ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಡಬ್ಲ್ಯೂ.ಎಫ್.ಎಫ್ ಕರ್ನಾಟಕ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ – 2026 : 26 ಎಪ್ರಿಲ್ 2026 ಆದಿತ್ಯವಾರದಂದು ಬೆಂಗಳೂರಿನ ಸುರನ ಕಾಲೇಜು ಪೀಣ್ಯದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು. 10 ರಿಂದ 14 ವರ್ಷದ ಹುಡುಗಿಯರ ವಿಭಾಗದಲ್ಲಿ ಜಿಶಾ ಕೆ. ಕೆ ಕಲಾತ್ಮಕ ವೈಯಕ್ತಿಕ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಮತ್ತು ಸಂಪ್ರದಾಯಕ ವಿಭಾಗದಲ್ಲಿ 6ನೇ ಸ್ಥಾನ, ಹವೀಕ್ಷ ಎಸ್.ಆರ್ 9ನೇ ಸ್ಥಾನ ಗಳಿಸಿ 05 ರಿಂದ 09 ವರ್ಷದ ಹುಡುಗಿಯರ ವಿಭಾಗದಲ್ಲಿ ಶೈನಿ ಕೆ.ಕೆ 7ನೇ ಸ್ಥಾನ ಪಡೆದು ಉತ್ತರಖಂಡದಲ್ಲಿ ಜೂನ್ 26 ರಿಂದ 28ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ಇವರು ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading