತೆ : ಸತತ ಇಳಿಕೆಯ ಬಳಿಕ ಹೊಸ ಅಡಿಕೆ ಗರಿಷ್ಠ ₹455 ಹಾಗೂ ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳು ತಮ್ಮ ಗರಿಷ್ಠ ಬೆಲೆ ₹535 ರಲ್ಲೇ ಮುಂದುವರಿದು ಇಂದು ಕೂಡ ಸ್ಥಿರವಾಗಿವೆ.
ಫಟೋರಾ ಇಳಿಕೆ : ನಿನ್ನೆ ಗರಿಷ್ಠ ₹395 ರಷ್ಟಿದ್ದ ಫಟೋರಾ ಬೆಲೆಯು ಇಂದು ಇಂದು ಕೂಡ ಇಳಿಕೆಯಾಗಿ ₹390 ಕ್ಕೆ ತಲುಪಿದೆ. ಆರಂಭಿಕ ಬೆಲೆಯೂ ₹340 ಕ್ಕೆ ಕುಸಿದಿದೆ.
ಉಪ ಉತ್ಪನ್ನಗಳು : ಉಳ್ಳಿಗಡ್ಡೆ ಮತ್ತು ಕರಿಗೋಟು ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 565 ರಿಂದ 665
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 130 ರಿಂದ 152
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ಇಂದು(ಮೇ 23) ಕ್ಯಾಂಪ್ಕೋ ಕೃಷಿ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದೆ. ನಿನ್ನೆಯ(ಮೇ 22) ದರಕ್ಕೆ ಹೋಲಿಸಿದರೆ ಕಾಳುಮೆಣಸು, ಕೊಬ್ಬರಿ ಹಾಗೂ ಕೊಕ್ಕೋ ಬೆಲೆಗಳಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ.
ಕಾಳುಮೆಣಸು ಸ್ಥಿರತೆ : ಕಳೆದ ದಿನಗಳಲ್ಲಿ ಸತತ ಕುಸಿತ ಕಂಡಿದ್ದ ಕಾಳುಮೆಣಸು ಇಂದು ಗರಿಷ್ಠ ₹665 ರ ಮಟ್ಟದಲ್ಲೇ ಮುಂದುವರಿದು ಸ್ಥಿರತೆ ಕಾಯ್ದುಕೊಂಡಿದೆ.
ಕೊಬ್ಬರಿ ಧಾರಣೆ : ಕೊಬ್ಬರಿ ಬೆಲೆಯಲ್ಲಿ ಇಂದು ಕೂಡ ಯಾವುದೇ ಬದಲಾವಣೆ ಆಗದೆ ಗರಿಷ್ಠ ₹152 ರಲ್ಲೇ ವ್ಯವಹಾರ ನಡೆದಿದೆ.
ಕೊಕ್ಕೋ ಬೆಲೆ : ಹಸಿ ಕೊಕ್ಕೋ ಗರಿಷ್ಠ ₹105 ಮತ್ತು ಒಣ ಕೊಕ್ಕೋ ಗರಿಷ್ಠ ₹320 ರಷ್ಟಾಗಿದ್ದು, ನಿನ್ನೆಯ ದರದಲ್ಲೇ ಮುಂದುವರಿದಿದೆ.

ರಬ್ಬರ್ ಧಾರಣೆ
ಗ್ರೇಡ್ : 246
ಲಾಟ್ : 205
ಸ್ಕ್ರ್ಯಾಪ್ ಪ್ರಥಮ ದರ್ಜೆ : 143
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 133
ಇಂದು(ಮೇ 23) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಾದಿ ಮುಂದುವರಿದಿದೆ. ನಿನ್ನೆಯ(ಮೇ 22) ದರಕ್ಕೆ ಹೋಲಿಸಿದರೆ ಎಲ್ಲಾ ವಿಧದ ರಬ್ಬರ್ ಬೆಲೆಗಳು ಮತ್ತಷ್ಟು ಕೆಳಕ್ಕೆ ಇಳಿದಿದ್ದು, ವಿಶೇಷವಾಗಿ ಗ್ರೇಡ್ ಮತ್ತು ಲಾಟ್ ರಬ್ಬರ್ ಬೆಲೆಗಳು ಇಂದು ಕೂಡ ಕೆಜಿಗೆ ₹1 ರಿಂದ ₹2 ರವರೆಗೆ ಇಳಿಕೆ ದಾಖಲಿಸಿವೆ.
ಗ್ರೇಡ್ ರಬ್ಬರ್ ಕುಸಿತ : ನಿನ್ನೆ ₹247 ರಷ್ಟಿದ್ದ ಗ್ರೇಡ್ ರಬ್ಬರ್ ಬೆಲೆ ಇಂದು ಮತ್ತೊಂದು ರೂಪಾಯಿ ಇಳಿಕೆಯಾಗಿ ₹246 ಕ್ಕೆ ತಲುಪಿದೆ.
ಲಾಟ್ ರಬ್ಬರ್ : ಲಾಟ್ ರಬ್ಬರ್ ಧಾರಣೆಯಲ್ಲಿ ₹2 ರಷ್ಟು ಇಳಿಕೆ ದಾಖಲಾಗಿದ್ದು, ಇಂದು ₹205 ಕ್ಕೆ ವ್ಯವಹಾರ ನಡೆದಿದೆ.
ಸ್ಕ್ರ್ಯಾಪ್ ರಬ್ಬರ್ : ಪ್ರಥಮ ಮತ್ತು ದ್ವಿತೀಯ ದರ್ಜೆ ಎರಡೂ ಸ್ಕ್ರ್ಯಾಪ್ ರಬ್ಬರ್‌ಗಳ ಬೆಲೆಯಲ್ಲಿ ತಲಾ ₹2 ರಷ್ಟು ಕುಸಿತ ಉಂಟಾಗಿದ್ದು, ಕ್ರಮವಾಗಿ ₹143 ಮತ್ತು ₹133 ಕ್ಕೆ ಇಳಿಕೆಯಾಗಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading