ಸುಬ್ರಹ್ಮಣ್ಯ : ಸಂಸ್ಕೃತ ಸರಳ ಪರೀಕ್ಷಾ ಪ್ರಶಸ್ತಿ ಪತ್ರ ವಿತರಣೆ ಸಮಾರಂಭ

ಸಂಸ್ಕೃತ ಭಾರತಿ ವತಿಯಿಂದ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದ “ಸಂಸ್ಕೃತ ಸರಳ ಪರೀಕ್ಷೆ”ಯ ಪ್ರಶಸ್ತಿ ಪತ್ರ ವಿತರಣೆ ಸಮಾರಂಭವು ಮೇ.19ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಸರ್ವೇಶ್ವರ ಕೇಕುಣ್ಣಯ ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಕೃತ ಗುರುಗಳಾದ ಶ್ರೀಮತಿ ಸ್ವರ್ಣಲತಾ ಅವರು ಸಂಸ್ಕೃತ ಭಾರತಿಯ ಕಾರ್ಯಪರಿಚಯವನ್ನು ನೀಡಿದರು. ಸಂಸ್ಕೃತ ಭಾಷೆಯ ಮಹತ್ವ, ಭಾರತೀಯ ಸಂಸ್ಕೃತಿಯೊಂದಿಗೆ ಅದರ ಅವಿನಾಭಾವ ಸಂಬಂಧ ಹಾಗೂ ಇಂದಿನ ಪೀಳಿಗೆಗೆ ಸಂಸ್ಕೃತ ಕಲಿಕೆಯ ಅಗತ್ಯತೆಯನ್ನು ಅವರು ಸ್ಪಷ್ಟವಾಗಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಮಾರಸ್ವಾಮಿ ವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀಮತಿ ಪ್ರಮೀಳಾ ಅವರು ಮಾತನಾಡಿ “ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಭಾರತೀಯ ಜ್ಞಾನ ಪರಂಪರೆಯ ಮೂಲಾಧಾರವಾಗಿದೆ” ಎಂದು ಹೇಳಿದರು. “ಹಿಂದಿನ ಕಾಲದಲ್ಲಿ ವಿದ್ಯೆ, ಶಾಸ್ತ್ರ, ಆಯುರ್ವೇದ, ಯೋಗ ಹಾಗೂ ಧಾರ್ಮಿಕ ಗ್ರಂಥಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿದ್ದು, ಸಂಸ್ಕೃತ ಕಲಿಕೆಯ ಮೂಲಕ ಭಾಷಾ ಶುದ್ಧತೆ, ಉತ್ತಮ ಸಂಸ್ಕಾರ, ಸೌಜನ್ಯ ಹಾಗೂ ಚಿಂತನಾ ಶಕ್ತಿ ವೃದ್ಧಿಯಾಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಸರ್ವೇಶ್ವರ್, ಶ್ರೀಮತಿ ಶೋಭಾ ನಲ್ಲೂರಾಯ, ಶ್ರೀಮತಿ ಕೃಪಾ ಸುಬ್ರಹ್ಮಣ್ಯ, ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಶ್ರೀಮತಿ ಆಶಾ.ವಿ ಶೆಣೈ, ಪದ್ಮ, ವನಜ ಭಟ್, ಶೀಲಾ, ಮನಸ್ವಿ, ಅಪೂರ್ವ, ಆರಾಧ್ಯ, ಹನೀಕ್ಷಾ ಸೇರಿದಂತೆ ಅನೇಕರು ಭಾಗವಹಿಸಿ ಪ್ರಶಸ್ತಿ ಪತ್ರ ಸ್ವೀಕರಿಸಿದರು.
ಶ್ರೀಮತಿ ಶ್ರೀಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading