ನೆಲ್ಲೂರು ಕೆಮ್ರಾಜೆ : ಭೀಕರ ಗಾಳಿ ಮಳೆಗೆ ಮರ ಬಿದ್ದು ನೆಲಸಮಗೊಂಡ ತೋಟ – 05 ವಿದ್ಯುತ್ ಕಂಬಗಳು ಧರಾಶಾಹಿ

ಸುಳ್ಯ ತಾಲೂಕಿನಾದ್ಯಂತ ಅಬ್ಬರಿಸುತ್ತಿರುವ ಮುಂಗಾರು ಪೂರ್ವ ಗಾಳಿ ಮಳೆಯು ಭಾರಿ ಆಸ್ತಿಪಾಸ್ತಿ ನಷ್ಟವನ್ನುಂಟುಮಾಡಿದ್ದು, ರೈತರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಬಿರುಗಾಳಿಯ ಹೊಡೆತಕ್ಕೆ ಬೃಹತ್ ಮರವೊಂದು ಕೃಷಿ ತೋಟದ ಮೇಲೆ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಬೆಳೆ ಸಂಪೂರ್ಣ ನಾಶವಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ನಿವಾಸಿ ರಾಜಾರಾಮ್ ನಾಯಕ್ ವೈ ಎಂಬುವವರ ತೋಟದಲ್ಲಿದ್ದ ದೈತ್ಯ ಮರವೊಂದು ಏಕಾಏಕಿ ಬುಡಮೇಲಾಗಿ ಕೃಷಿ ಭೂಮಿಗೆ ಉರುಳಿದೆ. ಇದರ ತೀವ್ರತೆಗೆ ತೋಟದಲ್ಲಿದ್ದ 40ಕ್ಕೂ ಅಧಿಕ ಫಲಭರಿತ ಅಡಿಕೆ ಮರಗಳು ಹಾಗೂ 7 ಕ್ಕೂ ಹೆಚ್ಚು ತೆಂಗಿನ ಮರಗಳು ಮುರಿದು ಬಿದ್ದು ಸಂಪೂರ್ಣ ಧರಾಶಾಹಿಯಾಗಿವೆ. ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ ತೋಟ ಕಣ್ಣೆದುರೇ ನಾಶವಾಗಿರುವುದರಿಂದ ಕೃಷಿಕ ರಾಜಾರಾಮ್ ನಾಯಕ್ ಅವರಿಗೆ ಸುಮಾರು 1 ಲಕ್ಷ ರೂ. ಗೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ. ಅಲ್ಲದೇ ಮರ ಉರುಳಿ ಬಿದ್ದ ರಭಸಕ್ಕೆ ತೋಟದ ಸಾಲಿನಲ್ಲಿದ್ದ ಒಟ್ಟು ೫ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ಲೈನ್ ಕಟ್ ಆಗಿ ಇಡೀ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸಂತ್ರಸ್ತ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading