“ರಾಜ್ಯ ಮಟ್ಟದ ಪ್ರಕೃತಿ ಅಧ್ಯಯನ ಚಾರಣ ಶಿಬಿರ 2026” – ಸಮಾರೋಪ ಸಮಾರಂಭ – “ಪ್ರಕೃತಿ ಅಧ್ಯಯನ ಚಾರಣದಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು” – ಡಾ| ಪಿ.ಜಿ ಆರ್ ಸಿಂಧ್ಯ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಸಹಭಾಗಿತ್ವದಲ್ಲಿ ದಿನಾಂಕ 16-05-2026 ರಿಂದ 20-05-2026 ರವರೆಗೆ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ರಾಜ್ಯ ಮಟ್ಟದ ಪ್ರಕೃತಿ ಅಧ್ಯಯನ ಚಾರಣ ಶಿಬಿರ 2026 ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 20-05-2026 ರಂದು ಕುಮಾರಸ್ವಾಮಿ ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಶ್ರೀ ಮಾಧವ ಬಿ.ಕೆ ಇವರು ವಹಿಸಿಕೊಂಡರು.
ರಾಜ್ಯ ಮುಖ್ಯ ಆಯುಕ್ತರಾದ ಡಾ| ಪಿ.ಜಿ.ಆರ್ ಸಿಂಧ್ಯರವರು ಮಾತನಾಡಿ “ಪ್ರಕೃತಿ ಅಧ್ಯಯನ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಮತ್ತು ತಿಳುವಳಿಕೆಯ ಜ್ಞಾನವನ್ನು ಮೂಡಿಸುವಲ್ಲಿ ಹೆಚ್ಚಿನ ಮಹತ್ತರ ಪಾತ್ರವಹಿಸುತ್ತದೆ. ಇಂತಹ ವಿಶೇಷ ಶಿಬಿರವನ್ನು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಂಘಟಿಸುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ರಾಜ್ಯ ಸಂಘಟನಾ ಆಯುಕ್ತರಾದ ಎಂ.ಪ್ರಭಾಕರ್ ಭಟ್ , ದ.ಕ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ವಿಮಲ ರಂಗಯ್ಯ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಕಾನತ್ತೂರು, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷರಾದ ಗಣೇಶ್ ನಾಯರ್, ಸಂಚಾಲಕರಾದ ಚಂದ್ರಶೇಖರ್ ನಾಯರ್, ಜಿಲ್ಲಾ ಕಾರ್ಯದರ್ಶಿಗಳಾದ ಪ್ರತೀಮ್ ಕುಮಾರ್, ಜಿಲ್ಲಾ ಸ್ಕೌಟ್ ಸಹಾಯಕ ಆಯುಕ್ತರಾದ ದೇವಿಪ್ರಸಾದ್ ಜಾಕೆ, ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ, ಪಂಜ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಿಬಿರದ ನಾಯಕರಾದ ಉದಯಕುಮಾರ್ ರೈ.ಎಸ್ ಬಾಳಿಲ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಡಾ| ಪಿ.ಜಿ ಆರ್ ಸಿಂಧ್ಯ, ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷರಾದ ಗಣೇಶ್ ನಾಯರ್ ಮತ್ತು ಸಂಚಾಲಕರಾದ ಚಂದ್ರಶೇಖರ್ ನಾಯರ್ ಇವರನ್ನು ಅಭಿನಂದಿಸಲಾಯಿತು.
ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಶಿಬಿರದಲ್ಲಿ ರಾಜ್ಯದ 17 ಜಿಲ್ಲೆಯಿಂದ 21 ಸ್ಕೌಟ್ಸ್, 05 ಗೈಡ್ಸ್, 42 ರೋವರ್ಸ್, 34 ರೇಂಜರ್ಸ್ ಮತ್ತು 07 ದಳ ನಾಯಕರುಗಳು ಒಟ್ಟು 109 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading