ಕು. ಶಶಿಕಲಾ ಟಿ. ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿ ನಡೆದ 60ನೇ ಘಟಿಕೋತ್ಸವದಲ್ಲಿ ಸಸ್ಯ ಜೈವಿಕಾ ತಂತ್ರಜ್ಞಾನ (Plant Biotechnology) ವಿಭಾಗದಲ್ಲಿ  ಕು. ಶಶಿಕಲಾ ಟಿ.  ಇವರು ಪಿ ಹೆಚ್ ಡಿ ಪದವಿ ಪಡೆದಿದ್ಸು,  ಕರ್ನಾಟಕ ರಾಜ್ಯಪಾಲರಿಂದ ಪದವಿ ಸ್ವೀಕರಿಸಿದರು.

. . . . . . . . .

ಇವರು “Development of CRISPR / Cas 12a and Cas 13a based diagnosis for tomato leaf curl virus and groundnut bud necrosis virus” ವಿಷಯದಲ್ಲಿ ಸಂಶೋಧನೆ ಮಾಡಿ ಪ್ರಬಂಧ ಮಂಡಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಸ ಹಿ ಪ್ರಾ ಶಾಲೆ ದೇವಚಳ್ಳ, ಪ್ರೌಢ ಶಿಕ್ಷಣವನ್ನು ಬ್ಲೆಸ್ಸ್ಡ್ ಕುರಿಯಕೋಸ್ ಗುತ್ತಿಗಾರಿನಲ್ಲಿ ಪದವಿ ಶಿಕ್ಷಣ ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು, ಬಿ ಎಸ್. ಸಿ ಅಗ್ರಿಕಲ್ಚರ್ ಬಯೋಟೆಕ್ನಾಲಜಿ ಹಾಸನ, ಎಂ ಎಸ್ ಸಿ ಅಗ್ರಿಯನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಗಿಸಿದ್ದು, ಬೆಂಗಳೂರಿನ ಜಿ ಕೆ ವಿ ಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪಿ ಹೆಚ್ ಡಿ ಪದವಿಯನ್ನು ಪಡೆದಿರುತ್ತಾರೆ. ಇವರು ದೇವಚಳ್ಳ ಗ್ರಾಮದ ತಳೂರು ದಿ. ಕುಶಾಲಪ್ಪ ಗೌಡ ಹಾಗೂ ಪುಷ್ಪಾವತಿ ಯವರ ಪುತ್ರಿಯಾಗಿದ್ದು ಪ್ರಸ್ತುತ Tata institute for genetics and society (TIGS) ಅಲ್ಲಿ ಸಂಶೋಧನಾ ಸಂಸ್ಥೆಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಉದ್ಯೋಗಿಯಾಗಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading