ಉತ್ತರ ಕನ್ನಡದ ಭಟ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಶ್ವಿಜ್ ಅತ್ರೇಯ ಸುಳ್ಯ

ಮೇ16 : Inspire Dance Crew, Bhatkala ಇದರ 5ನೇ ವರ್ಷದ “ಸಂಭ್ರಮ “2026 Shining Night” ರಾಜ್ಯ ಮಟ್ಟದ ಸಂಗೀತ ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಅಶ್ವಿಜ್ ಅತ್ರೇಯ ಸುಳ್ಯ ಇವರು ಪ್ರಥಮ ಸ್ಥಾನ ಪಡೆದು ಟ್ರೋಫಿ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಆಡಿಷನ್, ಮೆಗಾ ಆಡಿಷನ್, ಸೆಮಿ ಫಿನಾಲೆ ಹಂತಗಳಿಂದ ಆಯ್ಕೆಯಾಗಿ ಫಿನಾಲೆ ಹಂತದಲ್ಲಿ ಟಾಪ್ 10 ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ ತನ್ನ ಅತ್ಯದ್ಭುತ ಗಾಯನ ಪ್ರದರ್ಶನದಿಂದ ಭಟ್ಕಳದ ಜನರ ಮನಸನ್ನು ಗೆದ್ದು ಪ್ರಥಮ ಸ್ಥಾನ ಪಡೆದು ಜಯಶಾಲಿಯಾಗಿ ವಿನ್ನರ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಇವರು ಪ್ರಭು ಬುಕ್ ಸೆಂಟರ್ ನ ಮಾಲಕರಾದ ರಾಮಚಂದ್ರ ಹಾಗೂ ಉಷಾ ಕುಮಾರಿ ದಂಪತಿಗಳ ಪುತ್ರರಾಗಿದ್ದು, ಗಾನಸಿರಿ ಕಿರಣ್ ಕುಮಾರ್ ಪುತ್ತೂರು, ಶ್ರೀ ಹರ್ಷ ಮೈಸೂರು, ಅಶ್ವಿನಿ ಬೆಂಗಳೂರು, ಶ್ರೀ ಲಕ್ಷ್ಮೀ ಹಾಗೂ ಈಶ್ವರ ಭಟ್ ಕಾಂಚನ ಇವರಲ್ಲಿ ಸಂಗೀತ ಅಭ್ಯಾಸ ಮಾಡುತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading