ಕುಕ್ಕೆ ಸುಬ್ರಹ್ಮಣ್ಯ : ಆಶ್ಲೇಷ ನಕ್ಷತ್ರ ಹಿನ್ನೆಲೆ ಭಕ್ತಾದಿಗಳಿಂದ ದಾಖಲೆಯ 2,500 ಮಿಕ್ಕಿ ಆಶ್ಲೇಷ ಬಲಿ ಸೇವೆ

ಸುಬ್ರಹ್ಮಣ್ಯ ಮೇ 22 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಅಧಿಕ ಸಂಖ್ಯೆಯ ಭಕ್ತಾದಿಗಳು ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದು ಬೆಳಿಗ್ಗೆಯ ಏಳು ಬ್ಯಾಚ್‌ಗಳಲ್ಲಿ ಸುಮಾರು 2,500 ಮಿಕ್ಕಿ ಆಶ್ಲೇಷ ಬಲಿ ಸೇವೆಯನ್ನು ಸಲ್ಲಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯನ ನಕ್ಷತ್ರವು ಆಶ್ಲೇಷವಾಗಿದ್ದರಿಂದ ಆಶ್ಲೇಷ ಬಲಿ ಸೇವೆ ಹರಕೆ ಹೊತ್ತ ಭಕ್ತಾದಿಗಳು ಏಕಾದಶಿ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಆಶ್ಲೇಷ ಬಲಿ ಸೇವೆ ನಡೆಯುತ್ತದೆ. ತಿಂಗಳಿನಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಹೆಚ್ಚಿನ ಭಕ್ತರು ಅದೇ ದಿನ ಬಂದು ಸೇವೆ ಸಲ್ಲಿಸುವಂಥದ್ದು ಸಾಮಾನ್ಯವಾಗಿದೆ. ಆಶ್ಲೇಷ ಬಲಿಯು ದಿನಂಪ್ರತಿ ಬೆಳಗ್ಗೆ ಗಂಟೆ 6:30ಕ್ಕೆ ಆರಂಭವಾಗಿ 3 ಬ್ಯಾಚ್ ಹಾಗೂ ಸಂಜೆ ಗಂಟೆ 5:00ಕ್ಕೆ ಒಂದು ಬ್ಯಾಚ್‌ನೊಂದಿಗೆ ಸೇವೆ ನಡೆಯುತ್ತದೆ. ಆದರೆ ಇಂದು ದಾಖಲೆ ಸಂಖ್ಯೆಯ ಆಶೇಷಬಲಿ ಸೇವೆ ಆಗಿರುವುದು ವಿಶೇಷವಾಗಿದೆ. ನಾಗದೋಷ, ಕಾಳಸರ್ಪದೋಷ, ಮದುವೆಯಾಗದಿರುವುದು, ಮಕ್ಕಳಾಗದಿರುವುದು, ವ್ಯಾಪಾರ ವೃದ್ಧಿ, ಆರೋಗ್ಯ ವೃದ್ಧಿ, ಮನಕ್ಲೇಶಗಳು, ಭೂಮಿಯ ಸಂಬಂಧಿತ ವ್ಯಾಜ್ಯಗಳು, ನೀರು, ಮನಃಶಾಂತಿ ಇತ್ಯಾದಿಗಳಿಗೆ ಆಶ್ಲೇಷ ಬಲಿ ಸೇವೆಯನ್ನು ಭಕ್ತರು ಬಂದು ಸಲ್ಲಿಸುತ್ತಾರೆ. ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತಾದಿಗಳು ಮುಂಜಾನೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಅಲ್ಲಿಂದ ಶ್ರೀ ದೇವಳದಲ್ಲಿ ಆಶ್ಲೇಷ ಬಲಿ ರಶೀದಿ ಮಾಡಿಸಿ, ಸಂಕಲ್ಪ ಮಂದಿರದಲ್ಲಿ ಸಂಕಲ್ಪ ಮಾಡಿಸಿ, ತದನಂತರ ಆಶ್ಲೇಷ ಬಲಿ ನಡೆಯುವ ಅಂಗಣಕ್ಕೆ ಸರತಿ ಸಾಲಿನಲ್ಲಿ ತೆರಳು ತೆರಳುವುದಾಗಿದೆ. ದಿನದ ಬೆಳಗ್ಗೆಯ ಮೂರೂ ಬ್ಯಾಚ್‌ಗಳಲ್ಲಿ ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಸೇವೆ ಸಲ್ಲಿಸುತ್ತಾರೆ. ಉಳಿದವರು ಸಂಜೆ ಬ್ಯಾಚ್‌ಗೆ ಹಾಜರಾಗಿ ಸೇವೆ ಸಲ್ಲಿಸಲು ವ್ಯವಸ್ಥೆ ಇರುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading